ಪಟಾಕಿ‌ ಬಸು ನಿರ್ಮಿಸಿದ 'ವೈರಸ್‌' ಕಿರುಚಿತ್ರಕ್ಕೆ ಪ್ರಶಸ್ತಿ

ಕೊಪ್ಪಳದ ಪಟಾಕಿ ಬಸು‌ ಹಾಗೂ ಇತರರು ನಿರ್ಮಿಸಿದ ವೈರಸ್ ಹೆಸರಿನ ಕಿರುಚಿತ್ರಕ್ಕೆ ಅಮೇರಿಕಾದ ಪ್ರತಿಷ್ಠಿತ ಕಿರುಚಿತ್ರ ಪ್ರಶಸ್ತಿಗಳಾದ ದಿ ಬ್ಯಾಬೊಚಾನೆಲ್ ಅವಾರ್ಡ್-2020, ದಿ ಲಿಫ್ಟ್ ಆಫ್ ಸೆಸನ್ಸ್‌ ಅವಾರ್ಡ್-2020 ಹಾಗೂ ಭಾರತದ ಮಿನಿಮೂವಿ ಫೆಸ್ಟಿವಲ್‌ನಲ್ಲಿ ಒಂಭತ್ತನೇ ಸ್ಥಾನ ಗಳಿಸಿದೆ.
ವೈರಸ್ ಹೆಸರಿನ ಕಿರುಚಿತ್ರದ ಪೋಸ್ಟರ್

ಕೊಪ್ಪಳ ಜಿಲ್ಲೆಯಲ್ಲಿ ಸಿನಿಮಾ ಚಟುವಟಿಕೆಗಳು ಹೊಸತೇನಲ್ಲ. ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಗೀತ ರಚನಕಾರರು, ಸಂಭಾಷಣೆ ಬರೆಯುವವರು.. ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಅನೇಕ‌ ಪ್ರತಿಭಾವಂತರು ಜಿಲ್ಲೆಯಲ್ಲಿದ್ದಾರೆ.

ಎರಡು ವರ್ಷಗಳ ಹಿಂದೆ ನಿರ್ಭಯ ಹತ್ಯೆಯ ಬಾಲಪರಾಧಿ ಕತೆಯಾಧರಿಸಿ ವೈರಸ್ ಹೆಸರಿನ‌ ಕಿರುಚಿತ್ರ‌ ನಿರ್ಮಾಣವಾಗಿತ್ತು. ಕೊಪ್ಪಳದ ಪಟಾಕಿ ಬಸು, ಮದನಕುಮಾರ್ ಮತ್ತು ತೇಜು ಈ ಕಿರುಚಿತ್ರವನ್ನು‌ ನಿರ್ಮಾಣ ಮಾಡಿದ್ದರು. ಚೇತನ್‌ ತ್ರಿವಣಕುಮಾರ್ ಅವರ ನಿರ್ದೇಶನ ವೈರಸ್‌ಗಿದೆ. ಮಂಜುಳಾ ರೆಡ್ಡಿ, ಸುಕುಮಾರ , ಮೈತ್ರಿ , ಮದನಕುಮಾರ ಸಂತೋಷ , ಪ್ರವೀಣ ಗೌಡ ಹೀಗೆ ಹಲವು ಹೊಸ ಪ್ರತಿಭೆಗಳು ವೈರಸ್ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ವರದಿ: ಬಸವರಾಜ ಕರುಗಲ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com