ಅಭಿಮಾನಿಗಳಿಗೆ ನಿರಾಸೆ: ಎಸ್ಎಸ್ ರಾಜಮೌಳಿ "ಆರ್ ಆರ್ ಆರ್" ಚಿತ್ರದಲ್ಲಿ ನಟಿಸುತ್ತಿಲ್ಲ, ಕಿಚ್ಚ ಸ್ಪಷ್ಟನೆ

ಬಾಹುಬಲಿ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಮತ್ತೊಂದು ಭಾರಿ ಬಜೆಟ್ ತೆಲುಗು ಸಿನಿಮಾ ಆರ್.ಆರ್.ಆರ್. ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ನಾಯಕರಾಗಿ ನಟಿಸುತ್ತಿದ್ದಾರೆ.

Published: 19th January 2020 09:00 PM  |   Last Updated: 19th January 2020 09:00 PM   |  A+A-


Kichcha Sudeepa

ಕಿಚ್ಚ ಸುದೀಪ್

Posted By : Vishwanath S
Source : UNI

ಬೆಂಗಳೂರು: ಬಾಹುಬಲಿ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಮತ್ತೊಂದು ಭಾರಿ ಬಜೆಟ್ ತೆಲುಗು ಸಿನಿಮಾ ಆರ್.ಆರ್.ಆರ್. ಈ ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ನಾಯಕರಾಗಿ ನಟಿಸುತ್ತಿದ್ದಾರೆ.  

ಈ ಚಿತ್ರಕ್ಕೆ ಸಂಬಂಧಿಸಿದಂತೆ  ಹಬ್ಬಿರುವ ಸುದ್ದಿಗಳಿಗೆ ನಾಯಕ ನಟ ಕಿಚ್ಚ ಸುದೀಪ್ ಭಾನುವಾರ ಪ್ರತಿಕ್ರಿಯಿಸಿದ್ದಾರೆ. 

ರಾಜಮೌಳಿ ಸಿನಿಮಾದಲ್ಲಿ  ಸುದೀಪ್ ಇರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ  ಹರಿದಾಡುತ್ತಿರುವ ಹಿನ್ನಲೆಯಲ್ಲಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ನಾನು ಆರ್ ಆರ್ ಆರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿ ಕೇಳಿ ಸಂತೋಷ ಪಡುತ್ತಿರುವವರಿಗೆ ಒಂದು ವಿಷಯ ತಿಳಿಸುತ್ತೇನೆ. ನೀವು ಕೇಳಿದ ಸುದ್ದಿ ನಿಜವಲ್ಲ. ಚಿತ್ರಕ್ಕೆ ಸಂಬಂಧಿಸಿದಂತೆ ಯಾರೊಬ್ಬರೂ ನನ್ನೊಂದಿಗೆ ಯಾವುದೇ ಸಂಪರ್ಕಮಾಡಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp