ಶರತ್ ಪಾತ್ರಕ್ಕೆ ಯಶ್ ಮಾತ್ರ ಜೀವ ತುಂಬಲು ಸಾಧ್ಯ: 'ಗೂಗ್ಲಿ'ಗೆ 7 ವರ್ಷ, ಸಂತಸದಲ್ಲಿ ನಿರ್ದೇಶಕ ಪವನ್ ಒಡೆಯರ್

ನಟ ಯಶ್ ಇಮೇಜ್'ನ್ನು ಬೇರೆಂದು ಮಟ್ಟಕ್ಕೆ ತೆಗೆದುಕೊಂಡಿದ್ದ ಚಿತ್ರ ಗೂಗ್ಲಿ. ಈ ಸಿನಿಮಾ ತೆರೆಕಡು 7 ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಗೂಗ್ಲಿ ಚಿತ್ರದ ಸ್ಟಿಲ್
ಗೂಗ್ಲಿ ಚಿತ್ರದ ಸ್ಟಿಲ್

ನಟ ಯಶ್ ಇಮೇಜ್'ನ್ನು ಬೇರೆಂದು ಮಟ್ಟಕ್ಕೆ ತೆಗೆದುಕೊಂಡಿದ್ದ ಚಿತ್ರ ಗೂಗ್ಲಿ. ಈ ಸಿನಿಮಾ ತೆರೆಕಡು 7 ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ನಿರ್ದೇಶಕ ಪವನ್ ಒಡೆಯರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿದ್ದು, 12 ವರ್ಷದ ಸಂಭ್ರಮವನ್ನು ಮತ್ತಷ್ಟು ಸ್ಪೆಷನ್ ಮಾಡಿದ್ದಕ್ಕಾಗಿ ಯಶ್ ಅವರು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಇಂದಿಗೆ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳು ಕಳೆದಿದ್ದು, ಗೂಗ್ಲಿ ಚಿತ್ರ ಕೂಡ ತೆರೆಕಂಡೂ 7 ವರ್ಷಗಳಾಗಿವೆ ಎಂದಿರುವ ಯಶ್ ಅವರು, ನಿರ್ಮಾಪಕ ಜಯಣ್ಣ, ನಿರ್ದೇಶಕ ಪವನ್ ಒಡೆಯರ್, ನಟಿ ಕೃತಿ ಕರಬಂಧ, ಛಾಯಾಗ್ರಾಹಕ ವೈದಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಶುಭಾಶಯಗಳು ಹಾಗೂ ಧನ್ಯವಾದಗಳನ್ನು ಹೇಳಿದ್ದಾರೆ. 

ಇನ್ನು ಗೂಗ್ಲಿ ಚಿತ್ರ ತೆರೆಕಂಡು 7 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಯಶ್ ಇರುವ ಗೂಗ್ಲಿ ಚಿತ್ರದ ಒಂದು ಸ್ಟಿಲ್ ನ್ನು ಅಲ್'ಲೋಡ್ ಮಾಡಿರುವ ಪವನ್ ಒಡೆಯರ್ ಅವರು, ಮತ್ತೊಂದು ಗೂಗ್ಲಿ ಮಾಡೋಣ ಎಂಬ ಅರ್ಥದಲ್ಲಿ ಪ್ರಶ್ನೆ ಮಾಡಿದ್ದು, ಇದಕ್ಕೆ ಗೂಗ್ಲಿ ಚಿತ್ರದ ಡೈಲಾಗ್ ರೀತಿಯಲ್ಲಿಯೇ ಪ್ರತಿಕ್ರಿಯೆ ನೀಡಿರುವ ಯಶ್, ಈಗ ಹೇಳೋಕೆ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ ಎಂದು ಹೇಳಿದ್ದಾರೆ. 

ಇನ್ನೊಂದು ಗೂಗ್ಲಿ ಮಾಡೋಣ ಎಂದು ನೀವು ಕೇಳ್ತಾ ಇದ್ದೀರಾ? ಈಗ ಅದ್ರು ಬಗ್ಗೆ ಹೇಳ ಮೂಡ್ ಇಲ್ಲ, ನೆಕ್ಸ್ಟ್ ಟೈಮ್ ಸಿಕ್ಕಾಗ ಹೇಳ್ತೀನಿ ಎಂದಿದ್ದಾರೆ. ಇದಕ್ಕೆ ಪವನ್ ಅವರು, ಇದು ಗೂಗ್ಲಿ ಅಂದ್ರೆ ಎಂದು ಪ್ರತಿಕ್ರಿಯಿಸಿದ್ದಾರೆ. 

ಶರತ್ ಪಾತ್ರ ಇನ್ನೂ ಜೀವಂತವಾಗಿದೆ ಎಂದರೆ ಬಹಳ ಸಂತೋಷವಾಗುತ್ತದೆ. ಗೂಗ್ಲಿ ಚಿತ್ರ ಮತ್ತೆ ಮುಂದುವರೆದರೆ, ಆ ಪಾತ್ರಕ್ಕೆ ಯಶ್ ಮಾತ್ರವೇ ಇರಬೇಕು. ಯಶ್ ಬಿಟ್ಟು ಬೇರೊಬ್ಬರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಗೂಗ್ಲಿ ಚಿತ್ರದ ಲವ್ ಸ್ಟೋರಿಗೆ ಅದೇ ಪ್ಲಬ್ ಪಾಯಿಂಟ್. ಪ್ರೀತಿ ವೈಫಲ್ಯದ ದುಃಖವನ್ನು ಚಿತ್ರದಲ್ಲಿ ತರಲಿಲ್ಲ. ಬದಲಾಗಿ ಶರತ್ ಮತ್ತೆ ಪುಟಿದೇಳುವಂತೆ ಮಾಡಿದ್ದೆ, ಗುರಿ ಸಾಧಿಸುವಂತೆ ಮಾಡಿದ್ದೆ. ಚಿತ್ರ ಅನೇಕರಿಗೆ ಸ್ಫೂರ್ತಿ ನೀಡಿದೆ. 

ರೆಮೋ ಚಿತ್ರ ಕೂಡ ಇದೇ ರೀತಿಯ ಟ್ರೆಂಡ್ ನ್ನು ತರಲಿದೆ ಎಂಬ ವಿಶ್ವಾಸ ನನಗಿದೆ. ಡಬ್ಬಿಂಗ್ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಸಂಗೀತ ಕುರಿತು ಕೆಲಸಗಳು ಪ್ರಗತಿಯಲ್ಲಿವೆ. ಚಿತ್ರದಲ್ಲಿ ಇಶಾನ್ ಹಾಗೂ ಆಶಿಕಾ ರಂಗನಾಥ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಯಶ್ ಅವರು ಕೆಜಿಎಫ್ ಭಾಗ-2 ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com