ಕಿರಿಕ್ ಪಾರ್ಟಿ- 2 ಗಾಗಿ ಒಳ್ಳೆಯ ಕಥಾವಸ್ತು ಇದೆ: ರಕ್ಷಿತ್ ಶೆಟ್ಟಿ 

ಕಿರಿಕ್ ಪಾರ್ಟಿ-2 ಚಿತ್ರ ಮಾಡುವುದಾಗಿ ಇತ್ತೀಚಿಗೆ ರಕ್ಷಿತ್ ಶೆಟ್ಟಿ ಮಾಡಿರುವ ಘೋಷಣೆ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ

ಬೆಂಗಳೂರು: ಕಿರಿಕ್ ಪಾರ್ಟಿ-2 ಚಿತ್ರ ಮಾಡುವುದಾಗಿ ಇತ್ತೀಚಿಗೆ ರಕ್ಷಿತ್ ಶೆಟ್ಟಿ ಮಾಡಿರುವ ಘೋಷಣೆ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. 

ಕಿರಿಕ್ ಪಾರ್ಟಿ- 2 ಗಾಗಿ ಈವರೆಗೂ ಯಾವುದೇ ಯೋಜನೆ ಮಾಡಿಲ್ಲ. ಆದರೆ, ಉತ್ತಮ ಕಥಾವಸ್ತು ನನ್ನ ಬಳಿ ಇದೆ. ಇದು ಕೂಡಾ ಅದೇ ರೀತಿಯ ಹೋರಾಟವಾಗಲಿದೆ ಎಂದು  ಅವರು ಟ್ವೀಟ್ ಮಾಡಿದ್ದರು.

ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಪುಣ್ಯಕೋಟಿ ಹಾಗೂ ರಿಚೀಯಲ್ಲಿ ಕೆಲಸ ಮಾಡುತ್ತಿರುವ ವೇಲು ಜೊತೆಗೆ ಮತ್ತೆ ಕೆಲಸ ಮಾಡಲಿದ್ದು ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು. 

ರಕ್ಷಿತ್ ಶೆಟ್ಟಿ ಪ್ರಸ್ತುತ ನಿರ್ದೇಶಕ ಕಿರಣ್ ರಾಜ್ ಅವರ 777 ಚಾರ್ಲಿ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ಸಿನಿಮಾದ ಕಥೆ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾರೆ. 

ಕೊಡೈನಲ್ಲಿ ಇದು ಕೊನೆಯ ದಿನವಾಗಿದೆ. ಪುಣ್ಯಕೋಟಿ ಹಾಗೂ ರಿಚಿಗೆ 10 ದಿನ ಕಥೆ ಬರೆದ ನಂತರ ಆ ಸ್ಥಳ ಬಿಡಲು ಯಾರು ಇಷ್ಟಪಡುತ್ತಿಲ್ಲ. ಅಲ್ಲಿ 10ಕ್ಕೂ ಹೆಚ್ಚು ದಿನ ಉಳಿದದ್ದು ತುಂಬಾ ಖುಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ. 

ಸಮಯ ವ್ಯರ್ಥ್ಯ ಮಾಡದ ರಕ್ಷಿತ್ ಶೆಟ್ಟಿ, 777 ಚಾರ್ಲಿ ಚಿತ್ರದ ಉಳಿದಿರುವ ಶೂಟಿಂಗ್ ಗಾಗಿ ಪ್ಯಾಕ್ ಮಾಡಲಿದ್ದಾರೆ. 15 ದಿನಗಳ ಕಾಲ ಗುಜರಾತ್, ರಾಜಸ್ಥಾನ ಹಾಗೂ ಪಂಜಾಬ್ ಗಳಲ್ಲಿ ಚಿತ್ರೀಕರಣ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com