ಹೊಸ ವರ್ಷದಿಂದಲೇ ರಾಬರ್ಟ್ ಚಿತ್ರಕ್ಕೆ ದರ್ಶನ್ ಡಬ್ಬಿಂಗ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಇನ್ನು ಹೊಸ ವರ್ಷದ ದಿನದಿಂದಲೇ ದರ್ಶನ್ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಲಿದ್ದಾರೆ.

Published: 01st January 2020 01:37 PM  |   Last Updated: 01st January 2020 01:37 PM   |  A+A-


Robert Movie Still

ರಾಬರ್ಟ್ ಚಿತ್ರದ ಸ್ಟಿಲ್

Posted By : Vishwanath S
Source : The New Indian Express

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಪೋಸ್ಟರ್ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಇನ್ನು ಹೊಸ ವರ್ಷದ ದಿನದಿಂದಲೇ ದರ್ಶನ್ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಲಿದ್ದಾರೆ. 

ಕಾಯಕವೇ ಕೈಲಾಸ ಎಂಬಂತೆ 2020ರ ಮೊದಲ ದಿನವೇ ತಮ್ಮ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ. 

ರಾಬರ್ಟ್ ಆ್ಯಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು ತರುಣ್ ಸುಧೀರ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ತೆಲುಗು ನಟ ಜಗಪತಿ ಬಾಬು ಅವರು ನಟಿಸುತ್ತಿದ್ದಾರೆ. ಆಶಾ ಭಟ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 

ರಾಬರ್ಟ್ ಚಿತ್ರದ ನಂತರ ದರ್ಶನ್ ರಾಜಾ ವೀರಾ ಮದಕರಿ ನಾಯಕ್ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡುತ್ತಿದ್ದು ರಾಕಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp