ಅನುಮತಿ ಇಲ್ಲದೆ ರೇಖಾಗೆ ಚುಂಬಿಸಿದ್ದ ಕಮಲ್, ಕ್ಷಮೆಯಾಚನೆಗೆ ನೆಟಿಗರ ಆಗ್ರಹ, ಚುಂಬನದ ವಿಡಿಯೋ!

ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು ಕಮಲ್ ಹಾಸನ್ ನಟಿಗೆ ಕ್ಷಮೆಯಾಚಿಸಬೇಕು ಎಂದು ನೆಟಿಗರು ಆಗ್ರಹಿಸಿದ್ದಾರೆ.

Published: 26th February 2020 06:42 PM  |   Last Updated: 26th February 2020 06:44 PM   |  A+A-


Rekha-Kamal Haasan

ರೇಖಾ-ಕಮಲ್ ಹಾಸನ್

Posted By : Vishwanath S
Source : Online Desk

ಚೆನ್ನೈ: ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು ಕಮಲ್ ಹಾಸನ್ ನಟಿಗೆ ಕ್ಷಮೆಯಾಚಿಸಬೇಕು ಎಂದು ನೆಟಿಗರು ಆಗ್ರಹಿಸಿದ್ದಾರೆ.

1986ರಲ್ಲಿ ತೆರೆಕಂಡಿದ್ದ ಪುನ್ನಗೈ ಮನ್ನನ್ ಚಿತ್ರವನ್ನು ಖ್ಯಾತ ನಿರ್ದೇಶಕ ಕೆ. ಬಾಲಚಂದರ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಕಮಲ್ ಹಾಸನ್ ನಟಿ ರೇಖಾ ತುಟಿಗೆ ಚುಂಬಿಸುವ ದೃಶ್ಯವಿದೆ.

100%

ಈ ಚುಂಬನಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ಆದರೆ ಕ್ಷಣಮಾತ್ರದಲ್ಲಿ ಅವರ ನನ್ನ ತುಟಿಗೆ ಚುಂಬಿಸಿದ್ದರು. ಚಿತ್ರದ ಸ್ಕ್ರಿಪ್ಟ್ ನಲ್ಲಿಯೂ ಆ ಬಗ್ಗೆ ಮಾಹಿತಿ ಇರಲಿಲ್ಲ. ಬಳಿಕ ನಾನು ಸಹ ನಿರ್ದೇಶಕರ ಬಳಿ ಕೇಳಿದೆ. ಅವರಿಂದ ಸರಿಯಾದ ಉತ್ತರ ಬಂದಿರಲಿಲ್ಲ. ಆದರೆ ಜನರು ನನ್ನ ಬಳಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ನನಗೆ ಉತ್ತರಿಸಲು ಮುಜುಗರವಾಗಿತ್ತು ಎಂದು ಸಂದರ್ಶನವೊಂದರಲ್ಲಿ ರೇಖಾ ಬೇಸರ ವ್ಯಕ್ತಪಡಿಸಿದ್ದರು.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp