ರಾಕಿಬಾಯ್ ಯಶ್ ಗೆ ಆಕ್ಷನ್ ಕಟ್ ಹೇಳಲಿರೋ 'ಮಫ್ತಿ' ನಿರ್ದೇಶಕ
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ಸಂಪೂರ್ಣ ತೊಡಗಿರುವ ರಾಕಿಬಾಯ್ ಯಶ್ ಇದೀಗ ಚಿತ್ರೀಕರಣದ ಕಡೆಯ ಹಂತದಲ್ಲಿದ್ದಾರೆ. ಏತನ್ಮಧ್ಯೆ, ಅವರ ಮುಂದಿನ ಯೋಜನೆಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿದೆ. ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಚಿತ್ರ ನಿರ್ದೇಶಿಸಲು ಯಾವ ನಿರ್ದೇಶಕರು ಮುಂದೆ ಬರಲಿದ್ದಾರೆ ಎನ್ನುವುದರ ಮೇಲೆ ಸಾಕಷ್ಟು ಚರ
Published: 30th January 2020 11:23 AM | Last Updated: 30th January 2020 04:36 PM | A+A A-

ರಾಕಿಬಾಯ್ ಯಶ್ ಗೆ ಆಕ್ಷನ್ ಕಟ್ ಹೇಳಲಿರೋ 'ಮಫ್ತಿ' ನಿರ್ದೇಶಕ
ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣದಲ್ಲಿ ಸಂಪೂರ್ಣ ತೊಡಗಿರುವ ರಾಕಿಬಾಯ್ ಯಶ್ ಇದೀಗ ಚಿತ್ರೀಕರಣದ ಕಡೆಯ ಹಂತದಲ್ಲಿದ್ದಾರೆ. ಏತನ್ಮಧ್ಯೆ, ಅವರ ಮುಂದಿನ ಯೋಜನೆಗಳ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿದೆ. ಅದರಲ್ಲೂ ವಿಶೇಷವಾಗಿ ರಾಕಿಂಗ್ ಸ್ಟಾರ್ ಚಿತ್ರ ನಿರ್ದೇಶಿಸಲು ಯಾವ ನಿರ್ದೇಶಕರು ಮುಂದೆ ಬರಲಿದ್ದಾರೆ ಎನ್ನುವುದರ ಮೇಲೆ ಸಾಕಷ್ಟು ಚರ್ಚೆ, ಕಲ್ಪನೆಗಳು ಗರಿಗೆದರುತ್ತಿದೆ.
ನಟನಿಗೆ ವಿವಿಧ ಭಾಗಗಳ ವಿವಿಧ ನಿರ್ಮಾಪಕರಿಂದ ಸಾಕಷ್ಟು ಸಂಖ್ಯೆಯ ಆಫರ್ ಗಳು ಬರುತ್ತಿದ್ದು ಪುರಿ ಜಗನ್ನಾಥ್ ಅವರ ಜನ ಗಣ ಮನ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು.. ಅನಿಲ್ ಕುಮಾರ್ ನಿರ್ದೇಶನದ ಕಿರಾತಕ ಉತ್ತರಾರ್ಧದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರ ಜನ್ಮದಿನದಂದು ಪ್ರಕಟಣೆ ಹೊರಬಿದ್ದಿದೆ. ಇದೆಲ್ಲದರ ಜತೆಗೆ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಇನ್ನೊಂದು ಹೆಸರು "ಮಫ್ತಿ" ಚಿತ್ರದ ನಿರ್ದೇಶಕ ನರ್ತನ್ ಅವರದಾಗಿದೆ.
ಈ ಹಿಂದೆ ಯಶ್ ಅವರೊಂದಿಗೆ ಕಥಾಹಂದರವನ್ನು ಚರ್ಚಿಸಿದ್ದ ನರ್ತನ್ ಅವರದು ಯಶ್ ಜತೆಗೆ ಬಹುಕಾಲದ ಹಳೆಯ ಪರಿಚಯ. ಇದೀಗ ಇಬ್ಬರೂ ಯೋಜನೆಯೊಂದರ ತಯಾರಿಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳಿದೆ. ಹೇಗಾದರೂ, ನರ್ತನ್ ಗೆ ಕೆಜಿಎಫ್ ಚಾಪ್ಟರ್ 1ರ ಅದ್ಭುತ ಯಶಸ್ಸಿನ ನಂತರ ಪ್ಯಾನ್ ಇಂಡಿಯಾ ಇಮೇಜ್ ಹೊಂದಿರುವ ಯಶ್ ಗೆ ಸರಿಹೊಂದುವ ಕಥೆ ಮಾಡುವುದು ದೊಡ್ಡ ಸವಾಲಾಗಿದೆ.
ಏತನ್ಮಧ್ಯೆ, ಶಿವಣ್ಣ-ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನರ್ತನ್, ಸಿಂಬು ಮತ್ತು ಗೌತಮ್ ಕಾರ್ತಿಕ್ ನಟಿಸಿರುವ ಚಿತ್ರದ ತಮಿಳು ರಿಮೇಕ್ ನಲ್ಲಿ ತೊಡಗಿದ್ದಾರೆ. ರೆ. ಭೈರತಿ ರಣಗಲ್ ಎಂಬ ಹೆಸರಿನ ಮುಫ್ತಿ ಸ್ಪಿನ್‌ಆಫ್‌ಗಾಗಿ ಅವರು ಮತ್ತೊಮ್ಮೆ ಶಿವರಾಜ್‌ಕುಮಾರ್ ಅವರೊಂದಿಗೆ ಜತೆಯಾಗಲಿದ್ದಾರೆ. ಇದು ಶಿವಣ್ಣನ 125 ನೇ ಚಿತ್ರವಾಗಿದೆ ಮತ್ತು ಇದು ನಟನ ಹೋಂ ಬ್ಯಾನರ್ ಶ್ರೀಆಂಡ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮಾಡಲ್ಪಡುತ್ತದೆ. ಆದರೆ ಸಧ್ಯ ಈ ಚಿತ್ರ ಸೆಟ್ಟೇರಲು ಇನ್ನಷ್ಟು ಸಮಯವಿದೆ. ಶಿವಣ್ಣ ಇದೀಗ ಭಜರಂಗಿ 2, ರವಿ ಅರಸು ಅವರ ಚಿತ್ರ ಅಲ್ಲದೆ ಇನ್ನೂ ನಿರ್ಧರಿಸಬೇಕಾದ ಯೋಜನೆಯ ನಂತರ ಈ ಚಿತ್ರವನ್ನು ತೆಗೆದುಕೊಳ್ಳುತಿದ್ದಾರೆ.
ಎಲ್ಲಾ ಯೋಜಿಸಿದಂತೆ ನಡೆದರೆ ನರ್ತನ್ ಶಿವಣ್ಣನ ಭೈರತಿ ರಣಗಲ್ ಗೆ ಮುನ್ನ ಯಶ್ ನಾಯಕನಟನಾಗಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಾರೆ.