ವೀರಂ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಗೆ ಮಾಸ್ ಲುಕ್!

ಕಮರ್ಷಿಯಲ್​​ ಎಂಟರ್ಟೈನ್ಮೆಂಟ್​​ ಆಗಿರುವ ವೀರಂ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​​  ಪ್ರಜ್ವಲ್​​ ದೇವರಾಜ್​ ಅವರು ಸಾಹಸ ಸಿಂಹ ಅವರ ಅಭಿಮಾನಿಯಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್​​ನಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

Published: 04th July 2020 01:19 PM  |   Last Updated: 04th July 2020 02:45 PM   |  A+A-


A still from veeram cinema

ವೀರಂ ಸಿನಿಮಾ ಪೋಸ್ಟರ್

Posted By : Shilpa D
Source : The New Indian Express

ಕಮರ್ಷಿಯಲ್​​ ಎಂಟರ್ಟೈನ್ಮೆಂಟ್​​ ಆಗಿರುವ ವೀರಂ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ ಡೈನಾಮಿಕ್​ ಪ್ರಿನ್ಸ್​​  ಪ್ರಜ್ವಲ್​​ ದೇವರಾಜ್​ ಅವರು ಸಾಹಸ ಸಿಂಹ ಅವರ ಅಭಿಮಾನಿಯಾಗಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಶಾ ಎಂಟರ್ಟೈನ್ಮೆಂಟ್​​ನಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಪ್ರಜ್ವಲ್​ ದೇವರಾಜ್​  ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು 'ವೀರಂ' ಚಿತ್ರತಂಡ ಅವರಿಗೆ ಭರ್ಜರಿ ಗಿಫ್ಟ್​ ನೀಡಿದೆ. 'ವೀರಂ' ಚಿತ್ರತಂಡ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡುವ ಮೂಲಕ ಡೈನಾಮಿಕ್​ ಪ್ರಿನ್ಸ್​ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದೆ. ಖದರ್​ ಕುಮಾರ್​ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. 

ಕಳೆದ ವರ್ಷ ವೀರಂ ಸಿನಿಮಾದ ಫಸ್ಟ್​ ಲುಕ್​​ ಹಾಗೂ ಟೈಟಲ್​​ ಲುಕ್​ ಅನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಬಿಡುಗಡೆ ಮಾಡಿದ್ದರು. ವಿಷ್ಣುವರ್ಧನ್​​​ ಜನ್ಮದಿನದಂದು ಈ ಸಿನಿಮಾದ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದರು. 

ವಿಖ್ಯಾತ್ ಪಿಕ್ಚರ್ಸ್‌ನ ನಿರ್ಮಾಣ ತಂಡದೊಂದಿಗೆ ಶುಕ್ರವಾರ ಪೊಲೀಸ್ ಸಿಬ್ಬಂದಿಗೆ ಪಿಪಿಟಿ ಕಿಟ್‌ಗಳನ್ನು ನೀಡಿತು. “ನಾವು ಕಿಟ್‌ಗಳನ್ನು ಹಸ್ತಾಂತರಿಸಲು ಡಿಸಿಪಿ ಕಚೇರಿಗೆ ಭೇಟಿ ನೀಡಿದ್ದೇವು. ಕೋವಿಡ್ ಪರಿಸ್ಥಿತಿಯಲ್ಲಿ ಅವರ ಅತ್ಯುತ್ತಮ ಕೆಲಸಕ್ಕಾಗಿ ಅವರಿಗೆ ಧನ್ಯವಾದ ಹೇಳಲು ನಾವು ಈ ಅವಕಾಶವನ್ನು ಬಳಸಿಕೊಳ್ಳುತ್ತೇವೆ ”ಎಂದು ಪ್ರಜ್ವಲ್ ಹೇಳಿದ್ದಾರೆ.

ಇನ್ಸ್‌ಪೆಕ್ಟರ್ ವಿಕ್ರಮ್ ಚಿತ್ರದ ಒಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಲಕ್ಕಿ ಶಂಕರ್ ನಿರ್ದೇಶನದ ಅರ್ಜುನ್ ಗೌಡ ಬಿಡುಗಡೆಗಾಗಿ  ಪ್ರಜ್ವಲ್ ಕಾಯುತ್ತಿದ್ದಾರೆ. ಕೋವಿಡ್ ಪರಿಸ್ಥಿತಿ ಸುಧಾರಿಸಲು ಕಾಯುತ್ತಿರುವ ಪ್ರಜ್ವಲ್ ರಾಮನಾರಾಯಣ್ ಅವರ ಮುಂಬರುವ ಸಿನಿಮಾ ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ, ನಂತರ ಖಾದರ್ ನಿರ್ದೇಶನದ ವೀರಮ್ ಪಿಸಿ ಶೇಖರ್ ನಿರ್ದೇಶಿಸಲಿರುವ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ.
 
 

Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp