ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ' ತಂತ್ರಜ್ಞಾನ ಒಳ್ಳೆಯದೇ ಕೆಟ್ಟದೇ?

ಸಿನೆಮಾ‌ ಜಗತ್ತಿನಲ್ಲಿ ಹೊಸಹೊಸ ತಂತ್ರಜ್ಞಾನಗಳು‌ ಬರುತ್ತಲೇ ಇವೆ. ಇತ್ತೀನ "ಕೃತಕ ಬುದ್ದಿಮತ್ತೆ" ಬಳಕೆ ಬಗ್ಗೆ ತಂತ್ರಜ್ಞರು‌ ಉತ್ಸಾಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನೆಮಾ ಅಕಾಡೆಮಿ ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು‌ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿನೆಮಾ‌ ಜಗತ್ತಿನಲ್ಲಿ ಹೊಸಹೊಸ ತಂತ್ರಜ್ಞಾನಗಳು‌ ಬರುತ್ತಲೇ ಇವೆ. ಇತ್ತೀನ "ಕೃತಕ ಬುದ್ದಿಮತ್ತೆ" ಬಳಕೆ ಬಗ್ಗೆ ತಂತ್ರಜ್ಞರು‌ ಉತ್ಸಾಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನೆಮಾ ಅಕಾಡೆಮಿ ಇದರ ಬಗ್ಗೆ ಹೆಚ್ಚು ಮಾಹಿತಿ ನೀಡಲು‌ ಮುಂದಾಗಿದೆ.

"ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಸಂದರ್ಭದಲ್ಲಿ "ಆರ್ಟಿಫಿಶೀಯಲ್ ಇಂಟೆಲಿಜೆನ್ಸಿ" ಬಗ್ಗೆ ಚರ್ಚೆ ಆಯೋಜಿಸಿದ್ದೇವೆ. ಇದರಲ್ಲಿ‌ ನಿಪುಣತೆ ಹೊಂದಿರುವ ತಂತ್ರಜ್ಞರು ಭಾಗವಹಿಸುತ್ತಾರೆ. ಈ ಸಂದರ್ಭದಲ್ಲಿ ಇದರ ಸಾಧಕಗಳ ಜತೆಗೇ ಬಾಧಕಗಳ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಚಿತ್ರೋತ್ಸವ ಕಲಾ ನಿರ್ದೇಶಕ ವಿದ್ಯಾಶಂಕರ್ ಹೇಳಿದರು.

ಹೊಸ ತಂತ್ರಜ್ಞಾನ ಬಂದಾಗ ಸಿನೆಮಾಗಳಲ್ಲಿ ಅದನ್ನು ಬಳಸುವ ಉತ್ಸಾಹ - ಭರಾಟೆ ಹೆಚ್ಚು. ಇದರಿಂದ‌ ಇಂಡಿಪೆಂಡೆಂಟ್ ಸಿನೆಮಾಗಳ ನಿರ್ಮಾಣಕ್ಕೆ ಬಾಧಕವಾಗುತ್ತದೆಯೇ ಎಂಬ ಅಂಶವನ್ನೂ ಪರಿಶೀಲಿಸಬೇಕಾಗುತ್ತದೆ.  ಭಾರತೀಯ ಚಿತ್ರರಂಗ ಇಂಥ ತಂತ್ರಜ್ಞಾನಕ್ಕೆ ರೆಡ್ ಕಾರ್ಪೇಟ್ ಸ್ವಾಗತ ನೀಡುವ ಮುನ್ನ ಈ ಎಲ್ಲ ಮಗ್ಗುಲುಗಳ ಬಗ್ಗೆಯೂ ಅರಿಯಬೇಕಾಗುತ್ತದೆ ಎಂದು ಅವರು ವಿವರಿಸಿದರು

ತಂತ್ರಜ್ಞಾನಗಳು ಮಾನವ ದೈಹಿಕ ಪರಿಶ್ರಮವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಆರ್ಟಿಫಿಶಿಯಕ್ ಇಂಟೆಲಿಜೆನ್ಸಿ ಬಳಕೆ, ಸಿನೆಮಾ ತಂತ್ರಜ್ಞರ ಬೌದ್ಧಿಕ‌ ಪರಿಶ್ರಮವನ್ನೂ ಕಡಿಮೆ ಮಾಡುತ್ತದೆ. ಹಾಲಿವುಡ್ ಸಿನೆಮಾಗಳಲ್ಲಿ ಇಂಥ‌  ಸಿನೆಮಾಗಳು ಸಾಲುಗಟ್ಟಿ ಬರುತ್ತವೆ. ಕೆಲವು ಮಾರುಕಟ್ಟೆಯಲ್ಲಿ ಭಾರಿ ಯಶಸ್ಸು ಗಳಿಸಿವೆ.ಇದೇ ಪ್ರವೃತ್ತಿ ಹೆಚ್ಚಾದರೆ ಅದು ಮುಖ್ಯವಾಗಿ ಸೃಜನಶೀಲತೆಗೆ ಧಕ್ಕೆಯುಂಟು ಮಾಡಬಹುದು‌ ಎಂಬುದು ಸಿನೆಮಾ ಚಿಂತಕರ ಆತಂಕ.

ಸಿನೆಮಾ ಮೂಲಭೂತವಾಗಿ ಹೊಸಹೊಸ ತಂತ್ರಜ್ಞಾನ ಬೇಡುವ ಕ್ಷೇತ್ರ. "ಆರ್ಟಿಫೀಶಿಯಲ್ ಇಂಟೆಲಿಜೆನ್ಸಿ" ಆವರಿಸಿಕೊಂಡರೆ ತಮ್ಮ ಬೌದ್ಧಿಕ ಪರಿಶ್ರಮದಿಂದ ಚಿತ್ರದ‌ ಮೆರುಗನ್ನು ಹೆಚ್ಚಿಸುವ ಪರಿಣಿತರ ಸಹಾಯ ಪಡೆಯುವುದೂ ಕಡಿಮೆಯಾಗುತ್ತದೆ. ಇದೂ‌ ಸಹ ಸಿನೆಮಾದ ಒಟ್ಟಾರೆ ಗುಣಮಟ್ಟದ ಮೇಲೂ ನಕರಾತ್ಮಕ ಪರಿಣಾಮ ಬೀರಬಹುದು ಎಂಬ ಚಿಂತನೆ‌ ಇದೆ.

ಇಂಡಿಪೆಂಡೆಂಟ್ ಸಿನೆಮಾಗಳಲ್ಲಿ‌ ಕಂಟೆಂಟ್ ಪ್ರಧಾನವಾಗಿರುತ್ತದೆ. ಇಂಥ ಸಿನೆಮಾಗಳು ಪ್ರೇಕ್ಷಕರನ್ನೂ ಆಲೋಚನೆಗೆ ಹಚ್ಚುತ್ತವೆ. ಕೃತಕ ಬುದ್ದಿಮತ್ತೆ ಸಿನೆಮಾ ತಂತ್ತಜ್ಞಾನ ಬಳಕೆ ದೃಷ್ಟಿಯಿಂದ ಶ್ರೀಮಂತ ಎನಿಸಿದರೂ ಇದೇ ಕ್ರೇಜ್ ಹೆಚ್ಚಾದರೆ ಸೃಜನಾತ್ಮಕ ಚಿತ್ರಗಳನ್ನು ನಿರ್ಮಿಸುವ ಮನೋಭಾವದ ಮೇಲೂ ಪರಿಣಾಮ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.

ಸಿನೆಮಾಗಳಲ್ಲಿ "ಕೃತಕ ಬುದ್ದಿಮತ್ತತೆ" ಬಳಕೆ ಬಗ್ಗೆ ಜಗತ್ತಿನಾದ್ಯಂತ ಸೃಜನಶೀಲ ಸಿನೆಮಾಗಳಲ್ಲಿ ತೊಡಗಿಸಿಕೊಂಡವರು, ಸಿನೆ ವಿಮರ್ಶಕರು ವ್ಯಕ್ತಪಡಿಸುತ್ತಿರುವ ಆತಂಕಕ್ಕೆ ಅರ್ಥವಿಲ್ಲ ಎಂದು ವಾದಿಸುವವರೂ ಇದ್ದಾರೆ. ಇಂಥ ತಂತ್ರಜ್ಞಾನಗಳು ಸಮುದ್ರದ ಅಲೆಯಂತೆ. ಈ ಅಲೆ ದೊಡ್ಡದಾಗಿ ಕಾಣಬಹುದು, ಆದರೆ ಇದು ತಾತ್ಕಾಲಿಕ ಎನ್ನುತ್ತಾರೆ.

"ಸ್ಪೈಡರ್ ಮ್ಯಾನ್'' 'ಮಾರ್ಬೇಲ್' ' 'ವಂಡರಿಂಗ್ ಅರ್ಥ್' , 'ಅಲಿಟಾ ಬ್ಯಾಟಲ್ ಏಂಜೆಲ್', 'ಜೆಕ್ಸಿ', ಇತ್ಯಾದಿ ಸಿನೆಮಾಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಆಧರಿಸಿದ ಸಿನೆಮಾಗಳು.ಜಗತ್ತಿನಾದ್ಯಂತ ಇವು ಮಾಡಿರುವ ಮೋಡಿ ಅಪಾರ. ಇದೇ ಮಾದರಿಯ ಸಿನೆಮಾಗಳನ್ನು ಮಾಡಲು ನಿರ್ಮಾಣ ಕ್ಷೇತ್ರ ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ‌ ಇಂಥ ಚರ್ಚೆ ಚಾಲ್ತಿಗೆ ಬಂದಿದೆ.‌ಇದರ ಬಗ್ಗೆ ಆಸಕ್ತಿ ಉಳ್ಳವರು ಫಿಲ್ಮ್ ಫೆಸ್ಟಿವಲ್ ಸಂದರ್ಭ ನಡೆಯುವ ವಿಚಾರಸಂಕಿರಣದಲ್ಲಿ ಭಾಗವಹಿಸಬಹುದು.

ವರದಿ: ಕುಮಾರ ರೈತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com