ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ರಿಲೀಸ್ ಆಗಲಿದೆ ತ್ರಿಕೋಣ ಸಿನಿಮಾ

ಚಂದ್ರಕಾಂತ್ ನಿರ್ದೇಶನದ ತ್ರಿಕೋನ ಸಿನಿಮಾಗೆ ರಾಜಶೇಖರ್ ಕಥೆ ಬರೆದಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ,  ಮೂರು ಭಾಷೆಗಳಲ್ಲಿಯೂ ಕಥೆ ವಿಭಿನ್ನವಾಗಿದೆ.
ಲಕ್ಷ್ಮಿ
ಲಕ್ಷ್ಮಿ

ಚಂದ್ರಕಾಂತ್ ನಿರ್ದೇಶನದ ತ್ರಿಕೋನ ಸಿನಿಮಾಗೆ ರಾಜಶೇಖರ್ ಕಥೆ ಬರೆದಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ,  ಮೂರು ಭಾಷೆಗಳಲ್ಲಿಯೂ ಕಥೆ ವಿಭಿನ್ನವಾಗಿದೆ.

ಬರ್ಫಿ, ಪೆರೋಲ್ ಮತ್ತು ಅಮೃತವಾಹಿನಿ ಸಿನಿಮಾಗಳಿಗೆ ರಾಜಶೇಖರ್ ಕಥೆ ಬರೆದಿದ್ದು, ತ್ರಿಕೋನ ಸಿನಿಮಾದಲ್ಲಿ ಕಥೆಗೆ ಜೀವ ತುಂಬಿದ್ದಾರೆ.

ಈ ಸಿನಿಮಾ ಮನುಷ್ಯನ ತಾಳ್ಮೆ ಪರಿಕ್ಷೆಗೆ ಸಂಬಂಧಿಸಿದ ಕಥೆಯಾಗಿದೆ. ನೈಜತೆಗೆ ಹತ್ತಿರವಾದದ್ದು,  25 ರಿದ 60 ವರ್ಷದ ಜನರಿಗೆ ತಾಳ್ಮೆ ಎಂಬುದು ಹೇಗೆ ಇರುತ್ತದೆ ಎಂಬುದೇ ತ್ರಿಕೋನ್ ಸಿನಿಮಾದ ಕಥೆ. 

"ತ್ರಿಕೋನ' ಚಿತ್ರದ ಹೀರೋ ಸುರೇಶ್‌ ಹೆಬ್ಳೀಕರ್‌. ಅವರಿಗೆ ನಾಯಕಿ ಲಕ್ಷ್ಮೀ. ಹೌದು ಇದು 60 ಪ್ಲಸ್‌ ಜೋಡಿಯ ಹೊಸ ಕಥೆ.

ಇವರೊಟ್ಟಿಗೆ 45 ಪ್ಲಸ್‌ ಜೋಡಿಯ ಕಥೆಯೂ ಸಾಗಲಿದೆ. ಅಚ್ಯುತ್‌ ಕುಮಾರ್‌ ಮತ್ತು ಸುಧಾರಾಣಿ ಜೋಡಿಯ ಕಥೆಯೂ ಇಲ್ಲೊಂದು ವಿಶೇಷತೆ ಹೊಂದಿದೆ. ಇದಷ್ಟೇ ಅಲ್ಲ, 25 ಪ್ಲಸ್‌ ಹುಡುಗನ ಕಥೆಯೂ ಒಳಗೊಂಡಿದೆ. ರಾಜ್‌ವೀರ್‌ ಎಂಬ ಹುಡುಗ ಆ ವಯಸ್ಸಿನ ಕಥೆಯ ಹೈಲೆಟ್‌. ಎಲ್ಲಾ ಸರಿ, 25, 45 ಮತ್ತು 60 ಪ್ಲಸ್‌ ವಯಸ್ಸಿನವರ ಕಥೆಯಲ್ಲೇನಿದೆ ಅಂದರೆ, "ಇದೊಂದು ಆಯಕ್ಷನ್‌ ಕಮ್‌ ಥ್ರಿಲ್ಲರ್‌ ಬೇಸ್ಡ್ ಸಿನಿಮಾ. ಇಲ್ಲಿ ಎಲ್ಲವೂ ಇರಲಿದೆ.

ನೋವು, ನಲಿವು, ತಮಾಷೆ ಇತ್ಯಾದಿಯೊಂದಿಗೆ ಒಂದು ಹೊಸತನದ ಹೂರಣ ಇಲ್ಲಿ ಉಣಬಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಒಂದೇ ಮಾತಲ್ಲಿ ಹೇಳುವುದಾದರೆ, ಅಜ್ಜ-ಅಜ್ಜಿಯ ಕಥೆಯೇ ಇಲ್ಲಿ ಪ್ರಮುಖವಾಗಿದೆ ಎನ್ನುವ ನಿರ್ದೇಶಕ ಚಂದ್ರಕಾಂತ್‌,  ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಉದ್ದೇಶ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com