ಬಿಡುಗಡೆಗೂ ಮುನ್ನ ಸೂಪರ್ ಸ್ಟಾರ್ ರಜನಿಕಾಂತ್ 'ದರ್ಬಾರ್'ಗೆ ಮದ್ರಾಸ್ ಹೈಕೋರ್ಟ್ ಶಾಕ್..!

ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರ ’ದರ್ಬಾರ್’ಗೆ ಮದ್ರಾಸ್ ಹೈಕೋರ್ಟ್ ಆಘಾತ ನೀಡಿದೆ.
ರಜನಿಕಾಂತ್
ರಜನಿಕಾಂತ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹೊಸ ಚಿತ್ರ ’ದರ್ಬಾರ್’ ಗೆ ಮದ್ರಾಸ್ ಹೈಕೋರ್ಟ್ ಆಘಾತ ನೀಡಿದೆ. 

ಇದೇ ತಿಂಗಳ 9 ರಂದು ವಿಶ್ವದಾದ್ಯಂತ ಎಂಟು ಸಾವಿರ ಚಿತ್ರಮಂದಿರಗಳಲ್ಲಿ ದರ್ಬಾರ್ ಬಿಡುಗಡೆಗೆ ಸಿದ್ದತೆ ನಡೆಸಲಾಗುತ್ತಿದೆ. 

ಈ ಹಿನ್ನೆಲೆಯಲ್ಲಿ, ಚಿತ್ರವನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡುವ ಬಗ್ಗೆ ಮದ್ರಾಸ್ ಹೈಕೋರ್ಟ್ ಪ್ರಮುಖ ಆದೇಶಗಳನ್ನು ನೀಡಿದೆ. ಮಲೇಷ್ಯಾದಲ್ಲಿ ತಮಿಳರು ಹೆಚ್ಚು. ರಜನಿಕಾಂತ್ ಸಿನಿಮಾಗಳಿಗೆ ಅಲ್ಲಿ ಭಾರಿ ಬೇಡಿಕೆಯಿದೆ ಈ ಹಿನ್ನೆಲೆಯಲ್ಲಿಯೇ ಮಲೇಷ್ಯಾದಲ್ಲಿ ದರ್ಬಾರ್ ಸಿನೆಮಾವನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿತ್ತು.

ಆದರೆ, ರಜನಿಕಾಂತ್ ಅವರ ಹಿಂದಿನ ಚಿತ್ರ ೨.೦ ಕ್ಕೆ ಸಂಬಂಧಿಸಿದಂತೆ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ 23 ಕೋಟಿ, ಮಲೇಶಿಯಾದ ಕಂಪನಿಗೆ ಬಾಕಿ ಉಳಿಸಿಕೊಂಡಿದೆ. ಬಾಕಿ ಪಾವತಿಸದೆ ಲೈಕಾ ತನ್ನ ಹೊಸ ಚಿತ್ರ 'ದರ್ಬಾರ್' ಅನ್ನು ಮಲೇಷ್ಯಾದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಮಲೇಷಿಯಾ ಮೂಲದ ಕಂಪನಿ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. ಮಲೇಷ್ಯಾದಲ್ಲಿ ದರ್ಬಾರ್ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿಕೆ ಸಲ್ಲಿಸಿತ್ತು. 

ಇದಕ್ಕೆ ಪ್ರತಿಕ್ರಿಯಿಸಿದ ಹೈಕೋರ್ಟ್, ಮಲೇಷ್ಯಾದಲ್ಲಿ ದರ್ಬಾರ್ ಬಿಡುಗಡೆ ಮಾಡಲು ರೂ. 4.90 ಕೋಟಿ ಠೇವಣಿ ಇಡಲು ಆದೇಶಿಸಲಾಗಿದೆ. ಈ ಹಣವನ್ನು ಠೇವಣಿ ಇರಿಸದಿದ್ದರೆ, ಮಲೇಷ್ಯಾದಲ್ಲಿ ದರ್ಬಾರ್ ಸಿನೆಮಾ ಬಿಡುಗಡೆಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com