ಟಾಮ್ ಆ್ಯಂಡ್ ಜೆರ್ರಿ ಸಿನಿಮಾದಲ್ಲಿ ಚೈತ್ರಾ ರಾವ್-ನಿಶ್ಚಿತ್ ಜೋಡಿ

ಜೋಡಿ ಹಕ್ಕಿ' ಧಾರಾವಾಹಿ ಮಾಡಿ ಪ್ರಖ್ಯಾತಿ ಗಳಿಸಿದ ನಟಿ ಚೈತ್ರಾ ರಾವ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳೋದಿಕ್ಕೆ ರೆಡಿಯಾಗಿದ್ದಾರೆ.

Published: 14th January 2020 01:31 PM  |   Last Updated: 14th January 2020 02:02 PM   |  A+A-


Nischith and Chaitra Rao

ನಿಶ್ಚಿತ್ ಮತ್ತು ಚೈತ್ರ ರಾವ್

Posted By : Shilpa D
Source : The New Indian Express

ಜೋಡಿ ಹಕ್ಕಿ' ಧಾರಾವಾಹಿ ಮಾಡಿ ಪ್ರಖ್ಯಾತಿ ಗಳಿಸಿದ ನಟಿ ಚೈತ್ರಾ ರಾವ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳೋದಿಕ್ಕೆ ರೆಡಿಯಾಗಿದ್ದಾರೆ.

'ಮಾಯಾ ಬಜಾರ್' ಚಿತ್ರದಲ್ಲಿ ಚೈತ್ರಾ ಇರೋದು ಹಳೇ ವಿಷಯ. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್. ಇದು ಪುನೀತ್ ಅವರ ನಿರ್ಮಾಣದ ಎರಡನೇ ಸಿನಿಮಾ.
ವಿಶ್ವಾಸ್ ಕೆ.ಎಸ್ ಬಯೋಪಿಕ್‌ನಲ್ಲಿ ಕೂಡ ಚೈತ್ರಾ ರಾವ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಯೋಪಿಕ್‌ಗೆ 'ಅರಬ್ಬೀ' ಎಂದು ಹೆಸರಿಡಲಾಗಿದೆ. ಚೈತ್ರಾ ಹೊಸ ಸಿನಿಮಾಕ್ಕೆ 'ಟಾಮ್ ಆ್ಯಂಡ್ ಜೆರ್ರಿ' ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ರಾಘವ್ ವಿನಯ್. 'ಕೆಜಿಎಫ್' ಚಿತ್ರದಲ್ಲಿ ರೈಟರ್ ಆಗಿ ರಾಘವ್ ವಿನಯ್ ಶಿವಗಂಗೆ ಕೆಲಸ ಮಾಡಿದ್ದರು.

"ನನ್ನ ಕಿರುತೆರೆಯ ಪ್ರೇಕ್ಷಕರಿಗೆ ನಾನು ಅಭಿನಯ ಬೇಡುವ ಪಾತ್ರಗಳನ್ನು ಮಾತ್ರ ಮಾಡುತ್ತೇನೆ ಎಂಬುದು ತಿಳಿದಿದೆ. ಹೀಗಾಗಿ ಸಿನಿಮಾ ವಿಚಾರದಲ್ಲೂ ಕೂಡ ಇದೇ ತತ್ವವನ್ನು ನಾನು ಪಾಲಿಸುತ್ತೇನೆ. ಹೀಗಾಗಿ ನನ್ನ ಮುಂದಿನ ಪ್ರಾಜೆಕ್ಟ್‌ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಕಾಮಿಡಿಯಿದೆ.  ಜನವರಿ+15 ರಂದು ಸಿನಿಮಾ ಮುಹೂರ್ತವಿದ್ದು, ಫೆಬ್ರವರಿ 3ರಂದು ಸಿನಿಮಾ ಶೂಟಿಂಗ್ ಆರಂಭವಾಗಲಿದೆ. 
 

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp