ಚಿರು ನಿನ್ನ ನೆನಪಿನಲ್ಲೇ ನನ್ನ ಈ ನಗು ಶಾಶ್ವತ: ಮೇಘನಾರ ಭಾವನಾತ್ಮಕ ನುಡಿ!

ಕನ್ನಡದ ನಟ ಚಿರಂಜೀವಿ ಸರ್ಜಾ ದಿವಂಗತರಾಗಿ ಒಂದು ತಿಂಗಳಾಗಿದ್ದು ಈ ಹಿನ್ನೆಲೆಯಲ್ಲಿ ಆಪ್ತ ಸ್ನೇಹಿತರು ಚಿರು ಮನೆಗೆ ಆಗಮಿಸಿ ವಿಶೇಷವಾಗಿ ಸ್ಮರಿಸುವ ಮೂಲಕ ವಂದನೆ ಸಲ್ಲಿಸಿದರು.
ಚಿರು-ಮೇಘನಾ
ಚಿರು-ಮೇಘನಾ

ಬೆಂಗಳೂರು: ಕನ್ನಡದ ನಟ ಚಿರಂಜೀವಿ ಸರ್ಜಾ ದಿವಂಗತರಾಗಿ ಒಂದು ತಿಂಗಳಾಗಿದ್ದು ಈ ಹಿನ್ನೆಲೆಯಲ್ಲಿ ಆಪ್ತ ಸ್ನೇಹಿತರು ಚಿರು ಮನೆಗೆ ಆಗಮಿಸಿ ವಿಶೇಷವಾಗಿ ಸ್ಮರಿಸುವ ಮೂಲಕ ವಂದನೆ ಸಲ್ಲಿಸಿದರು. 

ಜೂನ್ 7ರಂದು ಚಿರಂಜೀವಿ ಸರ್ಜಾ ಅವರು ಅಕಾಲಿಕಾ ಮರಣವೊಂದಿದ್ದರು. ಚಿರಂಜೀವಿ ಸರ್ಜಾ ಅವರು ದೈಹಿಕವಾಗಿ ದೂರವಾಗಿ ಇಂದಿಗೆ ತಿಂಗಳಾಗಿದೆ. 

ಚಿರು ಆಪ್ತರು, ಮನೆಯವರೆಲ್ಲರೂ ಒಟ್ಟಿಗೆ ಸೇರಿ ಚಿರು ಫೋಟೋ ಮುಂದೆ ಕುಳಿತು ನಗು ಮುಖದೊಂದಿಗೆ ಫೋಟೋಗೆ ಫೋಸ್ ನೀಡಿದರು. 

ಮೇಘನಾ ರಾಜ್ ಅವರು ಆಪ್ತ ಸ್ನೇಹಿತರೊಂದಿಗೆ ನಗುಮುಖದೊಂದಿಗೆ ತೆಗೆದುಕೊಂಡಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಭಾವನಾತ್ಮಕ ಸಂದೇಶವೊಂದನ್ನು ಬರೆದುಕೊಂಡಿದ್ದಾರೆ. 

ನನ್ನ ಪ್ರೀತಿಯ ಚಿರು... ಚಿರು ನಿನ್ನೆ ಒಂದು ಸೆಲೆಬ್ರೆಷನ್ ಆಗಿದ್ದೆ. ಈ ಸೆಲೆಬ್ರೆಷನ್ ಯಾವಾಗಲೂ ಇರುತ್ತದೆ. ನನಗೆ ತಿಳಿದಿದೆ ನೀವು ಅದನ್ನು ಬೇರೆ ರೀತಿಯಲ್ಲಿ ಇಷ್ಟಪಡುವುದಿಲ್ಲ! ಚಿರು, ನನ್ನ ಕಿರುನಗೆ ನೀನು ಕಾರಣ... ಅವನು ನನಗೆ ಕೊಟ್ಟದ್ದು ಅತ್ಯಂತ ಅಮೂಲ್ಯವಾದುದು..ಪ್ರೀತಿ, ನಗೆ, ಕುಚೇಷ್ಟೆಗಳು, ಪ್ರಾಮಾಣಿಕತೆ ಮತ್ತು ಮುಖ್ಯವಾಗಿ ಒಟ್ಟಾಗಿರುವುದು ನಾವು ನಿಮ್ಮನ್ನು ಪ್ರೀತಿಸುತ್ತೇವೆ ಬೇಬಿ ಮಾ! ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com