ಹೊಸ ತಂತ್ರಜ್ಞಾನದಲ್ಲಿ 'ಭಾಗ್ಯವಂತರು'!

ಕನ್ನಡ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಚಿತ್ರ ಡಾ.ರಾಜ್ ಅಭಿನಯದ 'ಭಾಗ್ಯವಂತರು'. ಈ ಚಿತ್ರ ನೂತನ ತಂತ್ರಜ್ಞಾನದಲ್ಲಿ ಮತ್ತೆ ಅಭಿಮಾನಿಗಳೆದರು ಬರಲು ಸಿದ್ಧವಾಗಿದೆ.

Published: 02nd July 2020 03:59 PM  |   Last Updated: 02nd July 2020 06:04 PM   |  A+A-


Sarojadevi_rajkumar1

ಸರೋಜಾ ದೇವಿ, ಡಾ. ರಾಜ್ ಕುಮಾರ್

Posted By : Nagaraja AB
Source : UNI

ಬೆಂಗಳೂರು: ಕನ್ನಡ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಚಿತ್ರ ಡಾ.ರಾಜ್ ಅಭಿನಯದ 'ಭಾಗ್ಯವಂತರು'. ಈ ಚಿತ್ರ ನೂತನ ತಂತ್ರಜ್ಞಾನದಲ್ಲಿ ಮತ್ತೆ ಅಭಿಮಾನಿಗಳೆದರು ಬರಲು ಸಿದ್ಧವಾಗಿದೆ.

ಶ್ರೀ ಮುನೇಶ್ವರ ಫಿಲಂಸ್ ಮಾಲೀಕರಾದ ಎಂ. ಮುನಿರಾಜು ಈ ಪ್ರಯತ್ನದಲ್ಲಿದ್ದು, ಕೊರೋನಾ ಹಾವಳಿಯ ಬಳಿಕ ರಾಜ್ಯದ ಕಲಾಭಿಮಾನಿಗಳಿಗೆ ಭರ್ಜರಿ ಕೊಡುಗೆ ನೀಡಲಿದ್ದಾರೆ. 

ದ್ವಾರಕೀಶ್ ಚಿತ್ರ ಸಂಸ್ಥೆಯಲ್ಲಿ ತಯಾರಾಗಿ ಸೂಪರ್ ಹಿಟ್ ಆದ ಚಿತ್ರ ಇಂದಿನ ತಂತ್ರಜ್ಞಾನದಲ್ಲಿ ಸಿನಿಮಾಸ್ಕೋಪ್ 7.1ಡಿ.ಐ ಬಳಸಿಕೊಳ್ಳಲಾಗಿದೆ. 

'ಭಾಗ್ಯವಂತರು' ಕಿವಿಗೆ ಇಂಪಾದ ಹಾಡುಗಳೊಂದಿಗೆ ರಾಜ್ ಕುಮಾರ್, ಬಿ. ಸರೋಜಾದೇವಿ, ಅಶೋಕ್ ಮೊದಲಾದವರು ಅಭಿನಯಿಸಿದ್ದ ಸೂಪರ್ ಹಿಟ್ ಚಿತ್ರ. ರಾಜನ್-ನಾಗೇಂದ್ರ ಜೋಡಿಯ ಸಾಹಿತ್ಯಕ್ಕೆ ಚಿ. ಉದಯಶಂಕರ್ ಸಂಗೀತ ಸಂಯೋಜನೆಯಿದೆ.

ದ್ವಾರಕೀಶ್ ನಿರ್ಮಾಣದ ಚಿತ್ರವನ್ನು ಚಿತ್ರಬ್ರಹ್ಮ ಭಾರ್ಗವ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಮತ್ತೆ ರಾಜ್ಯದ ಜನರ ಮನರಂಜಿಸಲು ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡಲು  ಶ್ರೀ ಮುನೇಶ್ವರ ಫಿಲಂಸ್ ನ ಎಂ. ಮುನಿರಾಜು ಮುಂದಾಗಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp