ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಯಶ್, ಜಯಪ್ರದಾ, ಬೋನಿ ಕಪೂರ್ ಮುಖ್ಯ ಅತಿಥಿಗಳು

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.

Published: 22nd February 2020 04:53 PM  |   Last Updated: 22nd February 2020 04:53 PM   |  A+A-


yash-jaya

ಯಶ್ - ಜಯಪ್ರದಾ

Posted By : Lingaraj Badiger
Source : UNI

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
  
ಇದೇ 26ರಂದು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ. ಎಸ್‍. ಯಡಿಯೂರಪ್ಪ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ರಾಕಿಂಗ್ ಸ್ಟಾರ್ ಯಶ್‍, ಹಿರಿಯ ನಟಿ ಜಯಪ್ರದಾ, ಬಾಲಿವುಡ್ ನ ಹೆಸರಾಂತ ನಿರ್ಮಾಪಕ ಬೋನಿ ಕಪೂರ್, ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಪಾಲ್ಗೊಳ್ಳಲಿದ್ದಾರೆ.
  
ಕನ್ನಡ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ್ದು, ಉದ್ಘಾಟನಾ ಚಿತ್ರವಾಗಿ “ಸಿನಿಮಾ ಖಾರ್” ಪ್ರದರ್ಶನಗೊಳ್ಳಲಿದೆ ಎಂದರು.  
  
ಮುಕ್ತಾಯ ಸಮಾರಂಭ ಮುಂದಿನ ತಿಂಗಳು ಮಾರ್ಚ್ 4 ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ಏಷ್ಯಾ, ಭಾರತೀಯ ಹಾಗೂ ಕನ್ನಡದ ಅತ್ಯುತ್ತಮ ಚಿತ್ರಗಳಿಗೆ ರಾಜ್ಯಪಾಲ ವಜುಭಾಯ್ ವಾಲಾ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
  
ಮುಕ್ತಾಯ ಚಲನಚಿತ್ರವಾಗಿ ಇಸ್ರೇಲಿನ ಇವೆಗಿನಿ ರುಮಾನ್ ನಿರ್ದೇಶನದ “ಗೋಲ್ಡನ್ ವಾಯ್ಸಸ್” ಚಲನಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಸುನಿಲ್ ಪುರಾಣಿಕ್ ಮಾಹಿತಿ ನೀಡಿದರು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp