ಆಕ್ಷನ್ ದೃಶ್ಯದ ಶೂಟಿಂಗ್ ಮುಗಿಸಿದ 'ಕಬ್ಜ'

ನಿರ್ದೇಶಕ ಆರ್. ಚಂದ್ರು    ಜನವರಿ 29 ರಂದು ರಿಯಲ್ ಸ್ಟಾರ್ ಉಪೇಂದ್ರ ಜತೆಗಿನ "ಕಬ್ಜ" ಚಿತ್ರದ ಮೊದಲ ಹಂತದ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಳಿಸಲಿದ್ದಾರೆ.. ಭೂಗತ ಜಗತ್ತಿನಲ್ಲಿ ಫ್ರೆಶ್ ಟೇಕ್ ಎಂದು ಹೇಳಲಾಗುವ ಕಥಾನಕದ ಚಿತ್ರೀಕರಣ ಪ್ರಮುಖ ಆಕ್ಷನ್ ಬ್ಲಾಕ್ ಹಾಗೂ ಡ್ಯಾನ್ಸ್ ನೊಂದಿಗೆ ಪ್ರಾರಂಭಗೊಂಡಿತ್ತು. ಸ್ಟಂಟ್ ಮಾಸ್ಟರ್ ರವಿವರ್ಮ ಅವರಿಂದ. ಕಲಾ ನಿರ್ದೇಶಕ ಶಿವಕುಮಾ
ಕಬ್ಜ ಚಿತ್ರದ ದೃಶ್ಯ
ಕಬ್ಜ ಚಿತ್ರದ ದೃಶ್ಯ

ನಿರ್ದೇಶಕ ಆರ್. ಚಂದ್ರು    ಜನವರಿ 29 ರಂದು ರಿಯಲ್ ಸ್ಟಾರ್ ಉಪೇಂದ್ರ ಜತೆಗಿನ "ಕಬ್ಜ" ಚಿತ್ರದ ಮೊದಲ ಹಂತದ ಶೂಟಿಂಗ್ ಶೆಡ್ಯೂಲ್ ಪೂರ್ಣಗೊಳಿಸಲಿದ್ದಾರೆ.. ಭೂಗತ ಜಗತ್ತಿನಲ್ಲಿ ಫ್ರೆಶ್ ಟೇಕ್ ಎಂದು ಹೇಳಲಾಗುವ ಕಥಾನಕದ ಚಿತ್ರೀಕರಣ ಪ್ರಮುಖ ಆಕ್ಷನ್ ಬ್ಲಾಕ್ ಹಾಗೂ ಡ್ಯಾನ್ಸ್ ನೊಂದಿಗೆ ಪ್ರಾರಂಭಗೊಂಡಿತ್ತು. ಸ್ಟಂಟ್ ಮಾಸ್ಟರ್ ರವಿವರ್ಮ ಅವರಿಂದ. ಕಲಾ ನಿರ್ದೇಶಕ ಶಿವಕುಮಾರ್ ವಿನ್ಯಾಸಗೊಳಿಸಿದ ಎಂಟು ಸೆಟ್‌ಗಳನ್ನು ಈ ನಿರ್ದಿಷ್ಟ ಸಂಚಿಕೆಗಾಗಿ ಮಿನ್ವೆರಾ ಮಿಲ್ಸ್‌ನಲ್ಲಿ ಸ್ಥಾಪಿಸಲಾಗಿತ್ತು.

ಫೈಟಿಂಗ್ ಸನ್ನಿವೇಶಗಳಲ್ಲಿ 25 ಬಂದೂಕುಧಾರಿಗಳು ಮತ್ತು ಶಾರ್ಪ್‌ಶೂಟರ್‌ಗಳು ಮತ್ತು ಮುಂಬೈಯಿಂದ ಆರಿಸಲ್ಪಟ್ಟಹಳೆಯ ಕಾಲದ ಶಸ್ತ್ರಾಸ್ತ್ರಗಳ ದೊಡ್ಡ ಹೊರೆಯೇ ಇತ್ತು.ಇವೆಲ್ಲವೂ ನಿರ್ಮಾಪಕರಿಗೆ ದಿನಕ್ಕೆ ಸುಮಾರು 20 ಲಕ್ಷ ರೂ ಖರ್ಚು ತರುತ್ತದೆ.ಶ್ರೀ ಸಿದ್ದೇಶ್ವರ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಈ ಚಿತ್ರವು ಉಪೇಂದ್ರ ಅವರನ್ನು ಅಂಡರ್ ವರ್ಲ್ಡ್ ಡಾನ್  ಪಾತ್ರದಲ್ಲಿ ತೋರಿಸಲಿದೆ. ಇದನ್ನು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತಯಾರಿಸಲಾಗುತ್ತಿದ್ದು  ಮಲಯಾಳಂ, ಹಿಂದಿ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಡಬ್ ಮಾಡಲಾಗುತ್ತದೆ.

 ಜಗಪತಿ ಬಾಬು , ಅತುಲ್ ಕುಲಕರ್ಣಿ, ಪ್ರದೀಪ್ ರಾವತ್, ಸಮುದ್ರಕಾನಿ, ನಾನಾ ಪಟೇಕರ್, ಜೈಪ್ರಕಾಶ್ ರೆಡ್ಡಿ ಮತ್ತು ಪ್ರದೀಪ್ ರಾವತ್  ಹೀಗೆ ವಿವಿಧ ಭಾಷೆಗಳಿಂದ ಏಳು ಖಳನಾಯಕರನ್ನು ಕರೆತರಲು ತಯಾರಕರು ಯೋಜಿಸುತ್ತಿದ್ದಾರೆ. ಚಿತ್ರದ ಸಂಗೀತವನ್ನು ರವಿ ಬಸ್ರೂರ್ ಸಂಯೋಜಿಸಿದರೆ, ಅರ್ಜುನ್ ಶೆಟ್ಟಿಛಾಯಾಗ್ರಹಣ ನೆರವೇರಿಸುತ್ತಾರೆ.

ಆರ್ ಚಂದ್ರು ಮತ್ತೊಂದು ಸೆಟಪ್‌ನೊಂದಿಗೆ ಬರಲಿದ್ದು, ಇದು ಒಂದು ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಏತನ್ಮಧ್ಯೆ, ಜಯರಾಮ್ ನಿರ್ದೇಶನದ ಬುದ್ಧವಂತ 2 ಚಿತ್ರದ ಶೂಟಿಂಗ್ ನಲ್ಲಿ ನಟ ಉಪೇಂದ್ರ ಭಾಗವಹಿಸಲಿದ್ದು ಅದಾಗಿ ನಿರ್ದೇಶಕ  ಓಂ ಪ್ರಕಾಶ್ ರಾವ್ ಅವರ ರವಿ ಚಂದ್ರ ದಲ್ಲಿ ಸಹ ತೊಡಗಿಕೊಳ್ಳಲಿದ್ದಾರೆ.. ರಿಯಲ್ ಸ್ಟಾರ್ ನಿರ್ದೇಶಕ ಶಶಾಂಕ್ ಅವರ ಇನ್ನೂ ಹೆಸರಿಸಲಾಗದ ಯೋಜನೆಯ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದು, ಇದು ಫೆಬ್ರವರಿಯಲ್ಲಿ ಸೆಟ್ಟೇರುವ ನಿರೀಕ್ಷೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com