ನನ್ನ ಗುರುತು ಮತ್ತೆ ಸಾಧಿಸಲು ಸಾಕಷ್ಟು ಸಮಯ ಬೇಕಾಯಿತು: ನಿರ್ದೇಶಕ ನವೀನ್ ರೆಡ್ಡಿ

ಚೊಚ್ಚಲ ನಿರ್ದೇಶನದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿರುವ ನವೀನ್ ರೆಡ್ಡಿಯವರ ಖಾಕಿ ಚಿತ್ರ ಭಾರೀ ನಿರೀಕ್ಷೆ ಮೂಡಿಸಿವೆ. ಸಹಾಯಕ ನಿರ್ದೇಶಕರಾಗಿದ್ದ ನವೀನ್ ರೆಡ್ಡಿಯವರು 16 ವರ್ಷಗಳ ಬಳಿಕ ಖಾಕಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. 
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ

ಚೊಚ್ಚಲ ನಿರ್ದೇಶನದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿರುವ ನವೀನ್ ರೆಡ್ಡಿಯವರ ಖಾಕಿ ಚಿತ್ರ ಭಾರೀ ನಿರೀಕ್ಷೆ ಮೂಡಿಸಿವೆ. ಸಹಾಯಕ ನಿರ್ದೇಶಕರಾಗಿದ್ದ ನವೀನ್ ರೆಡ್ಡಿಯವರು 16 ವರ್ಷಗಳ ಬಳಿಕ ಖಾಕಿ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. 

ಇದು ನನ್ನ ಅದೃಷ್ಟ ಎಂದೇ ಹೇಳಬಹುದು. ಚಿತ್ರರಂಗದಲ್ಲಿನ ನನ್ನ ಕೆಲ ಸಂಪರ್ಕಗಳು ನನಗೆ ಈ ಜವಾಬ್ದಾರಿಯನ್ನು ಹಿಡಿದಿಡಲು ಸಹಾಯ ಮಾಡಿತು. ರೋಸ್ ಚಿತ್ರದಲ್ಲಿ ತರುಣ್ ಶಿವಪ್ಪ ಅವರೊಂದಿಗೆ ನಾನು ಕೆಲಸ ಮಾಡಿದ್ದೆ. ಇದೀಗ ತರುಣ್ ಅವರೊಂದಿಗೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದರಂತೆ ನನ್ನೊಂದಿಗಿದ್ದವರು ನನಗೆ ಚಿತ್ರ ನಿರ್ದೇಶನ ಮಾಡುವಂತೆ ತಿಳಿಸಿದ್ದರು. ಕೇವಲ ಒಂದು ನಿಯಮದೊಂದಿಗೆ ನನಗೆ ನಿರ್ದೇಶನದ ಜವಾಬ್ದಾರಿ ನೀಡಿದ್ದರು. ಚಿತ್ರದ ಕಥೆ ಅವರದ್ದೇ ಆಗಿರುತ್ತದೆ ಎಂದು ಹೇಳಿದ್ದರು. ಇದೀಗ ಚಿತ್ರದ ನಿರ್ದೇಶನವನ್ನು ನಾನು ಮಾಡುತ್ತಿದ್ದೇನೆಂದು ನವೀನ್ ರೆಡ್ಡಿ ಹೇಳಿದ್ದಾರೆ. 

ಖಾಕಿ ಪೊಲೀಸರ ಸಮಾನಾರ್ಥಕವಾಗಿದೆ. ಆದರೆ, ಚಿತ್ರ ಪೊಲೀಸ್ ಡ್ರಾಮಾಗೆ ಸಂಬಂಧಿಸಿದ್ದಲ್ಲ ಎಂದು ನವೀನ್ ತಿಳಿಸಿದ್ದಾರೆ. 

ಚಿರಂಜೀವಿ ಸರ್ಜಾದ ಉತ್ತಮವಾಗಿ ತಮ್ಮ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಎಲ್ಲರೂ ಪೊಲೀಸ್ ಸಮವಸ್ತ್ರವನ್ನು ಧರಿಸುತ್ತಾರೆ. ಅದಕ್ಕೆ ತಕ್ಕಂತೆ ವರ್ತನೆ ತೋರುತ್ತಾರೆ. ಚಿತ್ರಕ್ಕೆ ವಿದ್ಯಾಧರ್ ಅವರು ಕಥೆ ಬರೆದಿದ್ದು, ನಾಗರೀಕರ ಸಮಸ್ಯೆಗಳ ಮೇಲೆ ಚಿತ್ರ ಬೆಳಕು ಚೆಲ್ಲುತ್ತದೆ ಎಂದಿದ್ದಾರೆ. 

ಚಿತ್ರದಲ್ಲಿರುವ ಸಹಾಯ ನಿರ್ದೇಶಕರು ಹೆಚ್ಚಾಗಿ ಫೀಲ್ಡ್ ವರ್ಕ್ ಮಾಡಿದ್ದು, ಸೆಟ್ ನಲ್ಲಿ ನನ್ನ ಕೆಲಸವನ್ನು ನೋಡಿದವರು ನಾನು ಹೊಸ ನಿರ್ದೇಶಕನಲ್ಲ ಎಂದು ಹೇಳುತ್ತಿದ್ದಾರೆ. ತರುಣ್ ಟಾಕೀಸ್ ಬ್ಯಾನರ್ ನಲ್ಲಿ ಚಿತ್ರ ಬರುತ್ತಿದ್ದು, ಜನವರಿ 24ಕ್ಕೆ ಬಿಡುಗಡೆಗೊಳ್ಳಲಿದೆ. ತಾನ್ಯಾ ಹೋಪ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವಮಣಿ, ಛಾಯಾ ಸಿಂಗ್, ರಘುರಾಮಪ್ಪ ಹಾಗೂ ದೇವ್ ಗಿಲ್ ಅವರು ಚಿತ್ರದಲ್ಲಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com