'ಫ್ರೆಂಚ್ ಬಿರಿಯಾನಿ' ನನ್ನ ಪಾಲಿನ ವಿಶೇಷ ಚಿತ್ರ: ದಿಶಾ ಮದನ್

ಲಾಕ್‌ಡೌನ್ ದಿಶಾ ಮದನ್ ಅವರನ್ನು ಕ್ಯಾಮರಾದಿಂದ ದೂರವಾಗಿಸಿಲ್ಲ. ವಿಡಿಯೋ ಎಡಿಟಿಂಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟ, ‘ಆಕ್ಷನ್ ಆಂಡ್ ‘ಕಟ್’ ಹೇಳುವ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.
ದಿಶಾ ಮದನ್
ದಿಶಾ ಮದನ್

ಲಾಕ್‌ಡೌನ್ ದಿಶಾ ಮದನ್ ಅವರನ್ನು ಕ್ಯಾಮರಾದಿಂದ ದೂರವಾಗಿಸಿಲ್ಲ. ವಿಡಿಯೋ ಎಡಿಟಿಂಗ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿರುವ ಈ ನಟ, ‘ಆಕ್ಷನ್ ಆಂಡ್ ‘ಕಟ್’ ಹೇಳುವ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ.  ನಾನು ಕಳೆದ ವರ್ಷ ಸಾಮಾಜಿಕ ಮಾಧ್ಯಮದಿಂದ ಹೊರಗುಳಿದಿದ್ದೆ ಮತ್ತು ಈ ಬಾರಿ ನಾನು ಜನರಿಗೆ ಸಮೀಪವಾಗಬಹುದಾದ ವೀಡಿಯೊಗಳೊಂದಿಗೆ ಹಿಂತಿರುಗಲು  ಬಯಸಿದ್ದೇನೆ. ಈಗ ನಾನು ತಾಯಿಗೆ ಸಂಬಂಧಿಸಿದ ವಿಷಯ ಆಯ್ಕೆ ಮಾಡಿಕೊಂಡಿದ್ದೇನೆ. ಸಧ್ಯ ದಿಶಾ ಅವರ ಮುಂದಿನ ಚಿತ್ರ "ಫ್ರೆಂಚ್ ಬಿರಿಯಾನಿ" ಬಿಡುಗಡೆಗಾಗಿ ನಿರೀಕ್ಷೆಯಲ್ಲಿದ್ದಾರೆ. ಚಿತ್ರವು ಜುಲೈ 24 ರಂದು ಒಟಿಟಿ ಪ್ಲಾಟ್ ಫಾರಂನಲ್ಲಿ ತೆರೆ ಕಾಣಲಿದೆ.

ಪನ್ನಗ ಭರಣ ನಿರ್ದೇಶನದ ಪುನೀತ್ ರಾಜ್ ಕುಮಾರ್ ಹೋಂ ಬ್ಯಾನರ್ ಪಿಆರ್ ಕೆ ಪ್ರೊಡಕ್ಷನ್ಸ್  ನಿರ್ಮಾಣದ  ಈ ಚಿತ್ರದಲ್ಲಿ ಡ್ಯಾನಿಶ್ ಸೈತ್, ಸಾಲ್ ಯೂಸುಫ್ ಮತ್ತು ರಂಗಾಯಣ ರಘು ಮುಖ್ಯ ಪಾತ್ರವರ್ಗದಲ್ಲಿದ್ದಾರೆ.

"ಸ್ಕ್ರಿಪ್ಟ್ ಬಹಳ ತಮಾಷೆಯಾಗಿತ್ತು, ಹೆಚ್ಚು ಯೋಚಿಸಬೇಕಾದದ್ದಿರಲಿಲ್ಲ. ಈ ಚಿತ್ರದಲ್ಲಿ ಡ್ಯಾನಿ (ಡ್ಯಾನಿಶ್ ಸೈತ್) ಇದ್ದರು ಅವರು ನನ್ನ ಉತ್ತಮ ಸ್ನೇಹಿತ. ಪನ್ನ(ಪನ್ನಗ ಭರಣ) ಸಹ ಇದ್ದು ನಾನು ಯೋಜನೆಗೆ ಒಪ್ಪಿಗೆ ಸೂಚಿಸಿದ್ದೆ.

"ನಾನು ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದೆ. ಆದರೆ ನಾನು ಸರಿಯಾದ ಸ್ಕ್ರಿಪ್ಟ್ ಪಡೆಯುಅಲಿದ್ದೇನೆ ಅಥವಾ ಇದು ಸರಿಯಾದ ಸಮಯ ಎಂದು ನಾನು ಎಂದಿಗೂ ಭಾವಿಸಲಿಲ್ಲ ಭರತನಾಟ್ಯ ಡ್ಯಾನ್ಸರ್ ಆಗಿರುವ ಕಾರಣ ನಾನು ನಟನೆಯಲ್ಲಿ ಯಾವ ಅನುಭವ ಹೊಂದಿದವಳಲ್ಲ.  ಧಾರಾವಾಹಿನನಗೆ ಗರಿಷ್ಠ ಮಾನ್ಯತೆ ತಂದುಕೊಟ್ಟಿತ್ತು. ಇದು ಉತ್ತಮ ಕಲಿಕೆಯ ಅನುಭವವಾಗಿತ್ತು. ಹೇಗಾದರೂ, ನನ್ನ ವೈಯಕ್ತಿಕ ಜೀವನದ ಕಾರಣದಿಂದಾಗಿ ನಾನು ಒಂದೂವರೆ ವರ್ಷದ ನಂತರ ಧಾರಾವಾಹಿ ತ್ಯಜಿಸಬೇಕಾಯಿತು. ನಾನು ಮದುವೆಯಾಗುತ್ತೇನೆ ಅಥವಾ ಮಗುವನ್ನು ಹೊಂದುತ್ತೇನೆ ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ, ಅದು  ಸಹ ಬಹಳ ಬೇಗ ಜರುಗಿದೆ.

“ಈ ದಿನಗಳಲ್ಲಿ ಬಹಳಷ್ಟು ಮಹಿಳೆಯರು ಹಾಸ್ಯ ಚಿತ್ರಗಳ ಅಭಿನಯದಿಂದ ದೂರವಾಗುತ್ತಿದ್ದಾರೆ. ಕೆಲವೊಮ್ಮೆ ಅವರು ಹಾಸ್ಯ ಮಾಡಿದ್ದರೂ  ಅವರನ್ನು ನೀವು ಬೆಳ್ಳಿ ಪರದೆ ಮೇಲೆ ಕಾಣಲಾರಿರಿ. ಅವರು ಸಾಮಾಜಿಕ ಮಾಧ್ಯಮ ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ತಮ್ಮನ್ನು ಸೀಮಿತ ಮಾಡಿಕೊಳ್ಳುತ್ತಾರೆ.ಕನ್ನಡ ಚಿತ್ರಗಳಲ್ಲಿ ಸಹ, ಹಾಸ್ಯ ಸನ್ನಿವೇಶದಲ್ಲಿ, ವಿಶೇಷವಾಗಿ ಸ್ತ್ರೀ ಪಾತ್ರವಿರುವುದಿಲ್ಲ. ಇವೆಲ್ಲವನ್ನೂ ಗಮನಿಸಿ ನನ್ನ ಕಾಮಿಕ್ ಸೈಡ್ ಲುಕ್ ತೋರಿಸುವುದಕ್ಕಾಗಿ ನಾನೀ ಚಿತ್ರದಲ್ಲಿ ನಟಿಸಿದ್ದೇನೆ.

"ಆದರೆ ನೀವು ಕೇವಲ ಹಾಸ್ಯನಟ ಮಾತ್ರವಾಗಿದ್ದರೆ ನೀವೊಬ್ಬ ಸಮಕಾಲೀನ ನಟನಾಗಲು ಸಾಧ್ಯವಿಲ್ಲ. ಒಬ್ಬ ಕಲಾವಿದ ತೆರೆ ಮೇಲೆ ಮಿಂಚಲು ಎಲ್ಲವನ್ನೂ ಹೊಂದಿರಬೇಕು.  ನನ್ನ ಶಕ್ತಿ ಹಾಸ್ಯವಾಗಿದ್ದರೆ  ಇದರರ್ಥ ನಾನು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ  ಆದರೆ ಹಾಸ್ಯದಂತಹ ಸ್ಥಾಪಿತ  ಶಕ್ತಿಯನ್ನು ಹೊಂದಿರುವುದು ನಟನಿಗೆ ಅದ್ಭುತಗಳನ್ನು ತೆರೆದಿಡುತ್ತದೆ. 

 "ಬಹುಶಃ ಉತ್ತಮ ಸ್ಕ್ರಿಪ್ಟ್ ನನ್ನ ಬಾಳಿಗೆ ಬಂದಿದ್ದಾದರೆ ನಾನೂ ಕೂಡ ಮರಗಳನ್ನು ಸುತ್ತುವ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತೇನೆ.  ಆದರೆ ಅದರಲ್ಲಿ ಸಹ ಕೆಲವಾದರೂ ಹಾಸ್ಯದ ಲೇಪವಿರಬೇಕು."

ನಟಿ ದಿಶಾ ಫ್ರೆಂಚ್ ಬಿರಿಯಾನಿ ಚಿತ್ರದಲ್ಲಿ ಸುದ್ದಿ ವರದಿಗಾರನಾಗಿ ನಟಿಸುತ್ತಿದ್ದಾರೆ ಗರ್ಭಧಾರಣೆಯ ಆರಂಭಿಕ ಹಂತಗಳಲ್ಲಿಆಕೆ ಶೂಟಿಂಗ್ ನಲ್ಲಿ ಭಾಗವಹಿಸಿದ್ದಕ್ಕಾಗಿ ಅವರಿಗೆ ಹೆಮ್ಮೆ ಇದೆ. . “ನಾನು ಪನ್ನಗ ಅವರನ್ನು ಕರೆದು ತನ್ನ ಸ್ಥಿತಿ ಬಗ್ಗೆ ಹೇಳಿದ್ದೆ.ಆದರೆ ಅವರು ತುಂಬಾ ಸ್ಪಷ್ಟರಾಗಿದ್ದರು ಮತ್ತು ನಾನು ಈ ಪಾತ್ರವನ್ನು ನಿರ್ವಹಿಸಬೇಕೆಂದು ಒತ್ತಾಯಿಸಿದರು. ನನ್ನ ಹೊಟ್ಟೆ ಮುಂದಾಗಿ ಕಾಣಿಸಿಕೊಳ್ಳುವ ಮೊದಲು ನನ್ನ ಪಾತ್ರದ ಸಂಪೂರ್ಣ ಶೂಟಿಂಗ್ ಪೂರ್ಣಗೊಳಿಸಲು ನಾನು ಪ್ರಯತ್ನಿಸಿದೆ. ಇದು ಪನ್ನಗ ಭರಣ ಹಾಗೂ  ನನ್ನ ನಡುವಿನ ರಹಸ್ಯ ಕಾರ್ಯಾಚರಣೆ ಆಗಿತ್ತು. ನಾನು ಮಗುವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ತಿಳಿದಿತ್ತು. ಆ ರೀತಿಯಲ್ಲಿ, ಇದು ತುಂಬಾ ವಿಶೇಷವಾದ ಚಿತ್ರವಾಗಿದೆ, ”ಎಂದು ದಿಶಾ ಹೇಳುತ್ತಾರೆ

"ಒಂದು ರೀತಿಯಲ್ಲಿ, ಫ್ರೆಂಚ್ ಬಿರಿಯಾನಿಯ ಚಿತ್ರೀಕರಣವು ನನ್ನನ್ನು ದೈಹಿಕವಾಗಿ ಸಕ್ರಿಯವಾಗಿರಿಸಿತು, ಇದು ಗರ್ಭಾವಸ್ಥೆಯಲ್ಲಿ ನನಗೆ ಅಗತ್ಯವಾಗಿತ್ತು. ”

ಫ್ರೆಂಚ್ ಬಿರಿಯಾನಿಯ ನಂತರ, ದಿಶಾ  ಹೇಟ್ ಯು ರೋಮಿಯೋ ಎಂಬ ವೆಬ್ ಸರಣಿಯಲ್ಲಿಕಾಣಿಸಿಕೊಳ್ಳಲಿದ್ದಾರೆ. , 

ಡ್ಯಾನಿಶ್ ಸೈತ್ ಅವರ ಮತ್ತೊಂದು ಚಿತ್ರ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಸಹ ಒಟಿಟಿ ಬಿಡುಗಡೆ ಕಾಣುತ್ತಿದೆ. ದಿಶಾ ಅವರ ಮೂರು ಚಿತ್ರಗಳು  ಡಿಜಿಟಲ್ ಬಿಡುಗಡೆ ಕಾಣುವುದರೊಂದಿಗೆ ಅವರ ಬೆಳ್ಳಿ ಪರದೆಯ ಕನಸು ಇನ್ನೂ ನನಸಾಗಬೇಕಿದೆ. "ಇದು ಇನ್ನೂ ಆಗಿಲ್ಲವೆಂದು ನಾನು ಹೇಳಲಾರೆ.  ನಾನು ಅಭಿನಯಿಸಿರುವ ಆ ಚಿತ್ರಗಳು ಸಾಕಷ್ಟು ಅಗಾಧವಾಗಿವೆ. ಇದಲ್ಲದೆ, ಚಿತ್ರಮಂದಿರಗಳಿಗೆ ಹೋಲಿಸಿದರೆ ಅಮೆಜಾನ್ ಪ್ರೈಮ್  ಕಡಿಮೆಯಿಲ್ಲ. ಚಿತ್ರಮಂದಿರಗಳಲ್ಲಿ ನನ್ನ ಚಲನಚಿತ್ರವನ್ನು ನೋಡುವ ಖುಷಿಯನ್ನು ನಾನು ತಪ್ಪಿಸಿಕೊಳ್ಳುತ್ತೇನೆ ಎನ್ನುವುದು ಸರಿ , ಆದರೆ ಪರಿಸ್ಥಿತಿಯನ್ನು ಪರಿಗಣಿಸಿ, ಮನೆಯಲ್ಲೇ ಕುಳಿತು ಚಿತ್ರ ವೀಕ್ಷಿಸುವುದು ಉತ್ತಮ ಎನ್ನುವುದು ನನಗೆ ತಿಳಿದಿದೆ. ನಾನು ತುಂಬಾ ಉತ್ಸಾಹದಿಂದ ಅದನ್ನು ಎದುರು ನೋಡುತ್ತಿದ್ದೇನೆ, ”ಎಂದು ಅವರು ಹೇಳುತ್ತಾರೆ. “ನಾನು ಮನರಂಜನೆ ನೀಡಲು ಇಷ್ಟಪಡುವ ನಟ. ಕೊನೆಯಲ್ಲಿ, ಜನರ ಮುಖದಲ್ಲಿ ನಗು ತರಲು ನಾನು ಬಯಸುತ್ತೇನೆ, ” ನಟಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com