ರಜನಿ ಮುಂದಿನ ಚಿತ್ರಕ್ಕೆ ಕಮಲ್ ಹಾಸನ್ ನಿರ್ಮಾಪಕ?
ಸೂಪರ್ ಸ್ಟಾರ್ ರಜನಿಕಾಂತ್ ಅವರ ಮುಂದಿನ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ ಎಂಬಂತಹ ಹೊಸ ಸುದ್ದಿಯೊಂದು ಕಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಈ ಸಿನಿಮಾವನ್ನು ಲೋಕೇಶ್ ಕನಾಗರಾಜ್ ನಿರ್ದೇಶಿಸಲಿದ್ದಾರೆ.
Published: 25th January 2020 08:10 PM | Last Updated: 25th January 2020 08:10 PM | A+A A-

ರಜನಿ ಕಾಂತ್ , ಕಮಲ್ ಹಾಸನ್
ಚೆನ್ನೈ: ಸೂಪರ್ ಸ್ಟಾರ್ ರಜನಿ ಕಾಂತ್ ಅವರ ಮುಂದಿನ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡಲಿದ್ದಾರೆ ಎಂಬಂತಹ ಹೊಸ ಸುದ್ದಿಯೊಂದು ಕಾಲಿವುಡ್ ಅಂಗಳದಿಂದ ಕೇಳಿಬಂದಿದೆ. ಈ ಸಿನಿಮಾವನ್ನು ಲೋಕೇಶ್ ಕನಾಗರಾಜ್ ನಿರ್ದೇಶಿಸಲಿದ್ದಾರೆ.
ಪ್ರಸ್ತುತ ನಿರ್ದೇಶಕ ಶಿವ ಅವರೊಂದಿಗೆ 168 ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಂಡಿರುವ ರಜನಿ ಕಾಂತ್, ಪೂರ್ಣ ಪ್ರಮಾಣದ ರಾಜಕೀಯಕ್ಕೆ ತೊಡಗಿಸಿಕೊಳ್ಳುವ ಮುನ್ನ ಕಮಲ್ ಹಾಸನ್ ಅವರೊಂದಿಗೆ ಸಿನಿಮಾ ಮಾಡಲು ಎದುರು ನೋಡುತ್ತಿದ್ದಾರೆ. ಇತ್ತೀಚಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ನಿರ್ದೇಶಕ ಲೋಕೇಶ್ ಅವರಿಂದ ಈ ಸಿನಿಮಾ ಮಾಡಿಸಲು ಕಮಲ್ ಹಾಸನ್ ಆಸಕ್ತಿ ವಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದು ನಿಜವಾದರೆ ಮೊದಲ ಬಾರಿಗೆ ಕಮಲ್ ಹಾಸನ್ ಪ್ರೊಡಕ್ಷನ್ ಹೌಸ್ ರಜನಿಕಾಂತ್ ಜೊತೆಗೆ ಮೊದಲ ಬಾರಿಗೆ ಸಿನಿಮಾ ಮಾಡಲಿದೆ. ಸದ್ಯದಲ್ಲಿ ಅಧಿಕೃತ ಮಾಹಿತಿ ಹೊರಹೊಮ್ಮುವ ಸಾಧ್ಯತೆ ಇದೆ.
ಈ ಮಧ್ಯೆ ಕಮಲ್ ಹಾಸನ್ ಇಂಡಿಯನ್ -2 ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾದ ಅಂತಿಮ ಚಿತ್ರೀಕರಣಕ್ಕೆ ಲೋಕೇಶ್ ಸಿದ್ಧತೆ ನಡೆಸುತ್ತಿದ್ದಾರೆ.