ವಿಶಿಷ್ಟತೆಗೆ ಮತ್ತೊಂದು ಹೆಸರು ನಾಗತಿಹಳ್ಳಿ ಚಂದ್ರಶೇಖರ್: ನಟಿ ಮಾನ್ವಿತಾ

ಸೂರಿ ನಿರ್ದೇಶನದ ಕೆಂಡ ಸಂಪಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಮಾನ್ವಿತಾ ಕಾಮತ್ ಅವರು, ಶಿವರಾಜ್ ಕುಮಾರ್ ಅಭಿಯನದ ಟಗರು ಹಾಗೂ ಇತರೆ ಕೆಲವು...
ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಸೂರಿ ನಿರ್ದೇಶನದ ಕೆಂಡ ಸಂಪಿಗೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಮಾನ್ವಿತಾ ಕಾಮತ್ ಅವರು, ಶಿವರಾಜ್ ಕುಮಾರ್ ಅಭಿಯನದ ಟಗರು ಹಾಗೂ ಇತರೆ ಕೆಲವು ಚಿತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಹೊಸ ಚಿತ್ರ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ನಲ್ಲೂ ಮಾನ್ವಿತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಮಾನ್ವಿತಾ ಅಭಿನಯದ ಏಳನೇ ಚಿತ್ರವಾಗಿದ್ದು, ನಾಗತಿಹಳ್ಳಿ ಚಂದ್ರಶೇಖರ್ ರಂತಹ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಸೂರಿ ಇಬ್ಬರೂ ಚಿತ್ರ ಕಥೆಯನ್ನು ವಿವರಿಸುವ ರೀತಿ ವಿಭಿನ್ನವಾಗಿರುತ್ತದೆ. ವಿಶೇಷವಾಗಿ ಪ್ರೀತಿ ಬಗ್ಗೆ. ವಿಶಿಷ್ಟತೆಗೆ ಮತ್ತೊಂದು ಹೆಸರು ನಾಗತಿಹಳ್ಳಿ ಚಂದ್ರಶೇಖರ್. ಅವರು ತಮ್ಮ 30 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ 15 ಚಿತ್ರಗಳನ್ನು ಮಾಡಿದ್ದಾರೆ. ಆ ಪೈಕಿ ನಾನು ಅವರ ಉಂಡು ಹೋದ ಕೊಂಡು ಹೋದ ಚಿತ್ರ ಸೇರಿದಂತೆ 12 ಚಿತ್ರಗಳನ್ನು ನೋಡಿದ್ದೇನೆ ಮತ್ತು ಅವರು ಮಾಡಿದ ಎಲ್ಲಾ ಚಿತ್ರಗಳು ಹಿಟ್ ಆಗಿವೆ ಎಂದು ಮಾನ್ವಿತಾ ಹೇಳಿದ್ದಾರೆ.

ಮಂಗಳೂರಿನ ಒಬ್ಬ ಪ್ರೇಕ್ಷಕನಾಗಿ ನಾನು ಅವರ ಅಮೃತಧಾರೆ ಚಿತ್ರವನ್ನು ಹಲವು ಬಾರಿ ನೋಡಿದ್ದೇನೆ ಮತ್ತು ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಅದು ಒಂದು. ನಾನು ವಿಶಿಷ್ಟವಾದ ಚಿತ್ರಗಳಲ್ಲಿ ನಟಿಸಲು ಬಯಸುತ್ತೇನೆ. ಹೀಗಾಗಿ ಈಗ ಇಬ್ಬರೂ ಒಂದೇ ಪುಟದಲ್ಲಿದ್ದೇವೆ ಎನ್ನುತ್ತಾರೆ ಕೆಂಡ ಸಂಪಿಗೆ ಬೆಡಗಿ.

ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ತನ್ನ ಹಿಂದಿನ ಚಿತ್ರ ಅಮೆರಿಕಾ ಅಮೆರಿಕದ ಪ್ರೇಕ್ಷಕರನ್ನು ನೆನಪಿಸುತ್ತದೆ ಎಂದು ನಿರ್ದೇಶಕರು ಆಗಾಗ ಉಲ್ಲೇಖಿಸಿದರೆ, ಮಾನ್ವಿತಾ ಅದನ್ನು ತಮ್ಮ ಹಿಂದಿನ ಕ್ಲಾಸಿಕ್‌ ಚಿತ್ರಗಳೊಂದಿಗೆ ಹೋಲಿಸಲು ಬಯಸುವುದಿಲ್ಲ. ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ವಿಶೇಷವಾಗಿ ಕುಟುಂಬ ವೀಕ್ಷಕರಲ್ಲಿ ಒಂದು ಛಾಪು ಮೂಡಿಸುತ್ತದೆ. ಅವರ ಚಿತ್ರಗಳಿಗೆ ಪ್ರೇಕ್ಷಕರು ಒಂದು ವರ್ಗದವಿದೆ ಮತ್ತು ಈ ಚಿತ್ರ ಖಂಡಿತವಾಗಿಯೂ ಅವರನ್ನು ತಲುಪುತ್ತದೆ ”ಎಂದು ಮಾನ್ವಿತಾ ಹೇಳುತ್ತಾರೆ.

ಇನ್ನು ಖಳನಟನಾಗಿಯೇ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ವಸಿಷ್ಠ ಸಿಂಹ ಅವರು ಮೊದಲ ಬಾರಿಗೆ ನಾಯಕ ನಟನಾಗಿ ಇಂಡಿಯಾ ವರ್ಸಸ್‌ ಇಂಗ್ಲೆಂಡ್‌ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ಬ್ರಿಟಿಷ್‌ ಬಾರ್ನ್‌ ದೇಸಿ ಬಾಯ್ ಆಗಿ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೂ ಹೊಡೆಬಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರಿಗೆ ಇದೊಂದು ಸವಾಲಿನ ಪಾತ್ರವೂ ಹೌದು. ಮಾನ್ವಿತಾ ಕಾಮತ್ ಅವರಿಗೆ ಜೋಡಿಯಾಗಿದ್ದಾರೆ.

ಈಗಾಗಲೇ ಇಂಗ್ಲೆಂಡ್‌ನಲ್ಲಿ ಪ್ರೀಮಿಯರ್‌ ಶೋ ಕಂಡಿರುವ ಈ ಚಿತ್ರ ಜನವರಿ 24ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆ ಕಾಣಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com