ನಗಿಸಿದ ದೇವರಿಗೆ ಸ್ಮಾರಕ ನಿರ್ಮಾಣ ಖಚಿತ: ನಟ ಜಗ್ಗೇಶ್

ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಅವರ ಸ್ಮಾರಕ ನಿರ್ಮಾಣ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವುದಾಗಿ ನಟ ಜಗ್ಗೇಶ್ ಟ್ವಿಟರ್‍ ನಲ್ಲಿ ತಿಳಿಸಿದ್ದಾರೆ.

Published: 29th January 2020 02:43 PM  |   Last Updated: 29th January 2020 02:43 PM   |  A+A-


Jaggesh

ಜಗ್ಗೇಶ್

Posted By : Lingaraj Badiger
Source : UNI

ಬೆಂಗಳೂರು: ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿವಂಗತ ನರಸಿಂಹರಾಜು ಅವರ ಸ್ಮಾರಕ ನಿರ್ಮಾಣ ಬಗ್ಗೆ ವಿಶೇಷ ಆಸಕ್ತಿ ವಹಿಸಿರುವುದಾಗಿ ನಟ ಜಗ್ಗೇಶ್ ಟ್ವಿಟರ್‍ ನಲ್ಲಿ ತಿಳಿಸಿದ್ದಾರೆ.
  
ಅಭಿಮಾನಿಯೊಬ್ಬರು “ಕರ್ನಾಟಕದ ಜನರ ಹೃದಯ ಗೆದ್ದ ಹಾಸ್ಯ ನಟ ನರಸಿಂಹರಾಜು ಅವರ ಹೆಸರಲ್ಲಿ ಅವರ ನೆನಪು ಉಳಿಸಲು ತಿಪಟೂರಿನಲ್ಲಿ ಸ್ಮಾರಕ ಮಾಡಲಾಗುವುದು ಎಂದು ಕಾರ್ಯಕ್ರಮವೊಂದರಲ್ಲಿ ಅವರ ಶ್ರೀಮತಿಯವರಿಗೆ ಆಶ್ವಾಸನೆ ನೀಡಿದ್ದ ನೆನಪು, ಅದೇನಾದರೂ ಕಾರ್ಯಗತ ಆಗ್ತಿದೆಯಾ” ಎಂದು ಜಗ್ಗೇಶ್ ಅವರನ್ನು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.
  
ಇದಕ್ಕೆ ಉತ್ತರಿಸಿರುವ ಜಗ್ಗೇಶ್, “ಖಂಡಿತ... ನಾನು ಹಾಗೂ ನನ್ನ ಗೆಳೆಯ, ಶಾಸಕ ನಾಗೇಶ್ ರವರು ಆ ಕಾರ್ಯದ ಬಗ್ಗೆ ವಿಶೇಷ ಆಸಕ್ತಿವಹಿಸಿರುವೆವು… ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನರಸಿಂಹರಾಜುರವರ ಮಡದಿಗೆ ಕಳೆದವಾರ ನೀಡಿರುವೆ. ನಗಿಸಿದ ದೇವರಿಗೆ ಖಡಿತ ನೆನಪಿನ ಸ್ಮಾರಕ ನಿರ್ಮಾಣ ಆಗುತ್ತದೆ... ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp