25 ವರ್ಷದ ಹಿಂದೆ ರಘು ದೀಕ್ಷಿತ್ ಸಂಯೋಜಿಸಿದ್ದ ಹಾಡು ಲವ್ ಮಾಕ್ಟೈಲ್ ನಲ್ಲಿ

ಕೃಷ್ಣ ನಿರ್ದೇಶನದ ಲವ್ ಮಾಕ್ಟೈಲ್ ಸಿನಿಮಾಗಾಗಿ ರಘು ದೀಕ್ಷಿತ್ ಐದು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

Published: 25th January 2020 02:01 PM  |   Last Updated: 25th January 2020 02:01 PM   |  A+A-


Raghu Dixit

ರಘು ದೀಕ್ಷಿತ್

Posted By : shilpa
Source : The New Indian Express

ಕೃಷ್ಣ ನಿರ್ದೇಶನದ ಲವ್ ಮಾಕ್ಟೈಲ್ ಸಿನಿಮಾಗಾಗಿ ರಘು ದೀಕ್ಷಿತ್ ಐದು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಶೇಷವಾಗಿ ಮತ್ತೊಂದು ಹಾಡಿಗೆ ರಾಗ ಸಂಯೋಜಿಸಿದ್ದಾರೆ. ಕಣ್ಣ ಹನಿಯೊಂದು ಕಣ್ಣಲ್ಲೇ ತೂಗಿ, ಏಕೆ ಹೀಗೊಂದ ಭಾರ ಎದೆಯೊಳಗೆ ಎಂಬ ಹಾಡಿಗೆ ವಿಶೇಷವಾಗಿ ಸಂಗೀತ ನೀಡಿದ್ದಾರೆ,  ಅವರೇ ಈ ಹಾಡಿಗೆ ರಾಗ ಸಂಯೋಜಿಸಿ ಹಾಡಿದ್ದಾರೆ.  25 ವರ್ಷದ ಹಿಂದೆ ರಾಗ ಸಂಯೋಜಿಸಿದ್ದ ಹಾಡು ಲವ್ ಮಾಕ್ಟೈಲ್ ನಲ್ಲಿ ಸ್ಥಾನ ಪಡೆದಿದೆ.

ನಾನು ಗಿಟಾರ್ ನುಡಿಸುವುದನ್ನು ಆರಂಭಿಸಿದಾಗ ಮೊದಲು ಸಂಯೋಜಿಸಿದ ಹಾಡು ಇದಾಗಿದೆ. ಇದರಿಂದಲೇ ನನ್ನ ಸಂಗೀತ ಪಯಣ ಆರಂಭವಾಯಿತು ಎಂದು ರಘು ದೀಕ್ಷಿತ್ ಹೇಳಿದ್ದಾರೆ. ಈ ಮುಂಚೆ ಈ ಹಾಡನ್ನು ಬಳಸಿಕೊಳ್ಳುವ ಅವಕಾಶ ನನಗೆ ಸಿಕ್ಕಿರಲಿಲ್ಲ. ಈ ಹಿಂದೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದೇನೆ, ಆದರೆ ಈ ಹಾಡನ್ನು ಬಳಸಿಕೊಂಡಿರಲಿಲ್ಲ.ಯ

ಪ್ರತಿಯೊಂದಕ್ಕೂ ಸಮಯ ಎಂಬುದು ಇರುತ್ತದೆ.  ಈ ಸಂದರ್ಭ ಮತ್ತು ಈ  ಸಿನಿಮಾ ಎರಡಕ್ಕೂ ಈ ಹಾಡು ಸರಿಯಾಗಿ ಹೊಂದಿಕೊಳ್ಳುತ್ತದೆ,  ಸಿನಿಮಾ ನೋಡಿ ಚಿತ್ರಮಂದಿರದಿಂದ ಹೊರ ಬಂದ ನಂತರವೂ ನಿಮ್ಮ ಮನಸ್ಸಿನಲ್ಲಿ ಈ ಹಾಡು ಅಚ್ಚಳಿಯದೇ ಉಳಿಯುತ್ತದೆ ಎಂದು ಹೇಳಿದ್ದಾರೆ.

ಈ ವರ್ಷದಲ್ಲಿ ರಘು 7 ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದಾರೆ. ನಿನ್ನ ಸನಿಹೆ, ಆರ್ಕೆಸ್ಟ್ರಾ, ಮತ್ತು ಗರುಡ  ಸೇರಿದಂತೆ 7 ಸಿನಿಮಾ ರಘು ಕೈಯ್ಯಲ್ಲಿವೆ. 


Stay up to date on all the latest ಸಿನಿಮಾ ಸುದ್ದಿ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp