ಬೆಂಗಳೂರು ಫಿಲ್ಮ್ ಫೆಸ್ಟ್ ಜೂರಿ ವಿಭಾಗದಲ್ಲಿ ‘ನಿರ್ಮಲ” ಮಕ್ಕಳ ನಿರ್ದೇಶನದ ಚಿತ್ರ
ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್ ನಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಪ್ರದರ್ಶನವಾಗುತ್ತಿದ್ದು, ಈ ಚಿತ್ರೋತ್ಸವದ ಜೂರಿ ವಿಭಾಗಕ್ಕೆ ಮಕ್ಕಳ ನಿರ್ದೇಶನದ ’ನಿರ್ಮಲ’ ಆಯ್ಕೆಯಾಗಿದೆ
Published: 27th February 2020 07:50 PM | Last Updated: 27th February 2020 07:50 PM | A+A A-

ಬೆಂಗಳೂರು ಫಿಲ್ಮ್ ಫೆಸ್ಟ್ ಜೂರಿ ವಿಭಾಗದಲ್ಲಿ ‘ನಿರ್ಮಲ” ಮಕ್ಕಳ ನಿರ್ದೇಶನದ ಚಿತ್ರ
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಚಲಚಿತ್ರೋತ್ಸದಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಪ್ರದರ್ಶನವಾಗುತ್ತಿದ್ದು, ಈ ಚಿತ್ರೋತ್ಸವದ ಜೂರಿ ವಿಭಾಗಕ್ಕೆ ಮಕ್ಕಳ ನಿರ್ದೇಶನದ ’ನಿರ್ಮಲ’ ಆಯ್ಕೆಯಾಗಿದೆ
‘ಬಯಲು ಶೌಚ ಮುಕ್ತ’ ವಿಷಯವನ್ನು ಒಳಗೊಂಡಿರುವ ‘ನಿರ್ಮಲ’ ಪ್ರಾಯೋಗಿಕ ಚಿತ್ರವಾಗಿದ್ದು, ಮಕ್ಕಳೇ ನಿರ್ದೇಶಿಸಿ, ಅಭಿನಯಿಸಿರುವುದು ವಿಶೇಷ ಸಂಕಲನ, ಕೊರಿಯಾಗ್ರಫಿ, ಮ್ಯೂಸಿಕ್, ಪೋಸ್ಟರ್ ಡಿಸೈನ್ ಜವಾಬ್ದಾರಿಯನ್ನೂ ಮಕ್ಕಳೇ ನಿರ್ವಹಿಸಿದ್ದಾರೆ ಬಹುಶಃ ಜಗತ್ತಿನಲ್ಲೇ ಇದು ಮೊದಲು ಎಂದು ನಿರ್ಮಾಪಕ ಉಲ್ಲಾಸ್ ಗೌಡ ತಿಳಿಸಿದ್ದಾರೆ.
ವಿದ್ಯಾರ್ಥಿ ಲೋಹಿತ್ ಪ್ರಕಾಶ್ ನಿರ್ದೇಶನದ ಚಿತ್ರ ಮಾರ್ಚ್ 2ರಂದು ನವರಂಗ್ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರದರ್ಶನಗೊಳ್ಳಲಿದೆ “ಈ ಮೊದಲು ಮೊಬೈಲ್ ನಲ್ಲಿಯೇ ಶಾರ್ಟ್ ಮೂವಿ ಮಾಡಲಾಗಿತ್ತು. ಅದರಿಂದ ಸ್ಫೂರ್ತಿಗೊಂಡು ಒಂದೂ ಮುಕ್ಕಾಲು ಗಂಟೆಯ ಚಿತ್ರವನ್ನು ನಿರ್ಮಿಸಲಾಗಿದೆ ಸ್ವಚ್ಛತೆಯ ಬಗ್ಗೆ ‘ನಿರ್ಮಲ’ ಸಂದೇಶ ನೀಡುತ್ತದೆ ಎಂದು ಲೋಹಿತ್ ಪ್ರಕಾಶ್ ಹೇಳಿದ್ದಾರೆ. ಉಲ್ಲಾಸ್ ಸ್ಕೂಲ್ ಸಿನೆಮಾಸ್ ಸಹಯೋಗದೊಡನೆ ಉಲ್ಲಾಸ್ ಸಿನೆಎಂಟರ್ ಪ್ರೈಸಸ್ ಬ್ಯಾನರ್ ನಲ್ಲಿ ಹಿರಿಯರ ನೆರವಿನೊಂದಿಗೆ 14 ವರ್ಷದೊಳಗಿನ ಮಕ್ಕಳೇ ನಿರ್ಮಿಸಿರುವ‘ನಿರ್ಮಲ’ ಚಿತ್ರಕ್ಕೆ ವೆಂಕಾಗಿರಿ ಸಂಭಾಷಣೆ ಸ್ಕೀನ್ ಪ್ಲೇ ಇದೆ. ಪಟ್ಟಣದಿಂದ ಹಳ್ಳಿಗೆ ಹೋಗುವ ಬಾಲಕಿಯೊಬ್ಬಳು ಶೌಚಾಲಯದ ವ್ಯವಸ್ಥೆಗೆ ಊರಿನ ಮಕ್ಕಳು ಹಾಗೂ ಅವರ ಪೋಷಕರನ್ನು ಉತ್ತೇಜಿಸುವ ಕಥಾಹಂದರವನ್ನು ‘ನಿರ್ಮಲಾ’ ಹೊಂದಿದೆ.