'ಲವ್ ಮಾಕ್ಟೇಲ್' ಚಿತ್ರದ ಆಡಿಯೋ ಬಿಡುಗಡೆ ಮಾಡಲಿರುವ ಕಿಚ್ಚ ಸುದೀಪ್

ನಟನೆ ಬಳಿಕ ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿರುವ 'ಮದರಂಗಿ' ಕೃಷ್ಣ ಅವರ ಚಿತ್ರ ಲವ್ ಮಾಕ್ಟೇಲ್ ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ಅವರು, ಜನವರಿ 16 ರಂದು ಬಿಡುಗಡೆ ಮಾಡುತ್ತಿದ್ದಾರೆ. 

Published: 14th January 2020 01:04 PM  |   Last Updated: 14th January 2020 02:03 PM   |  A+A-


Sudeep to launch audio of director and actor Krishna’s 'Love Mocktail'

ಲವ್ ಮಾಕ್ಟೇಲ್ ಚಿತ್ರದ ಆಡಿಯೋ ಬಿಡುಗಡೆ ಮಾಡಲಿರುವ ಕಿಚ್ಚ ಸುದೀಪ್

Posted By : Manjula VN
Source : The New Indian Express

ನಟನೆ ಬಳಿಕ ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿರುವ 'ಮದರಂಗಿ' ಕೃಷ್ಣ ಅವರ ಚಿತ್ರ ಲವ್ ಮಾಕ್ಟೇಲ್ ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ಅವರು, ಜನವರಿ 16 ರಂದು ಬಿಡುಗಡೆ ಮಾಡುತ್ತಿದ್ದಾರೆ. 

ಚಿತ್ರದಲ್ಲಿ ಅಮೃತಾ ಅಯ್ಯಂಗರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಸಂಗೀತವನ್ನು ರಘು ದೀಕ್ಷಿತ್ ಅವರು  ನೀಡಿದ್ದಾರೆ. 

ಟಾಕಿ ಪೋರ್ಷನ್ ಪೂರ್ಣಗೊಳಿಸಲಾಗಿದ್ದು, ರಘು ದೀಕ್ಷಿತ್ ಅವರು ರಚಿಸಿರುವ ಗೀತೆಯೊಂದಿಗೆ ಅದನ್ನು ಜೋಡಿಸಲಾಗುತ್ತದೆ. ಚಿತ್ರ ಪ್ರವಾಸಕ್ಕೆ ಸಂಬಂಧಿಸಿದ್ದಾಗಿದ್ದು, ಅದಕ್ಕೆ ಸಂಬಂಧಿಸಿದಂತೆಯೇ ಸಂಗೀತ ಕೂಡ ಿರುತ್ತದೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹಾಡುಗಳು ಪ್ರೇಕ್ಷಕರಿಗೆ ವಿಶ್ರಾಂತಿ ನೀಡುತ್ತದೆ. ಆದರೆ, ನಮ್ಮ ಚಿತ್ರ ಕಥೆ ಹಾಡಿನೊಂದಿಗೆ ಸಾಗುತ್ತದೆ. ಹೀಗಾಗಿಯೇ ಸಂಗೀತದ ಜೊತೆದೆ ಜೋಡಿಸಲು ಈಗಾಗಲೇ ನಾವು ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇವೆಂದು ಕೃಷ್ಣ ಅವರು ಹೇಳಿದ್ದಾರೆ. 

ಚಿತ್ರ ಈಗಾಗಲೇ ಯು/ಎ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದು, ಶ್ರೀ ಕ್ರೇಜಿಯವರು ಛಾಯಾಗ್ರಹಣಮಾಡುತ್ತಿದ್ದಾರೆ. ಚಿತ್ರದಲ್ಲಿ ರಚನಾ, ಅಭಿ, ಕುಶಿಯವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp