ಜೆರ್ಸಿ ಶೂಟಿಂಗ್ ವೇಳೆ ಚೆಂಡು ತಗುಲಿ ಬಾಲಿವುಡ್ ನಟ ಶಾಹಿದ್ ಕಪೂರ್ ತುಟಿ ಸೀಳು, 13 ಹೊಲಿಗೆ!

ಕಬೀರ್ ಸಿಂಗ್ ಬ್ಲಾಕ್ ಬಸ್ಟರ್ ಚಿತ್ರದ ನಂತರ ಶಾಹಿದ್ ಕಪೂರ್ ಅವರು ಸದ್ಯ ಜೆರ್ಸಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ಶಾಹಿದ್ ಅವರಿಗೆ ಗಂಭೀರ ಗಾಯವಾಗಿದ್ದು 13 ಹೊಲಿಗೆ ಹಾಕಲಾಗಿದೆ ಎಂದ ವರದಿ ಬಂದಿದೆ.
ಶಾಹಿದ್ ಕಪೂರ್
ಶಾಹಿದ್ ಕಪೂರ್

ಮುಂಬೈ: ಕಬೀರ್ ಸಿಂಗ್ ಬ್ಲಾಕ್ ಬಸ್ಟರ್ ಚಿತ್ರದ ನಂತರ ಶಾಹಿದ್ ಕಪೂರ್ ಅವರು ಸದ್ಯ ಜೆರ್ಸಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ಶಾಹಿದ್ ಅವರಿಗೆ ಗಂಭೀರ ಗಾಯವಾಗಿದ್ದು 13 ಹೊಲಿಗೆ ಹಾಕಲಾಗಿದೆ ಎಂದ ವರದಿ ಬಂದಿದೆ. 

ಶಾಹಿದ್ ಮುಖಕ್ಕೆ ಚೆಂಡು ಬಡಿದಿದ್ದರಿಂದ ಅವರ ತುಟಿ ಸೀಳಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿತ್ರದ ಚಿತ್ರೀಕರಣ ಚಂಡೀಗಢ್ ನಲ್ಲಿ ನಡೆಯುತ್ತಿತ್ತು. 

ಜೆರ್ಸಿ ಚಿತ್ರ ಕ್ರಿಕೆಟ್ ಕುರಿತಾದ ಚಿತ್ರವಾಗಿದ್ದರಿಂದ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುವ ಚಿತ್ರೀಕರಣ ವೇಳೆ ಚೆಂಡು ಬಡಿದು ಗಾಯವಾಗಿದೆ. ಚೆಂಡು ಬಡಿದಿದ್ದರಿಂದ ಅವರ ಮುಖ ಸಹ ಊದಿಕೊಂಡಿದ್ದು ಊತ ಕಡಿಮೆಯಾಗಲು ಸ್ವಲ್ಪ ದಿನ ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com