ಹಾರ-ತುರಾಯಿ ಬದಲಿಗೆ ದವಸ ಧಾನ್ಯ ತನ್ನಿ:ಅಭಿಮಾನಿಗಳಿಗೆ ದರ್ಶನ್ ಸೂಚನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಸರಳತೆ ದರ್ಶನ್ ಮುಂದುವರೆಸಿದ್ದಾರೆ.

Published: 17th January 2020 12:11 PM  |   Last Updated: 17th January 2020 12:11 PM   |  A+A-


darshan

ದರ್ಶನ್

Posted By : Shilpa D
Source : UNI

ಬೆಂಗಳೂರು: ಸ್ಟಾರ್ ನಟರ ಜನ್ಮದಿನವನ್ನು ಅಭಿಮಾನಿಗಳು ತಮ್ಮಷ್ಟದಂತೆ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ.

ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಜನ್ಮದಿನವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯೂ ಅದೇ ಸರಳತೆ ದರ್ಶನ್ ಮುಂದುವರೆಸಿದ್ದಾರೆ.

ಫೆಬ್ರವರಿ16ರಂದು ದರ್ಶನ್ ಹುಟ್ಟು ಹಬ್ಬ ಇರುವುದರಿಂದ ಹಾರ, ತುರಾಯಿ, ಕೇಕ್ ತರುವ ಬದಲು ಅಕ್ಕಿ ಬೇಳೆ, ದವಸ ಧಾನ್ಯ ತರಲು ಡಿ ಬಾಸ್ ಅಭಿಮಾನಿಗಳಿಗೆ ಸೂಚಿಸಿದ್ದಾರೆ.

ಹುಟ್ಟು ಹಬ್ಬದ ನಂತರ ಸಂಗ್ರಹಣೆ ಆದ ಅಕ್ಕಿ, ಧವಸ ಧಾನ್ಯಗಳನ್ನು ಅನಾಥಾಶ್ರಮಗಳಿಗೆ ತಲುಪಿಸುವ ಪ್ಲಾನ್ ಇಟ್ಟುಕೊಳ್ಳಲಾಗಿದೆ.

ಈಗಾಗಲೇ ಮೈಸೂರಿನಲ್ಲಿ ದವಸ ಧಾನ್ಯ ಸಂಗ್ರಹಿಸುವ ಕೆಲಸಕ್ಕೆ ದರ್ಶನ್ ಅಭಿಮಾನಿಗಳು ಮುಂದಾಗಿದ್ದಾರೆ. 

ದರ್ಶನ್ ಕೂಡ ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕೇಕ್, ಹಾರಕ್ಕೆ ಖರ್ಚು ಮಾಡುವ ಹಣದಲ್ಲಿ ದವಸ-ಧಾನ್ಯ ತೆಗೆದುಕೊಂಡು ಬರುವಂತೆ ಸಂದೇಶ ನೀಡಿದ್ದಾರೆ. ಈ ಮೂಲಕ ಭಿನ್ನವಾಗಿ ಹುಟ್ಟು ಹಬ್ಬ ಆಚರಣೆ ಮಾಡಲು ದರ್ಶನ್ ರೆಡಿ ಆಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp