'ವೀರಂ'ಗಾಗಿ ಕಿಟ್ಟಿ ರಗಡ್ ಲುಕ್!

ವೀರಂ ಚಿತ್ರದಲ್ಲಿ ನಟಿಸುತ್ತಿರುವ ಪ್ರಜ್ವಲ್ ದೇವರಾಜ್ ಅವರ ಲುಕ್ ಬಿಡುಗಡೆಯಾಗಿದ್ದು, ಲೆಜೆಂಡ್ ನಟ ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.

Published: 06th July 2020 12:57 PM  |   Last Updated: 06th July 2020 12:59 PM   |  A+A-


Srinagara Kitty

ಶ್ರೀನಗರ ಕಿಟ್ಟಿ

Posted By : Srinivas Rao BV
Source : The New Indian Express

ವೀರಂ ಚಿತ್ರದಲ್ಲಿ ನಟಿಸುತ್ತಿರುವ ಪ್ರಜ್ವಲ್ ದೇವರಾಜ್ ಅವರ ಲುಕ್ ಬಿಡುಗಡೆಯಾಗಿದ್ದು, ಲೆಜೆಂಡ್ ನಟ ವಿಷ್ಣುವರ್ಧನ್ ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಗರಿಗೆದರಿದೆ.

ಖಾದರ್ ನ ಮೊದಲ ನಿರ್ದೇಶನದ ಚಿತ್ರ ಇದಾಗಿದ್ದು, ಇದೇ ಮೊದಲ ಬಾರಿಗೆ ರಚಿತಾ ರಾಮ್ ಪ್ರಜ್ವಲ್ ದೇವರಾಜ್ ಗೆ ನಾಯಕಿಯಾಗಿ ನಟಿಸಿದ್ದಾರೆ. ಹಲವು ಪ್ರಥಮಗಳನ್ನೊಳಗೊಂಡ ಈ ಚಿತ್ರದಲ್ಲಿ ಸಂಜು-ವೆಡ್ಸ್ ಗೀತಾದ ನಾಯಕ ಶ್ರೀನಗರ ಕಿಟ್ಟಿ ಅಭಿನಯಿಸಿರುವುದು ಮತ್ತೊಂದು ವಿಶೇಷ.

ದಿಶಾ ಎಂಟರ್ಟೈನ್ಮೆಂಟ್ಸ್ ನ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಡಾರ್ಕ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದು, ರಗಡ್ ಲುಕ್ ಹೊಂದಿರುವುದು ಚಿತ್ರ ಪ್ರೇಮಿಗಳ ನಿರೀಕ್ಷೆ, ಕುತೂಹಲಗಳನ್ನು ಮತ್ತಷ್ಟು ಹೆಚ್ಚಿಸಿದೆ. ಶ್ರೀನಗರ ಕಿಟ್ಟಿ ಸುನಿಲ್ ನ ಮುಂದಿನ ನಿರ್ದೇಶನದ ಚಿತ್ರ, ಶರಣ್ ನಟನೆಯ ಅವತಾರ್ ಪುರುಷದಲ್ಲಿ ಮ್ಯಾಜಿಷಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ವೀರಂ ಚಿತ್ರದಲ್ಲಿ ಶಿಷ್ಯ ಸಿನಿಮಾ ಖ್ಯಾತಿಯ ದೀಪಕ್ ನಾಯಕನ ಎದುರಾಳಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಾಲಿವುಡ್ ನ ಟಾಪ್ ವಿಲನ್ ಗಳ ಪೈಕಿ ಒಬ್ಬರನ್ನು ಸಿನಿಮಾದ ಭಾಗವಾಗಿರುವುದಕ್ಕಾಗಿ ಮಾತುಕತೆ ನಡೆಸಲಾಗುತ್ತಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ವೀರಂ ಗೆ ಅನೂಪ್ ಸಿಳಿನ್ ಸಂಗೀತ ನಿರ್ದೇಶನ ಇರಲಿದ್ದು, ರಾಮಾ ರಾಮಾ ರೇ..., ಒಂದಲ್ಲಾ ಎರಡಲ್ಲಾ ಸಿನಿಮಾದ ಡಿಒಪಿ ಕಾರ್ಯನಿರ್ವಹಣೆ ಮಾಡಿದ್ದ ಲವಿತ್ ಸಿನಿಮೆಟೋಗ್ರಾಫಿ ನಿರ್ವಹಣೆ ಮಾಡಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp