ಸ್ಯಾಂಡಲ್ ವುಡ್ ಗೂ ಆವರಿಸಿದ ಕೊರೋನಾ ಭೀತಿ! 'ರಾಬರ್ಟ್' ಹಾಡಿನ ಚಿತ್ರೀಕರಣ ರದ್ದು

ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಇದೀಗ ಸ್ಯಾಂಡಲ್ ವುಡ್ ಗೆ ಸಹ ಆತಂಕ ಮೂಡಿಸಿದೆ. ಅಷ್ಟು ಮಾತ್ರವಲ್ಲ ಸ್ಯಾಂಡಲ್ ವುಡ್ ನಲ್ಲಿ ಶೂಟಿಂಗ್ ಶೆಡ್ಯೂಲ್ ಗೆ ಸಹ ಡ್ಡಿ ಮಾಡಿದೆ! ಹೌದು, ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ  ಸ್ಪೇನ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಸಬೇಕಿತ್ತು.  ಆದರೆ ಕೊರೋನಾ ಭೀತಿಯ

Published: 27th February 2020 11:44 AM  |   Last Updated: 27th February 2020 11:44 AM   |  A+A-


ರಾಬರ್ಟ್

Posted By : Raghavendra Adiga
Source : The New Indian Express

ಜಗತ್ತಿನ ನಾನಾ ಕಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಸಾವಿರಾರು ಮಂದಿಯ ಸಾವಿಗೆ ಕಾರಣವಾಗಿರುವ ಕೊರೋನಾವೈರಸ್ ಇದೀಗ ಸ್ಯಾಂಡಲ್ ವುಡ್ ಗೆ ಸಹ ಆತಂಕ ಮೂಡಿಸಿದೆ. ಅಷ್ಟು ಮಾತ್ರವಲ್ಲ ಸ್ಯಾಂಡಲ್ ವುಡ್ ನಲ್ಲಿ ಶೂಟಿಂಗ್ ಶೆಡ್ಯೂಲ್ ಗೆ ಸಹ ಡ್ಡಿ ಮಾಡಿದೆ! ಹೌದು, ದರ್ಶನ್ ಅಭಿನಯದ ರಾಬರ್ಟ್ ಚಿತ್ರತಂಡ  ಸ್ಪೇನ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಸಬೇಕಿತ್ತು.  ಆದರೆ ಕೊರೋನಾ ಭೀತಿಯ ಕಾರಣ ಈ ಯೋಜನೆಯಿಂದ ಹಿಂದೆ ಸರಿಯಲಾಗಿದೆ. ಚಿತ್ರೀಕರಣಕ್ಕಾಗಿ ಭಾರತದ ಹೊರಗೆ ಎಲ್ಲಿಯೂಹೋಗದೆ ಇರಲು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್ ಮತ್ತು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ನಿರ್ಧರಿಸಿದ್ದಾರೆ.

“ಸ್ಪೇನ್‌ನ ಸುಂದರ ತಾಣಗಳಲ್ಲಿ ಹಾಡೊಂದನ್ನು ಚಿತ್ರೀಕರಿಸಬೇಕೆನ್ನುವುದು ನಮ್ಮ ಯೋಜನೆಯಾಗಿತ್ತು. ನಮ್ಮ ಚಿತ್ರದ ಛಾಯಾಗ್ರಾಹಕರು ಸ್ಥಳವನ್ನು ಅಂತಿಮಗೊಳಿಸಿದ್ದರು. ಭಾನುವಾರ ನಮ್ಮ ತಂಡ ಅಲ್ಲಿಗೆ ಹೊರಟಿತ್ತು. ಅದಾಗ್ಯೂ ಯುರೋಪಿನಲ್ಲಿ ಕೊರೋನಾವೈರಸ್ ಭೀತಿ ಎದುರಾದ ಹಿನ್ನೆಲೆ ಸೋಮವಾರ ಅಲ್ಲಿ ಶೂಟಿಂಗ್ ನಡೆಸದೆ ಮರಳುವ ತೀರ್ಮಾನಕ್ಕೆ ಬರಲಾಗಿದೆ.. ಸಧ್ಯ ಹಾಡಿನ ಚಿತ್ರೀಕರಣ ರದ್ದಾಗಿದೆ" ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.

ಎಮೋಷನಲ್  ಆಕ್ಷನ್ ಥ್ರಿಲ್ಲರ್ಕಥಾನಕವಿರುವ "ರಾಬರ್ಟ್"  ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಗುಡ್ ಫ್ರೈಡೆ ವೀಕೆಂಡ್ ಆದ ಏಪ್ರಿಲ್ 9 ರಂದು ಚಿತ್ರವು ದೇಶಾದ್ಯಂತ ತೆರೆ ಕಾಣಲಿದೆ. ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರದಲ್ಲಿ ಅರ್ಜುನ್ ಜನ್ಯಾ ಅವರ ಸಂಗೀತವಿದೆ. ಆಶಾ ಭಟ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ಎದುರಾಳಿಯಾಗಿ ದಕ್ಷಿಣ ಭಾರತದ  ಖಾಯತ ನಟ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿರುವುದು ವಿಶೇಷ. 

ವಿನೋದ್ ಪ್ರಭಾಕರ್, ಸೋನಾಲ್ ಮಾಂಟೆರೋ, ಶಿವರಾಜ್ ಕೆ ಆರ್ ಪೇಟೆ, , ರವಿ ಕಿಶನ್, ಚಿಕ್ಕಣ್ಣ ಮತ್ತು ರವಿಶಂಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
SChool_Children1

ಕೆಲವು ರಾಜ್ಯಗಳಲ್ಲಿ ಶಾಲೆಗಳ ಭಾಗಶಃ ಪುನರಾರಂಭವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp