ನಾನು ಕನ್ನಡ ಕಲಿಯಲು ಸಾಕಷ್ಟು ಶ್ರಮಿಸಿದೆ: 'ಬಿಳೀ ಹೆಂಡ್ತಿ' ನಾಯಕಿ ಕ್ರಿಸ್ಟಿನಾ  

ನಾನು ನಟನೆಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಒಂದು ಅಚ್ಚರಿ. ಏಕೆಂದರೆ ನಾನೆಂದೂ ಆ ಬಗ್ಗೆ ಯೋಚಿಸಿರಲಿಲ್ಲ ಎಂದು  ಕ್ರಿಸ್ಟಿನಾ ಡೆವಿನಾ ಹೇಳಿದ್ದಾರೆ.ಅವರು ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಬಿಳೀ ಹೆಂಡ್ತಿ" ಧಾರಾವಾಹಿಯ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. 
ಕ್ರಿಸ್ಟಿನಾ ಡೆವಿನಾ
ಕ್ರಿಸ್ಟಿನಾ ಡೆವಿನಾ

ನಾನು ನಟನೆಯ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಒಂದು ಅಚ್ಚರಿ. ಏಕೆಂದರೆ ನಾನೆಂದೂ ಆ ಬಗ್ಗೆ ಯೋಚಿಸಿರಲಿಲ್ಲ ಎಂದು  ಕ್ರಿಸ್ಟಿನಾ ಡೆವಿನಾ ಹೇಳಿದ್ದಾರೆ.ಅವರು ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಬಿಳೀ ಹೆಂಡ್ತಿ" ಧಾರಾವಾಹಿಯ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ.

ಕ್ರಿಸ್ಟಿನಾ  ಪ್ರಕಾರ, ತನ್ನ ವೃತ್ತಿಜೀವನದ ಆರಂಭದಲ್ಲಿ ಕಿರುತೆರಯಲ್ಲಿ ಕಾಣಿಸುವುದು ಅಷ್ಟೊಂದು ಉಚಿತವಲ್ಲ. ಹಾಗಾದರೂ ಬಿಳೀ ಹೆಂಡ್ತಿಯ ಕಥೆ ಆಕೆಗೆ ಸಾಕಷ್ಟು ಹತ್ತಿರವಾಗಿತ್ತು."ಸಾಂಪ್ರದಾಯಿಕ ಕನ್ನಡಿಗ ಮನೆತನದ ಯುವಕ ಪೋಲಿಷ್ ಮೂಲದ ಹುಡುಗಿಯನ್ನು ಮದುವೆಯಾಗಿರುವುದರಿಂದ ಕಥೆ ಪ್ರಾರಂಭಗೊಳ್ಳುತ್ತದೆ. ಬೇರೆ ಬೇರೆ ಸಂಪ್ರದಾಯಗಳನ್ನು ಒಗ್ಗೂಡಿಸಿಕೊಂಡಿರುವ ನಾನು ಸಾಂಸ್ಕೃತಿಕ ಅಡೆತಡೆಗಳೊಂದಿಗಿನ ಹೋರಾಟಗಳನ್ನು ಸಾಕಷ್ಟು ಸಾಪೇಕ್ಷವಾಗಿ ಕಂಡುಕೊಂಡಿದ್ದೇನೆ  ಎಂದು ಅವರು ಹೇಳಿದ್ದಾರೆ.

ಧಾರಾವಹಿಯು ವಾರದ ಆರು ದಿನ ಟಿವಿ ಹಾಗೂ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತದೆ.ನಟಿಗೆ ಭಾಷೆ ದೊಡ್ಡ ಅಡ್ಡಿಯಾಗಬಹುದೆಂದು ಯಾರಾದರೂ ಸುಲಭವಾಗಿ ಹೇಳಬಹುದು. ಆದರೆ ಅದು ತನಗೆ ಒಳ್ಳೆಯ ಎಕ್ಸರ್ಸೈಜ್ ಆಗಿದೆ ಎಂದು ಕ್ರಿಸ್ಟಿನಾ ನುಡಿದಿದ್ದಾರೆ."ನನ್ನ ಸಂಭಾಷಣೆಗಳನ್ನು ಕನ್ನಡದಲ್ಲಿ ತಲುಪಿಸಬೇಕಾಗಿರುವುದರಿಂದ ಭಾಷೆಯ ಭಾಗವು ಕಷ್ಟಕರವಾಗಿತ್ತು. ನಾನು  ಶೂಟಿಂಗ್ ನಡೆಸುವ ಸೆಟ್ ಗೆ ಹೊಂದಿಕೊಳ್ಳಲು ಬಹಳವೇ ಶ್ರಮ ಬೇಕಾಗಿತ್ತು.ಭಾಷೆಯನ್ನು ಕಲಿಯಲು ನಾನು ತುಂಬಾ ಶ್ರಮಿಸಿದೆ ಮತ್ತು ಈ ಧಾರಾವಾಹಿ ನನ್ನ ಜೀವನವನ್ನು ಬದಲಿಸಲಿದೆ" ಅವರು ಬಾವಿಸಿದ್ದಾರೆ.

ಕನ್ನಡ ಮನರಂಜನಾ ಉದ್ಯಮದಲ್ಲಿ ಅವರ  ಸ್ಥಾನ ಕಡಿಮೆಯಾಗಿದ್ದರೂ ಸಹ ಅವರೀಗಾಗಲೇ ಸ್ಯಾಂಡಲ್ ವುಡ್ ಬಗ್ಗೆ ಸಹ ಯೋಜಿಸಿದ್ದಾರೆ. . "ನಾನು ಹಲವಾರು ನಟರನ್ನು ನೋಡಿದ್ದೇನೆ. ಅವರು ಸಾಮಾನ್ಯ ಹಿನ್ನೆಲೆಯಿಂದ ಬಂದಿದ್ದರೂ ಯಶಸ್ಸಿನ ಉತ್ತುಂಗ ತಲುಪಿದ್ದಾರೆ.. ಅಂತಹ ಒಬ್ಬ ನಟ ಯಶ್; ಅವರ ಕಠಿಣ ಪರಿಶ್ರಮವೇ ಮಾತನಾಡುತ್ತದೆ, ಅಂತಹವರಿಂದ  ನಾನು ಸ್ಫೂರ್ತಿ ಪಡೆಯುತ್ತೇನೆ, ಏಕೆಂದರೆ ಅವರು ಎಂದಿಗೂ ಅವರ ಖ್ಯಾತಿ ಮತ್ತು ಯಶಸ್ಸನ್ನು ಅಹಂಕಾರಆಗಿ ಪರಿವರ್ತಿಸುವುದಿಲ್ಲ. ನಮ್ರತೆಯನ್ನು ತ್ಯಜಿಸುವುದಿಲ್ಲ.

ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಕ್ರಿಸ್ಟಿನಾ ಶೂಟಿಂಗ್ ಗಾಗಿ ಬೆಂಗಳುರಿಗೆ ಬರುತ್ತಾರೆ, ಅವರ ಬ್ಯುಸಿ ಶೆಡ್ಯೂಲ್ ಜತೆಗೇ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣಗಳಾದ ಮೈಸೂರು, ಜೋಗ್ ಫಾಲ್ಸ್ ನಂತಹಾ ತಾಣಗಳ ಬೇಟಿಗೆ ಆಕೆ ಮರೆಯಲಿಲ್ಲ. ಅವರಿಗೆ ಕರ್ನಾಟಕದ ಹವಾಗುಣಕ್ಕಿಂತಲೂ ಇಲ್ಲಿನ ಆಹಾರ ಹೆಚ್ಚು ಮೆಚ್ಚುಗೆಯಾಗಿದೆ.

ಬಿಳೀ ಹೆಂಡ್ತಿಯ ಯಶಸ್ಸಿನ ಬಳಿಕ ಈ ನಟಿಗೆ ಸಾಕಷ್ಟು ಬೇಡಿಕೆ ಬಂದಿದೆ. ಆದರೆ ಇವರಿಗೆ ನಟನೆಯಲ್ಲೇ ಮುಂದುವರಿಯಲು ಅಷ್ಟಾಗಿ ಮನಸ್ಸು ಒಪ್ಪುತ್ತಿಲ್ಲ. ಬದಲಿಗೆ ಆಕೆ ಟ್ರಾವೆಲ್ ಶೋ, ಡಾಕ್ಯುಮೆಂಟರಿಗಳನ್ನು ಮಾಡಲು ಬಯಸುತ್ತಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮಾಧ್ಯಮ ಮತ್ತು ಪತ್ರಿಕೋದ್ಯಮದಲ್ಲಿ ಕೋರ್ಸ್ ಮುಗಿಸಿದ ನಂತರ, ಅವರು 2017 ರಲ್ಲಿ ಭಾರತಕ್ಕೆ ಮರಳಿದರು ಮತ್ತು ಮುಂಬೈ, ದೆಹಲಿಯಲ್ಲಿ ಸುದ್ದಿ ನಿರ್ಮಾಪಕರಾಗಿ ಮತ್ತು ನಿರೂಪಕರಾಗಿ ವಿವಿಧ ಮಾಧ್ಯಮ ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು. ಆದರೆ ಡೆಸ್ಟಿನಿ ಅವಳಿಗೆ ವಿಭಿನ್ನ ಯೋಜನೆಗಳನ್ನು ನೀಡೀತ್ತು.ಇದೀಗ, ಅವರು ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಕೆಲಸ ಮಾಡಲು ಒಲವು ತೋರುತ್ತಿದ್ದಾರೆ, ಇದು ವೀಕ್ಷಕರ ಮೇಲೆ ಸಕಾರಾತ್ಮಕ ಸಾಮಾಜಿಕ ಪರಿಣಾಮವನ್ನು ಬೀರುತ್ತದ ಎಂದು ಆಕೆ ಭಾವಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com