ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಕಿರುತೆರೆ ನಟಿಗೆ ಕೊರೋನಾ ಪಾಸಿಟಿವ್; ಚಿತ್ರೀಕರಣ ಸ್ಥಗಿತ

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಟಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತೆಲುಗು ಕಿರುತೆರೆ ನಟಿ ನವ್ಯಾ ಸ್ವಾಮಿ ಅವರಲ್ಲಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡ ಇತರರು ಆತಂಕಕ್ಕೀಡಾಗಿದ್ದಾರೆ.

Published: 03rd July 2020 08:47 AM  |   Last Updated: 03rd July 2020 12:25 PM   |  A+A-


navya swamy

ನವ್ಯಾ ಸ್ವಾಮಿ

Posted By : Shilpa D
Source : Online Desk

ಕೊರೋನಾ ಮಹಮಾರಿ ಹರಡದಂತೆ ತಡೆಯಲು ದೇಶಾದ್ಯಂತ ಈ ಹಿಂದೆ ಲಾಕ್​ಡೌನ್ ಹೇರಲಾಗಿತ್ತು. ಇದರಿಂದ ಸಿನಿಮಾ/ ಸೀರಿಯಲ್ ಚಿತ್ರೀಕರಣಗಳಿಗೆ ಬ್ರೇಕ್ ಬಿದ್ದಿದ್ದವು. ಆದರೆ ಅನ್​ಲಾಕ್ ಆಗುತ್ತಿದ್ದಂತೆ ವಿವಿಧ ರಾಜ್ಯಗಳು ಶೂಟಿಂಗ್​ಗೆ ಷರತ್ತುಬದ್ಧ ಅವಕಾಶಗಳನ್ನು ನೀಡಿವೆ.

ಚಿತ್ರೀಕರಣದಲ್ಲಿ ಭಾಗವಹಿಸಿದ್ದ ನಟಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ತೆಲುಗು ಕಿರುತೆರೆ ನಟಿ ನವ್ಯಾ ಸ್ವಾಮಿ ಅವರಲ್ಲಿ ಕೊರೋನಾ ವೈರಾಣು ಸೋಂಕಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡ ಇತರರು ಆತಂಕಕ್ಕೀಡಾಗಿದ್ದಾರೆ.

'ನಾ ಪೇರು ಮೀನಾಕ್ಷಿ' ಧಾರಾವಾಹಿ ಮೂಲಕ ಮನೆಮಾತಾಗಿರುವ ನಟಿ, ಧಾರಾವಾಹಿಯ ಚಿತ್ರೀಕರಣದ ವೇಳೆಯೇ ಕೊರೋನಾ ವೈರಸ್ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲ ದಿನಗಳ ಹಿಂದೆ ಕೊರೋನಾ ಟೆಸ್ಟ್​ಗೆ ಒಳಗಾಗಿದ್ದರು. ಇದೀಗ ಫಲಿತಾಂಶವು ಪಾಸಿಟಿವ್ ಬಂದಿದ್ದು, ನಟಿ ಸ್ವಯಂ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಹಾಗೆಯೇ ನಟಿಯೊಂದಿಗೆ ಶೂಟಿಂಗ್ ವೇಳೆ ಸಂಪರ್ಕದಲ್ಲಿದ್ದವರನ್ನು ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ. 

ಮೈಸೂರು ಮೂಲದ ನಟಿ ಈ ಹಿಂದೆ ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಆ ಬಳಿಕ ತಮಿಳು, ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡ ಕನ್ನಡತಿ ವಾಣಿ ರಾಣಿ, 'ನಾ ಪೇರು ಮೀನಾಕ್ಷಿ' ಮೂಲಕ ತಮಿಳು- ತೆಲುಗು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಕೇವಲ ತಲೆ ನೋವು ಮಾತ್ರ ಕಾಣಿಸಿಕೊಂಡಿದ್ದಂತೆ. ಅಲ್ಲದೆ ತುಂಬಾ ಸುಸ್ತಾಗುತ್ತಿದ್ದರಂತೆ. ಹಾಗಾಗಿ ಕೊರೊನಾ ಪರೀಕ್ಷೆ ಮಾಡಿದ್ದಾರೆ. ನಂತರ ಗೊತ್ತಾಗಿದೆ ಕೊರೊನಾ ಪಾಸಿಟಿವ್ ಇದೆ ಎಂದು. ತಕ್ಷಣ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸದ್ಯ ಅವರಿಗೆ ಯಾವುದೆ ರೋಗ ಲಕ್ಷ್ಮಗಳು ಇಲ್ಲವಂತೆ. ಆರಾಮಾಗಿ ಇರುವುದಾಗಿ ನವ್ಯಾ ಹೇಳಿಕೊಂಡಿದ್ದಾರೆ

ದಯವಿಟ್ಟು ಗಾಳಿ ಸುದ್ದಿಗಳನ್ನು ನಂಬಬೇಡಿ. ನೆಗೆಟಿವಿಟಿಯಿಂದ ತುಂಬಾ ದೂರ ಇರಿ. ಕೊರೊನಾ ಪಾಸಿಟಿವ್ ಬಂದರೆ ಭಯ ಪಡಬೇಡಿ. ಸ್ಟ್ರಾಂಗ್ ಆಗಿರಿ. ಹೆಚ್ಚಾಗಿ ಕ್ವಾರಂಟೈನ್ ಆಗಿ. ವೈರಸ್ ಸಾಯುವವರೆಗೂ ಜನರಿಂದ ದೂರ ಇರಿ. ಅನೇಕರ ಜನ ನನ್ನ ಮೇಲೆ ಪ್ರೀತಿ ಮತ್ತು ಕಾಳಜಿ ತೋರಿದ್ದೀರಿ. ನಾನು ಆರಾಮಾಗಿ ಇದ್ದೀನಿ. ಆದಷ್ಟು ಬೇಗ ವಾಪಸ್ ಆಗುತ್ತೇನೆ" ಎಂದು ನವ್ಯಾ ವಿಡಿಯೋದಲ್ಲಿ ತಿಳಿಸಿದ್ದಾರೆ.
.

Stay up to date on all the latest ಸಿನಿಮಾ ಸುದ್ದಿ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp