ಅನುರಾಧಾ ಪೌದ್ವಾಲ್ ನನ್ನ ತಾಯಿ: ಕೋರ್ಟ್ ಮೆಟ್ಟಿಲೇರಿದ ಮಹಿಳೆ: ಗಾಯಕಿ ಹೇಳಿದ್ದೇನು?

 ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್ ಅವರು ನನ್ನ ಹೆತ್ತ ತಾಯಿ ಎಂದು ಹೇಳಿಕೊಂಡು ಕೇರಳದ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಅನುರಾಧ ಪೌದ್ವಾಲ್
ಅನುರಾಧ ಪೌದ್ವಾಲ್

ತಿರುವನಂತಪುರ;  ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಅನುರಾಧಾ ಪೌದ್ವಾಲ್ ಅವರು ನನ್ನ ಹೆತ್ತ ತಾಯಿ ಎಂದು ಹೇಳಿಕೊಂಡು ಕೇರಳದ ಮಹಿಳೆಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಜ.27ರಂದು ಪ್ರಕರಣದ ವಿಚಾರಣೆ ನಡೆಯುವ ವೇಳೆ, ಪೊಡವಾಲ್ ಹಾಗೂ ಅವರ ಇಬ್ಬರು ಮಕ್ಕಳು ಖುದ್ದು ಹಾಜರಾಗಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅನುರಾಧಾ ಪೌದ್ವಾಲ್ ಅವರಿಗೆ ಸೂಚಿಸಿದೆ.

ಕರ್ಮಲಾ ಮೋಡೆಕ್ಸ್ ಎನ್ನುವವರು ಈ ಆರೋಪ ಮಾಡಿದ್ದು, ‘ನನ್ನ ಬಾಲ್ಯ ಹಾಗೂ ಜೀವನದ ಹಕ್ಕುಗಳನ್ನು ನಿರಾಕರಿಸಿದ್ದಕ್ಕಾಗಿ ಹೆತ್ತ ಪೋಷಕರು ₹ 50 ಕೋಟಿ ಪರಿಹಾರ ನೀಡಬೇಕು’ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ಪೌದ್ವಾಲ್ ಅವರು 1974ರಲ್ಲಿ ಸಾಕುಪೋಷಕರಾದ ಪೊನ್ನಚ್ಚನ್ ಹಾಗೂ ಅಗ್ನೇಸ್‌ ಅವರಿಗೆ ನನ್ನನ್ನು ನೀಡಿದರು. ಆ ವೇಳೆಗೆ ಅವರು ವೃತ್ತಿಜೀವನದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ, ಮಗುವನ್ನು ಸಾಕಲು ಅವರಿಗೆ ಇಷ್ಟವಿರಲಿಲ್ಲ’  ಈ ವಿಷಯವನ್ನು ನನ್ನ ಸಾಕು ಸಾವಿನ ಅಂಚಿನಲ್ಲಿರುವಾಗ ತಿಳಿಸಿದರು ಎಂದು ಹೇಳಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಗಾಯಕಿ  ಅನುರಾಧ, ಉಥ ಮೂರ್ಖ ಹೇಳಿಕೆಗೆ ಪ್ರತಿಕ್ರಿಯಿಸುವ ಅವಶ್ಯಕತೆಯಿಲ್ಲ, ಇದರ ಬಗ್ಗೆ ನಾನು ಸ್ಪಷ್ಟನೆ ಕೂಡ ನೀಡುವುದಿಲ್ಲ, ಇದಕ್ಕೆ ಪ್ರತಿಕ್ರಿಯಿಯಿಸಿದರೇ ನನ್ನ ಗೌರವಕ್ಕೆ ಕುಂದು ಬರುತ್ತದೆ ಎಂದು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುರಾಧ ಪೌದ್ವಾಲ್ ಅವರ ವಕ್ತಾರೆ, ಆಕೆಯೊಬ್ಬ ಸೈಕೋ ಎಂದು ಹೇಳಿದ್ದಾರೆ, ಅನುರಾಧ ಅವರ ಪುತ್ರಿ ಕವಿತಾ 1974 ರಲ್ಲಿ ಜನಿಸಿದರು, ಅನುರಾಧ ಅವರ ಪತಿ ನಿಧನವಾಗಿರುವ ವಿಷಯ ಕೂಡ ಆಕೆಗೆ ತಿಳಿದಿಲ್ಲ ಎಂದು ಟೀಕಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com