ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ಏಪ್ರಿಲ್ 9 ರಂದು ರಾಬರ್ಟ್  ರಿಲೀಸ್     

ಎಸ್ ಉಪಮಾತಿ ನಿರ್ಮಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ.

Published: 08th January 2020 12:15 PM  |   Last Updated: 08th January 2020 12:18 PM   |  A+A-


Roberrt Poster

ರಾಬರ್ಟ್ ಪೋಸ್ಟರ್

Posted By : Shilpa D
Source : The New Indian Express

ಎಸ್ ಉಪಮಾತಿ ನಿರ್ಮಿಸಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ.

ನಿರ್ದೇಶಕ ತರುಣ್ ಸುಧೀರ್ ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದಾರೆ. ಬೇಸಿಗೆ ರಜೆ ಅಂದರೇ ಏಪ್ರಿಲ್ 9 ರಂದು ರಿಲೀಸ್ ಮಾಡಲಾಗುವುದು ಎಂದು ಹೇಳಿದ್ದಾರೆ

ಸದ್ಯ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ ಚಿತ್ರತಂಡ. ದರ್ಶನ್ ಮತ್ತು ನಟಿ ಆಶಾ ಭಟ್ ನಡುವಿನ ಡ್ಯುಯೆಟ್ ಹಾಡಿನ ಚಿತ್ರೀಕರಣ ಮಾಡಬೇಕಿದೆ ಚಿತ್ರತಂಡ. ಸಧ್ಯದಲ್ಲೇ ಹಾಡಿನ ಚಿತ್ರೀಕರಣ ಮುಗಿಸಿ ಪೊಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿಕೊಳ್ಳಲಿದೆ ಚಿತ್ರತಂಡ. 

 ಈಗಾಗಲೆ ರಾಬರ್ಟ್ ಸಿನಿಮಾ ಸಮ್ಮರ್ ಗೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ತಿಂಗಳು ಮತ್ತು ದಿನಾಂಕ ನಿಗದಿಯಾಗಿರಲಿಲ್ಲ. ಈಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ರಾಬರ್ಟ್ ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆಯಂತೆ. ವಿಶೇಷ ಅಂದರೆ ಗುಡ್ ಫ್ರೈಡೇ ಸಮಯದಲ್ಲಿ ರಾಬರ್ಟ್ ತೆರೆಗೆ ಬರುತ್ತಿದೆ.

ಪೋಸ್ಟರ್ ಗಳ ಮೂಲಕವೇ ಸಖತ್ ಕ್ರೇಸ್ ಸೃಷ್ಟಿಸಿರುವ ರಾಬರ್ಟ್ ಟೀಸರ್ ಗೆ ಕಾಯುತ್ತಿದ್ದಾರೆ ಅಭಿಮಾನಿಗಳು. ಟೀಸರ್ ಮತ್ತು ಟ್ರೈಲರ್ ರಿಲೀಸ್ ಗೂ ಮೊದಲೆ ಸಿನಿಮಾ ರಿಲೀಸ್ ಡೇಟ್ ವೈರಲ್ ಆಗಿದೆ. ಡಿ ಬಾಸ್ ಎಂಟ್ರಿಯಿಂದ ಈ ವರ್ಷ ಸಮ್ಮರ್ ಸಂಭ್ರಮ ಜೋರಾಗಿರಲಿದೆ.
 

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp