‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’: ಬೆಳ್ಳಿತೆರೆ ಮೇಲೆ ಮಂಗಳೂರು ಬಾಂಬರ್ ಸ್ಟೋರಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ರಾಜ್ಯದ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ ಆದಿತ್ಯ ರಾವ್ ನನ್ನು ಪೋಲೀಸರು ಬಂಧಿಸಿ ಹತ್ತು ದಿನಗಳ ಕಾಲ ವಶಕ್ಕೆ ಪಡೆಇದ್ದಾರೆ. ಇತ್ತ ದೇಶಾದ್ಯಂತ ಸುದ್ದಿಯಾಗಿದ್ದ ಇದೇ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ತಯಾರಿಸಲು ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆ
‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’: ಬೆಳ್ಳಿತೆರೆ ಮೇಲೆ ಮಂಗಳೂರು ಬಾಂಬರ್ ಸ್ಟೋರಿ
‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’: ಬೆಳ್ಳಿತೆರೆ ಮೇಲೆ ಮಂಗಳೂರು ಬಾಂಬರ್ ಸ್ಟೋರಿ

ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ರಾಜ್ಯದ ಜನತೆಯಲ್ಲಿ ಭೀತಿ ಹುಟ್ಟಿಸಿದ್ದ ಆದಿತ್ಯ ರಾವ್ ನನ್ನು ಪೋಲೀಸರು ಬಂಧಿಸಿ ಹತ್ತು ದಿನಗಳ ಕಾಲ ವಶಕ್ಕೆ ಪಡೆಇದ್ದಾರೆ. ಇತ್ತ ದೇಶಾದ್ಯಂತ ಸುದ್ದಿಯಾಗಿದ್ದ ಇದೇ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಸಿನಿಮಾ ತಯಾರಿಸಲು ನಿರ್ಮಾಪಕರೊಬ್ಬರು ಮುಂದಾಗಿದ್ದಾರೆ. ಇದಕ್ಕಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನೂ ನೊಂದಾಯಿಸಿದ್ದಾರೆ.

‘1st ರ‍್ಯಾಂಕ್‌ ಟೆರರಿಸ್ಟ್ ಆದಿತ್ಯ’  ಎಂಬ ಹೆಸರಲ್ಲಿ ಸಿನಿಮಾ ಮಾಡಲು ನಿರ್ಮಾಪಕ ತುಳಸಿರಾಮ್ ನಿರ್ಧರಿಸಿದ್ದು ಇದಕ್ಕಾಗಿ  ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ಮಾಡಿಸಿದ್ದಾರೆ.

ಚಿತ್ರೀಕರಣ ಇನ್ನು ಎರಡು-ಮೂರು ತಿಂಗಳಲ್ಲಿ ಪ್ರಾರಂಭವಾಗಲಿದ್ದು ನಿರ್ದೇಶಕ ಬಿ.ಆರ್. ಕೇಶವ್ ಚಿತ್ರ ನಿರ್ದೇಶನ ಮಾಡಲಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ಕೊಟ್ಟಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದ ಬಾಂಬರ್ ಆದಿತ್ಯ ರಾವ್ ಕುರಿತು ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ, ವರದಿಗಳನ್ನು ಆಧಾರವಾಗಿಟ್ಟುಕೊಂಡು ಚಿತ್ರಕಥೆ ತಯಾರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com