ನಟ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾಗೂ ಕೊರೋನಾ ಪಾಸಿಟಿವ್

ಚೆನ್ನೈನಲ್ಲಿ ನೆಲಸಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಹಾಗೂ ನಟಿ ಐಶ್ವರ್ಯ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಐಶ್ವರ್ಯಾ ಸರ್ಜಾ
ಐಶ್ವರ್ಯಾ ಸರ್ಜಾ

ಬೆಂಗಳೂರು: ಚೆನ್ನೈನಲ್ಲಿ ನೆಲಸಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಹಾಗೂ ನಟಿ ಐಶ್ವರ್ಯ ಅವರಿಗೂ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಇತ್ತೀಚಿಗಷ್ಟೇ ನಟ ಧ್ರುವ ಸರ್ಜಾ ದಂಪತಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿತ್ತು, ಇದೀಗ ಧ್ರುವ ಸರ್ಜಾ ಅವರ ಮಾವನ ಮಗಳು ಐಶ್ವರ್ಯಾಗೂ ಸೋಂಕು ತಾಗಿರುವುದು ದೃಢವಾಗಿದೆ.

ಸ್ವತಃ ಐಶ್ವರ್ಯ ಅವರೇ, ತಮಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿರುವುದನ್ನು ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ. ನನಗೆ ಇತ್ತೀಚೆಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಮನೆಯಲ್ಲಿಯೇ ಉಳಿದುಕೊಂಡು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಮುಂದುವರಿಸಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ. ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಕೋರಿದ್ದಾರೆ.

ಎರಡು ವರ್ಷದ ಹಿಂದೆ ಕನ್ನಡದಲ್ಲಿ ತೆರೆಕಂಡ ಕನ್ನಡದ ‘ಪ್ರೇಮಬರಹ’ ಚಿತ್ರದ ಮೂಲಕ ಐಶ್ವರ್ಯ ಬೆಳ್ಳಿತೆರೆಗೆ ಪ್ರವೇಶಿಸಿದ್ದರು. ಇದನ್ನು ಅವರ ತಂದೆ ಅರ್ಜುನ್‌ ಸರ್ಜಾ ಅವರೇ ನಿರ್ದೇಶಿಸಿದ್ದು. ಚಂದನ್‌ ಕುಮಾರ್‌ ನಾಯಕ ನಟನಾಗಿ ನಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com