O2: ಪಿಆರ್‌ಕೆ ಪ್ರೊಡಕ್ಷನ್ಸ್ ನಿಂದ ಇನ್ನೊಂದು ಮೆಡಿಕಲ್ ಥ್ರಿಲ್ಲರ್ ಕಥೆ ರೆಡಿ!

ಕವಲುದಾರಿ, ಮಾಯಾಬಜಾರ್ 2016, ಮತ್ತು ಇನ್ನೂ ತೆರೆಕಾಣಬೇಕಿರುವ ಲಾ ಮತ್ತು ಫ್ರೆಂಚ್ ಬಿರಿಯಾನಿಯಂತಹಾ ಚಿತ್ರಗಳ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್ ಈಗ ವೈದ್ಯಕೀಯ ಥ್ರಿಲ್ಲರ್ ಕಥಾನಕದ ತಯಾರಿಯಲ್ಲಿದೆ.
ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್

ಕವಲುದಾರಿ, ಮಾಯಾಬಜಾರ್ 2016, ಮತ್ತು ಇನ್ನೂ ತೆರೆಕಾಣಬೇಕಿರುವ ಲಾ ಮತ್ತು ಫ್ರೆಂಚ್ ಬಿರಿಯಾನಿಯಂತಹಾ ಚಿತ್ರಗಳ ನಿರ್ಮಾಣ ಸಂಸ್ಥೆ ಪಿಆರ್‌ಕೆ ಪ್ರೊಡಕ್ಷನ್ಸ್ ಈಗ ವೈದ್ಯಕೀಯ ಥ್ರಿಲ್ಲರ್ ಕಥಾನಕದ ತಯಾರಿಯಲ್ಲಿದೆ. "O2" ಹೆಸರಿನ ಈ ಚಿತ್ರ , ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಹೋಂ ಪ್ರೊಡಕ್ಷನ್ ನಲ್ಲಿ ತಯಾರಾಗಲಿದೆ.

ವಿಶೇಷವೆಂದರೆ, ಮಾಯಾಬಜಾರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಾಕೃಷ್ಣ ರೆಡ್ಡಿ, ನಿರ್ಮಾಪಕರಾಗಿ ಪಿಆರ್‌ಕೆ ಅವರೊಂದಿಗೆ ಕೈ ಜೋಡಿಸಲಿದ್ದಾರೆ ಪ್ರಶಾಂತ್ ರಾಜ್ ಮತ್ತು ರಾಘವ್ ಎಂಬ ಹೊಸ ನಿರ್ದೇಶಕರೂ ಈ ತಂಡದಲ್ಲಿದ್ದು ಇದರಲ್ಲಿ ರಾಘವ್ ಟ್ಯಾಟೂ ಆರ್‍ಟಿಸ್ಟ್ ಆಗಿರುವುದು ವಿಶೇಷ. 

"O2 ಕಥೆ ಈ ಇಬ್ಬರು ನಿರ್ದೇಶಕರ ಕಠಿಣ ಪರಿಶ್ರಮವಾಗಿದೆ, ಅವರು ಕಳೆದ ನಾಲ್ಕು ವರ್ಷಗಳಿಂದ ಸ್ಕ್ರಿಪ್ಟ್ ತಯಾರಿಯಲ್ಲಿರುವ  ಅವರು ನನ್ನನ್ನು ಭೇಟಿಯಾದಾಗ ತಮ್ಮ ಕಥೆಯ 20  ಡ್ರಾಪ್ಟ್ ಗಳೊಂದಿಗೆ ಆಗಮಿಸಿದ್ದರು. ಹಾಗೆಯೇ ಇದನ್ನು ತೆರೆಗೆ ತರುವುದಕ್ಕೆ ಅನುಕೂಲವಾಗಿದೆ ಎಂದು ನಾನು ಕಂಡುಕೊಂಡೆ. ಆದ್ದರಿಂದ, ನಾನು ಯೋಜನೆಯ ಭಾಗವಾಗಲು ನಿರ್ಧರಿಸಿದೆ. ನನ್ನ ಆಲೋಚನೆಯನ್ನು ಹಂಚಿಕೊಂಡೆ" ಅಪ್ಪು (ಪುನೀತ್ ರಾಜ್‌ಕುಮಾರ್) ಅವರನ್ನು ಭೇಟಿಯಾಗಿ ಮಾತಾಡಿಸಿದಾಗ ಎಲ್ಲವೂ ಸರಿಯಾದ ಹಾದಿಯಲ್ಲಿತ್ತು."ರಾಧಾಕೃಷ್ಣ ವಿವರಿಸುತ್ತಾರೆ.

ಸಿನಿಮಾ ಸ್ಕೂಲ್ ನಲ್ಲಿ ಭೇಟಿಯಾದ ರಾಘವ್ ಹಾಗೂ ಪ್ರಶಾಂತ್ “ಇದು ವೈದ್ಯಕೀಯ ಹಿನ್ನೆಲೆಯ ಕಥೆಯಾಗಿರುವ ಕಾರಣ ಅಪರೂಪದ ವಿಷಯವಾಗಿದೆ. ಅಮೂಲ್ಯವಾದ ಪ್ರತಿಕ್ರಿಯೆಯನ್ನು ನೀಡಿದ ರಾಜ್ ಬಿ ಶೆಟ್ಟಿ ಸೇರಿದಂತೆ ಒಂದೆರಡು ನಿರ್ದೇಶಕರಿಗೆ ನಾವು ಸ್ಕ್ರಿಪ್ಟ್ ಅನ್ನು ಪರಿಚಯಿಸಿದ್ದೇವೆ. "ರಾಧಾಕೃಷ್ಣ ವಿವರಿಸುತ್ತಾರೆ. ತಯಾರಕರು ಆನ್‌ಲೈನ್‌ನಲ್ಲಿ ನಡೆದ ಆಡಿಷನ್‌ಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಯೋಜನೆಯ ಭಾಗವಾಗಲು ಸಾಕಷ್ಟು ಯುವಕರು ಆಸಕ್ತಿ ಹೊಂದಿದ್ದಾರೆ. ತಂಡವು ಕೆಲವು ಹೆಸರುಗಳನ್ನು  ಶಾರ್ಟ್ ಲಿಸ್ಟ್ ಮಾಡಿದ್ದರೂ ಅಂತಿಮ ಸುತ್ತಿನ ಆಡಿಷನ್ ಮುಗಿದ ನಂತರ ಅಂತಿಮ ತೀರ್ಮಾನಕ್ಕೆ ಬರುವುದಾಗಿ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com