ರಾಮ್ ಧುಲಿಪುಡಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ, ಚಿತ್ರಕ್ಕೆ ಅಧಿಕೃತ ಚಾಲನೆ

ಶಿವರಾಜ್‌ಕುಮಾರ್ ಅಭಿನಯದ ರಾಮ್ ಧುಲಿಪುಡಿಯ ನಿರ್ದೇಶನದ ಚಿತ್ರ ಸೆಟ್ಟೇರುವುದು ಪಕ್ಕಾ ಆಗಿದೆ. ಶಿವಣ್ಣನ ಜನ್ಮದಿನವಾದ ಭಾನುವಾರ (ಜುಲಯ್ 12) ದಂದು ಚಿತ್ರದ  ಸ್ಕ್ರಿಪ್ಟ್ ಪೂಜೆ ನೆರವೇರಿದೆ.  

Published: 13th July 2020 10:01 AM  |   Last Updated: 13th July 2020 10:01 AM   |  A+A-


Posted By : Raghavendra Adiga
Source : The New Indian Express

ಶಿವರಾಜ್‌ಕುಮಾರ್ ಅಭಿನಯದ ರಾಮ್ ಧುಲಿಪುಡಿಯ ನಿರ್ದೇಶನದ ಚಿತ್ರ ಸೆಟ್ಟೇರುವುದು ಪಕ್ಕಾ ಆಗಿದೆ. ಶಿವಣ್ಣನ ಜನ್ಮದಿನವಾದ ಭಾನುವಾರ (ಜುಲಯ್ 12) ದಂದು ಚಿತ್ರದ  ಸ್ಕ್ರಿಪ್ಟ್ ಪೂಜೆ ನೆರವೇರಿದೆ.  ಈ ಸಂದರ್ಭದಲ್ಲಿ ತಂಡವು ಫಸ್ಟ್ ಲುಕ್ ಪೋಸ್ಟರ್ ಅನ್ನು ಸಹ ಬಹಿರಂಗಪಡಿಸಿದ್ದು ವಿಶೇಷವಾಗಿತ್ತು. ಬಾಲಶ್ರೀರಾಮ್ ಸ್ಟುಡಿಯೋಸ್ ಪ್ರಸ್ತುತಪಡಿಸಿದ ಈ ಚಿತ್ರವು ಲವ್ ಆಕ್ಷನ್-ಡ್ರಾಮಾ ಆಗಿದೆ. ಶಿವರಾಜ್‌ಕುಮಾರ್  ಈ ಚಿತ್ರದಲ್ಲಿ ಸೇನಾಧಿಕಾರಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ

ಸಧ್ಯ ಇನ್ನೂ ಹೆಸರಿಡದ ಈ ಚಿತ್ರವನ್ನು ಪ್ರೊಡಕ್ಷನ್ ನಂ 1 ಎಂದು ಕರೆಯಲಾಗಿದೆ, ಈ ಹಿಂದೆ ದಿಲ್ ರಾಜು ನಿರ್ಮಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದ ನಿರ್ದೇಶಕ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮುತ್ತಿದ್ದಾರೆ. ದೆ. ಈ ಚಿತ್ರವನ್ನು ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ವರಾಲಾಶ್ರೀನಿವಾಸ್ ರೆಡ್ಡಿ ನಿರ್ಮಿಸಲಿದ್ದು, ಸಹಪುಡಿ ವಿಜಯಕುಮಾರ್ ಸಹ-ನಿರ್ಮಾಪಕರಾಗಿದ್ದಾರೆ.

ಮ್ಯೂಸಿಕ್ ಡೈರೆಕ್ಟರ್ ಶ್ರೀಚರಣ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು  ರವಿ ಕುಮಾರ್ ಸನಾ ಛಾಯಾಗ್ರಹಣ ಚಿತ್ರಕ್ಕೆ ಇರಲಿದೆ. 

Stay up to date on all the latest ಸಿನಿಮಾ ಸುದ್ದಿ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp