ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ: ಇಂದು ಕೂಡ ವಿಚಾರಣೆ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಕೂಡ ವಿಚಾರಣೆಯನ್ನು ಮುಂದುವರಿಸಿದ್ದಾರೆ.

Published: 17th January 2020 10:26 AM  |   Last Updated: 17th January 2020 10:30 AM   |  A+A-


Rashmika Mandanna

ರಶ್ಮಿಕಾ ಮಂದಣ್ಣ

Posted By : Sumana Upadhyaya
Source : UNI

ಮಡಿಕೇರಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಕೂಡ ವಿಚಾರಣೆಯನ್ನು ಮುಂದುವರಿಸಿದ್ದಾರೆ.


ಕಳೆದ ರಾತ್ರಿ ರಶ್ಮಿಕಾ ಚೆನ್ನೈಯಿಂದ ಕೊಡಗು ಜಿಲ್ಲೆಯ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಕೆಲ ಹೊತ್ತು ಅವರನ್ನು ಅಧಿಕಾರಿಗಳು ವಿಚಾರಣೆಗೆ ನಡೆಸಿದ್ದರು. ಬಳಿಕ ನಾಳೆ ವಿಚಾರಣೆ ನಡೆಸುವುದಾಗಿ ಹೇಳಿ, ಅಧಿಕಾರಿಗಳು ಮನೆಯಿಂದ ತೆರಳಿ ಸೆರೆನಿಟಿ ಹಾಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.


ವಿರಾಜಪೇಟೆಯಲ್ಲಿ ಕುಕ್ಲೂರಲ್ಲಿ ಐಷಾರಾಮಿ ಬಂಗಲೆ, ಮೈತಾಡಿ ಗ್ರಾಮದಲ್ಲಿ ಮೂರು ಎಕರೆ ಕಾಫಿ ತೋಟ, ಬಿಟ್ಟಂಗಾಲದಲ್ಲಿ 5.50 ಎಕರೆ ಜಾಗ ಸೇರಿದಂತೆ ಕೋಟ್ಯಂತರ ರೂಪಾಯಿ ಆಸ್ತಿ ರಶ್ಮಿಕಾ ಮತ್ತು ಅವರ ತಂದೆಯ ಹೆಸರಿನಲ್ಲಿದೆ. ಆದರೆ ಇವುಗಳಿಗೆ ಸಮರ್ಪಕ ದಾಖಲೆಗಳನ್ನು ಒದಗಿಸಿರಲಿಲ್ಲ.

ಅಲ್ಲದೆ ರಶ್ಮಿಕಾ ತಂದೆ ಮದನ್ ಮಂಜಣ್ಣ ಪೆಟ್ರೋಲ್ ಬಂಕ್, ಶಾಲೆ ನಿರ್ಮಾಣಕ್ಕೆ ಯೋಚಿಸಿದ್ದರು. ವಿರಾಜಪೇಟೆಯಲ್ಲಿ ಸೆರಿನಿಟ್ ಹಾಲ್ ಹೆಸರಿನ ಐಷಾರಾಮಿ ಕಲ್ಯಾಣ ಮಂಟಪವಿದ್ದು ಇಲ್ಲಿನ ಒಂದು ದಿನದ ಬಾಡಿಗೆಯೇ ಒಂದೂವರೆ ಲಕ್ಷ ರೂಪಾಯಿ. ವರ್ಷದ ಹಿಂದೆಯಷ್ಟೇ ವಿರಾಜಪೇಟೆಯ ವಿಜಯನಗರದಲ್ಲಿರುವ ಮನೆಯನ್ನು ರಶ್ಮಿಕಾ ತಂದೆ ಒಂದೂವರೆ ಕೋಟಿ ರೂಪಾಯಿಗೆ ಮಾರಿದ್ದರು. ಇವುಗಳ ಬಗ್ಗೆ ಮಾಹಿತಿ ಪಡೆದಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರಶ್ಮಿಕಾ ಅವರ ಅಭಿಮಾನಿಗಳ ಸೋಗಿನಲ್ಲಿ ಮನೆಗೆ ಬಂದು ಪರಿಶೀಲಿಸಿದ್ದರು.

ಚೆನ್ನೈಯಲ್ಲಿ ಶೂಟಿಂಗ್‌ನಲ್ಲಿದ್ದ ನಟಿಯನ್ನು ತಕ್ಷಣ ಬರುವಂತೆ ಮೆಮೊ ಕಳುಹಿಸಿ ಕರೆಸಿಕೊಂಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp