'ಲವ್ ಮಾಕ್‌ಟೇಲ್‌' ನನಗೆ ಹೊಸ ಮಾರ್ಗ ತೆರೆಯುತ್ತದೆ: ಅಮೃತ ಅಯ್ಯಂಗಾರ್

ಮುಂದಿನ ಕೆಲವು ತಿಂಗಳುಗಳು ಅಮೃತ ಅಯ್ಯಂಗಾರ್ ತಮ್ಮ ಸಾಲು ಸಾಲು ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿರಲಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ಕಾಲೂರಲು ಪ್ರಯತ್ನಿಸಿರುವ ನಟಿ "ಲವ್ ಮಾಕ್‌ಟೇಲ್‌" ಬಿಡುಗಡೆಯ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ. 
ಲವ್ ಮಾಕ್‌ಟೇಲ್‌' ಚಿತ್ರದ ದೃಶ್ಯ
ಲವ್ ಮಾಕ್‌ಟೇಲ್‌' ಚಿತ್ರದ ದೃಶ್ಯ

ಮುಂದಿನ ಕೆಲವು ತಿಂಗಳುಗಳು ಅಮೃತ ಅಯ್ಯಂಗಾರ್ ತಮ್ಮ ಸಾಲು ಸಾಲು ಚಿತ್ರಗಳ ಬಿಡುಗಡೆ ನಿರೀಕ್ಷೆಯಲ್ಲಿರಲಿದ್ದಾರೆ.ಸ್ಯಾಂಡಲ್‌ವುಡ್‌ನಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ಕಾಲೂರಲು ಪ್ರಯತ್ನಿಸಿರುವ ನಟಿ "ಲವ್ ಮಾಕ್‌ಟೇಲ್‌" ಬಿಡುಗಡೆಯ ದಿನಾಂಕದ ನಿರೀಕ್ಷೆಯಲ್ಲಿದ್ದಾರೆ. ಈ ಚಿತ್ರ ಫೆಬ್ರವರಿಯಲ್ಲಿ ಸೂರಿಯ ಪಾಪ್‌ಕಾರ್ನ್‌ ಮಂಕಿ ಟೈಗರ್‌ ಮತ್ತು ಮಾರ್ಚ್‌ನಲ್ಲಿ ಶಿವಾರ್ಜುನ ತೆರೆಕಂಡ ಬಳಿಕ ತೆರೆ ಕಾಣಲಿದೆ/ಪ್ರಸ್ತುತ ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಗಾಗಿ ಡಬ್ಬಿಂಗ್ ಮಾಡುತ್ತಿರುವ ನಟಿ ಧನಂಜಯ್ ಚೊಚ್ಚಲ ನಿರ್ಮಾಣದ ಚಿತ್ರವಾಗಿರುವ "ಬಡವ ರ್ಯಾಸ್ಕಲ್" ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದಾರೆ.

"ಇದೊಂದು ಕ್ಯಾಂಡಿಫ್ಲೋಸ್ ರೊಮ್ಯಾಂಟಿಕ್ ಡ್ರಾಮಾ ಆಗಿ ಪ್ರಾರಂಬವಾಗಲಿದ್ದು ಕಡೆಯಲ್ಲಿ  ಪ್ರಬುದ್ಧ ತಿರುವು ಪಡೆಯುತ್ತದೆ. ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೆ ತಲುಪಿಸಬಹುದಾದ ವಿಷಯವಾಗಿದೆ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಕೆಲಸ ಮಾಡುವಾಗಲೇ ಈ ಚಿತ್ರ ಸಿಕ್ಕಿತು. ಆ ಚಿತ್ರದ ಸೆಟ್ ನಲ್ಲೇ  ಕೃಷ್ಣ ನನ್ನನ್ನು ಕರೆದು ಅವರ ಚೊಚ್ಚಲ ನಿರ್ದೇಶನದ ಬಗ್ಗೆ ಪ್ರಸ್ತಾಪಿಸಿದರು. ಮೈಸೂರು ಉಚ್ಚಾರಣೆಯಲ್ಲಿ ಸರಿಯಾದ ಕನ್ನಡ ಮಾತನಾಡಬಲ್ಲ ಹುಡುಗಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿದರು. ನಾನು ನನ್ನ ಆಡಿಷನ್ ನೀಡಿದೆ ಹಾಗೂ ಚಿತ್ರಕ್ಕೆ ಆಯ್ಕೆಯಾಗಿದ್ದೆ."

ಕೃಷ್ಣನೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿರುವ ಬಗೆಗೆ ಹೇಳುವ ನಟಿ ಜತೆಗೆ ಮಿಲನಾ ನಾಗರಾಜ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಕೃಷ್ಣ ಒಬ್ಬ ಅದ್ಭುತ ನಿರ್ದೇಶಕ, ಲವ್‌ ಮಾಕ್‌ಟೇಲ್‌ ಚಿತ್ರದ ವೇಳೆ ಇದು ನನಗೆ ಅರಿವಾಗಿದೆ.  ಕಥೆ ಸರಳವಾಗಿದೆ, ಆದರೆ ಅವರು ನಿರ್ಮಾಣ ಂಆಡುವುದರಲ್ಲಿ ವಿಶೇಷತೆ ಹೊಂದಿದ್ದಾರೆ.ಸೂರಿಯಂತಹ ನಿರ್ದೇಶಕರಡಿಯಲ್ಲಿ ಕೆಲಸ ಮಾಡಿದ ಅವರ ಅನುಭವವು ಅವರ ನಿರ್ದೇಶನದ ಸಾಮರ್ಥ್ಯಗಳನ್ನು ನಿರ್ಣಯಿಸಲು ಸಹಾಯ ಮಾಡಿತು. ತನಗೆ ಯಾವ ರೀತಿಯ ಶಾಟ್ ಗಳು ಬೇಕು, ಮತ್ತು ಯಾವ ಲೆಂತ್ ಗಳು ಬೇಕು ಎಂದು ಅವರಿಗೆ ತಿಳಿದಿದೆ"ನಿರ್ದೇಶಕ ಮತ್ತು ನಟನಾಗಿ ಎರಡೂ ಜವಾಬ್ದಾರಿಯಲ್ಲಿ ಅವರು ಯಶಸ್ವಿಯಾಗುತ್ತಿದ್ದಾರೆ.

 “ಪ್ರೀತಿಯ ಪ್ರತಿಯೊಂದು ಹಂತವೂ ಈ ಚಿತ್ರದಲ್ಲಿ ವಿವರಿಸಲಾಗಿದೆ. ಲವ್ ಮಾಕ್‌ಟೇಲ್‌ ಅನ್ನು ಹೇಗೆ ವ್ಯಾಖ್ಯಾನಿಸಲು ಬಯಸುತ್ತೇನೆ ಎಂಬುದು. ಇದು ನಮ್ಮ ಶಾಲೆ, ಕಾಲೇಜು ಮತ್ತು ನಂತರದ ದಿನಗಳಲ್ಲಿ ಏನಾಗುತ್ತದೆ ಎಂಬುದರ ಕುರಿತು ಹೇಳಲಿದೆ ಆದರೆ  ವಾಸ್ತವದಲ್ಲಿ, ನಿಜವಾದ ಪ್ರೀತಿ ಎಂದರೇನು? ಈ ರೋಮ್ಯಾಂಟಿಕ್ ಕಾಮಿಡಿ ಡ್ರಾಮಾದ ಮೂಲಕ ಕೃಷ್ಣ ಅನ್ವೇಷಿಸಲು ಪ್ರಯತ್ನಿಸಿದ ಸಂಗತಿಯಾಗಿದೆ ”ಎಂದು ಅಮೃತ ಹೇಳುತ್ತಾರೆ, ರಘು ದೀಕ್ಷಿತ್ ಅವರ ಸಂಗೀತವು ಚಿತ್ರಕ್ಕೆ ಒಂದು ಪ್ಲಸ್ ಪಾಯಿಂಟ್ ಆಗಿರುತ್ತದೆ.

 “ಹದಿಹರೆಯದರು ಆಕರ್ಷಣೆಯನ್ನೇ ಪ್ರೀತಿ ಎಂದು ಭಾವಿಸುತ್ತಾರೆ. ಆದರೆ ಅವಳು ಅರಿತುಕೊಳ್ಳುವ ಮೊದಲು, ಎಲ್ಲವೂ ಮುಗಿದಿರುತ್ತದೆ.ಚಿತ್ರದಲ್ಲಿ ನಾನು ನಿರ್ವಹಿಸುವ ಪಾತ್ರ ಸರಳ ಮತ್ತು ಅಚ್ಚುಕಟ್ಟಾಗಿರುತ್ತದೆ, ಯಾವುದೇ ಡ್ರಾಮಾ ಇರಲ್ಲ"

ಲವ್ ಮಾಕ್‌ಟೇಲ್‌ ತನಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಅಮೃತ ಭರವಸೆ ಹೊಂದಿದ್ದಾರೆ.. “ನನ್ನ ಕೊನೆಯ ಎರಡು ಚಿತ್ರಗಳು ನನಗೆ ಆ ರೀತಿಯಅಟೆನ್ಷನ್ ಕೊಟ್ಟಿಲ್ಲ. ಆದರೆ ಈ ಚಿತ್ರ ನನಗೆ ಮುಂದಿನ ವ್ಚಿತ್ರಜೀವನದ ಬಗೆಗೆ ಭರವಸೆ ಮೂಡಿಸುತ್ತಿದೆ"ಅವರು ಹೇಳೀದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com