'ಪುರ್ ಸೋತ್ ರಾಮ' ಹಾಸ್ಯ ಚಿತ್ರದ ಮೂಲಕ ಸರು ಸ್ಯಾಂಡಲ್ ವುಡ್ ಪ್ರವೇಶ

 ಪುರ್ ಸೋತ್ ರಾಮ ಹಾಸ್ಯ  ಚಿತ್ರದ ಮೂಲಕ ನಿರ್ದೇಶಕ ಹೃತ್ತಿಕ್ ಸರು  ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಇವರೇ ಮೊದಲ ಬಾರಿಗೆ ನಾಯಕ ನಟರಾಗಿಯೂ ಅಭಿನಯಿಸಿದ್ದಾರೆ
'ಪುರ್ ಸೋತ್ ರಾಮ' ಚಿತ್ರದ ಪೋಸ್ಟರ್
'ಪುರ್ ಸೋತ್ ರಾಮ' ಚಿತ್ರದ ಪೋಸ್ಟರ್

ಬೆಂಗಳೂರು: ''ಪುರ್ ಸೋತ್ ರಾಮ' ಹಾಸ್ಯ ಚಿತ್ರದ ಮೂಲಕ ನಿರ್ದೇಶಕ ಹೃತ್ತಿಕ್ ಸರು ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಇವರೇ ಮೊದಲ ಬಾರಿಗೆ ನಾಯಕ ನಟರಾಗಿಯೂ ಅಭಿನಯಿಸಿದ್ದಾರೆ

 ಎಲ್ಲವೂ ಅಂದುಕೊಂಡಂತೆ ನಡೆದರೆ ರವಿಶಂಕರ್ ಗೌಡ, ಶಿವರಾಜ್ ಕೆಆರ್ ಪೇಟೆ ಮತ್ತು ಕುರಿ ಪ್ರತಾಪ್ ಅವರೊಂದಿಗೆ ಹಾಸ ಪ್ರಧಾನ ಚಿತ್ರದ ಮೂಲಕ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡಲಿದ್ದಾರೆ.

ನಿರ್ದೇಶನ ತರಬೇತಿ ಪಡೆದುಕೊಂಡಿರುವ ಸರು, ನಾಗತಿಹಳ್ಳಿ ಚಂದ್ರಶೇಖರ್ ಇನ್ಸಿಟ್ಯೂಟ್ ನಲ್ಲಿ ಅನೇಕ ಕಿರುಚಿತ್ರ ಹಾಗೂ ಮ್ಯೂಸಿಕ್ ಅಲ್ಬಂಗಳನ್ನು ಮಾಡಿದ್ದಾರೆ. ಹಾಸ್ಯ ಚಿತ್ರವೊಂದರ ಮೂಲಕ ಮೊದಲ ಬಾರಿಗೆ ವೃತ್ತಿಜೀವನ ಆರಂಭಿಸುತ್ತಿದ್ದು, ಸಾಕಷ್ಟು ಕುತೂಹಲಗೊಂಡಿದ್ದಾರೆ.

ಮಾನಸ ದೇವಿ ಪ್ರೊಢಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಫೆಬ್ರವರಿ 7 ರಂದು ತೆರೆ ಮೇಲೆ ಬರಲಿದೆ.ಸುದ್ಧೋ ರಾಯ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಕಿರಣ್ ಕುಮಾರ್ ಅವರ ಛಾಯಾಗ್ರಾಹಣವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com