'ಭಜರಂಗಿ 2' ದೊಡ್ಡ ಮಟ್ಟದ ಚಿತ್ರ, ಟೀಸರ್ ಗೆ ಸಿಕ್ಕಿರುವ ಪ್ರಶಂಸೆ ಖುಷಿ ಕೊಡುತ್ತಿದೆ: ಶಿವರಾಜ್ ಕುಮಾರ್

ಭಜರಂಗಿ 2 ಚಿತ್ರದ ಬಗ್ಗೆ ನಾಯಕ ನಟ ಶಿವರಾಜ್ ಕುಮಾರ್ ತುಂಬಾ ಉತ್ಸಾಹದಿಂದಲೇ ಮಾತನಾಡುತ್ತಾರೆ. ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ ಎನ್ನುತ್ತಾರೆ.
ಶಿವರಾಜ್ ಕುಮಾರ್ ಮತ್ತು ಭಜರಂಗಿ 2 ಚಿತ್ರದ ದೃಶ್ಯದಲ್ಲಿ ನಟಿ ಶೃತಿ
ಶಿವರಾಜ್ ಕುಮಾರ್ ಮತ್ತು ಭಜರಂಗಿ 2 ಚಿತ್ರದ ದೃಶ್ಯದಲ್ಲಿ ನಟಿ ಶೃತಿ

ಭಜರಂಗಿ 2 ಚಿತ್ರದ ಬಗ್ಗೆ ನಾಯಕ ನಟ ಶಿವರಾಜ್ ಕುಮಾರ್ ತುಂಬಾ ಉತ್ಸಾಹದಿಂದಲೇ ಮಾತನಾಡುತ್ತಾರೆ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ ಎನ್ನುತ್ತಾರೆ.

ಕಳೆದ ಭಾನುವಾರ ಶಿವರಾಜ್ ಕುಮಾರ್ ಅವರ 58ನೇ ಹುಟ್ಟುಹಬ್ಬದಂದು ಭಜರಂಗಿ 2 ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. 2013ರಲ್ಲಿ ಬಿಡುಗಡೆಯಾದ ಭಜರಂಗಿ ಚಿತ್ರದ ಮುಂದುವರಿದ ಭಾಗವೇ ಭಜರಂಗಿ 2.

ಭಜರಂಗಿ ಸಿನೆಮಾ ಹಿಟ್ ಆದಾಗ ನಾವು ಅದರ ಮುಂದುವರಿದ ಭಾಗ ಸಿನೆಮಾ ಮಾಡಲು ನಿರ್ಧರಿಸಿ ತಯಾರಿಸಿದೆವು. ಇದು ಈ ಮಟ್ಟದಲ್ಲಿ ವೈರಲ್ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಬಹುದೊಡ್ಡ ಕೊಡುಗೆಯಿದು. ಬೇರೆ ಭಾಷೆಗಳ ಚಿತ್ರೋದ್ಯಮಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರಕ್ಕೆ ಸಿಕ್ಕಿದ ಪ್ರೋತ್ಸಾಹಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದರು ಶಿವರಾಜ್ ಕುಮಾರ್.

ಕೊರೋನಾ ಸಂಕಷ್ಟ ಮುಗಿದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ತೆರೆಗೆ ತರುವ ಆಶಯದಲ್ಲಿ ಚಿತ್ರತಂಡವಿದೆ. ಚಿತ್ರದ ಹಕ್ಕುಗಳು ಮತ್ತು ಡಬ್ಬಿಂಗ್ ರೈಟ್ಸ್ ಗಳಿಗೆ ಬೇರೆ ಭಾಷೆಗಳಿಂದಲೂ ಸಾಕಷ್ಟು ಬೇಡಿಕೆ ಬಂದಿದೆಯಂತೆ. ಎ ಹರ್ಷ ನಿರ್ದೇಶನದ ಚಿತ್ರದಲ್ಲಿ ಭಾವನಾ, ಶೃತಿ, ಲೋಕಿ, ಚೆಲುವರಾಜ್ ಮೊದಲಾದವರು ನಟಿಸಿದ್ದಾರೆ.

ಭಜರಂಗಿ 2 ಟೀಸರ್ ಭರ್ಜರಿ ಪ್ರತಿಕ್ರಿಯೆ:ಕಳೆದ ಭಾನುವಾರ ಬಿಡುಗಡೆಯಾದ ಚಿತ್ರದ ಟೀಸರ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಪ್ರಶಂಸೆಯ ಸುರಿಮಳೆ ಹರಿಸಿದ್ದಾರೆ. ದಕ್ಷಿಣ ಭಾರತದ ಇತರ ಭಾಷೆಗಳ ಕಲಾವಿದರು, ತಂತ್ರಜ್ಞರು, ಚಿತ್ರೋದ್ಯಮಿಗಳು ಸೇರಿದಂತೆ ಬಾಲಿವುಡ್ ಕಡೆಯಿಂದಲೂ ಪ್ರಶಂಸೆ ಸಿಕ್ಕಿದೆ.

2 ನಿಮಿಷಕ್ಕಿಂತ ಕಡಿಮೆ ಅವಧಿಯ ಟೀಸರ್ ನಲ್ಲಿ ಡ್ರಾಮಾ, ಆಕ್ಷನ್ ಗಳಿದೆ. ಶ್ಲೋಕದಿಂದ ಆರಂಭವಾಗಿ ಚಿತ್ರದ ಎಲ್ಲಾ ಪಾತ್ರಗಳ ಬಗ್ಗೆ ತುಣುಕು ನೀಡುತ್ತದೆ.

ಚೆಲುವರಾಜ ಅವರ ವಿಲನ್ ಪಾತ್ರ ವಿಶೇಷ ಗಮನ ಸೆಳೆದಿದೆ. ಟೀಸರ್ ಬಿಡುಗಡೆಯಾದ ನಂತರ ನನ್ನ ಫೋನ್ ರಿಂಗ್ ಆಗುವುದು ನಿಂತೇ ಇಲ್ಲ, ಅಷ್ಟು ಕರೆಗಳು ಪ್ರಶಂಸೆಯ ಮಾತುಗಳನ್ನು ಹೇಳಿ ಮಾಡುತ್ತಿದ್ದಾರೆ ಎಂದು ನಿರ್ದೇಶಕ ಹರ್ಷ ಹೇಳುತ್ತಾರೆ.

ತೆಲುಗು ಚಿತ್ರ ನಿರ್ಮಾಪಕತರು ನನ್ನ ಜೊತೆ ಈಗಾಗಲೇ ಆ ಭಾಷೆಯಲ್ಲಿ ಚಿತ್ರ ತಯಾರಿ ಬಗ್ಗೆ ಮಾತುಕತೆ ನಡೆಸಿದ್ದು ಇದೊಂದು ಎಲ್ಲರಿಗೂ ಹತ್ತಿರವಾಗುವ ಕತೆಯಾಗಿರುವುದರಿಂದ ವಿವಿಧ ಭಾಷೆಗಳಲ್ಲಿ ತಯಾರಿಸಬಹುದು ಎಂದು ನನಗೆ ಆಗಲೇ ಅನ್ನಿಸಿತ್ತು ಎಂದರು ಹರ್ಷ.

ಜಯಣ್ಣ ಮತ್ತು ಬೋಗೇಂದ್ರ ನಿರ್ಮಾಣದ ಭಜರಂಗಿ 2 ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಜೆ ಸ್ವಾಮಿ ಛಾಯಾಗ್ರಹಣವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com