ಪ್ರಭಾಸ್ ಗೆ ದೀಪಿಕಾ ನಾಯಕಿ, ತೆಲಗು ಚಿತ್ರಕ್ಕಾಗಿ ಪಡುಕೋಣೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಬಾಲಿವುಡ್‌ನ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ತೆಲುಗು ಚಿತ್ರವೊಂದಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭವಾನೆ ಪಡೆಯಲಿದ್ದಾರೆ.

Published: 23rd July 2020 05:58 PM  |   Last Updated: 23rd July 2020 05:58 PM   |  A+A-


deepika-prbhas1

ದೀಪಿಕಾ - ಪ್ರಭಾಸ್

Posted By : Lingaraj Badiger
Source : UNI

ಮುಂಬೈ: ಬಾಲಿವುಡ್‌ನ ಡಿಂಪಲ್ ಗರ್ಲ್ ದೀಪಿಕಾ ಪಡುಕೋಣೆ ತೆಲುಗು ಚಿತ್ರವೊಂದಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭವಾನೆ ಪಡೆಯಲಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು 'ಬಾಹುಬಲಿ' ಖ್ಯಾತಿಯ ಸೂಪರ್ ಸ್ಟಾರ್ ಪ್ರಭಾಸ್ ಅವರನ್ನು ಒಟ್ಟಿಗೆ ಬೆಳ್ಳಿ ಪರದೆಯಲ್ಲಿ ಕಾಣಬಹುದು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್‌ಗೆ ದೀಪಿಕಾ ಪಡುಕೋಣೆ ನಾಯಕಿ.

ಈ ಚಿತ್ರ ತೆಲುಗಿನಲ್ಲಿರಲಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ಹಿಂದಿ ಮತ್ತು ತಮಿಳು ಭಾಷೆಯಲ್ಲೂ ಡಬ್ ಮಾಡಲಾಗುವುದು. ಇದು ವಿಜ್ಞಾನದ ಆಧಾರಿತ ಚಿತ್ರವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಚಿತ್ರಕ್ಕೆ ವೈಜಯಂತಿ ಮೂವೀಸ್ ಬಂಡವಾಳ ಹೂಡಲಿದ್ದು, ತೆಲುಗಿನ ಈ ಚಿತ್ರದಲ್ಲಿನ ನಟನೆಗಾಗಿ ಆಕೆ ದೀಪಿಕಾ 20 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾಳೆ ಎಂಬುದು ಟಾಲಿವುಡ್‌ ಅಂಗಳದ ಮಾಹಿತಿ.

ನಾಗ್‌ ಅಶ್ವಿನ್‌ ನಿರ್ದೇಶಿಸುವ ಹೊಸ ಚಿತ್ರದಲ್ಲಿನ ಹೀರೊಯಿನ್‌ ಪಾತ್ರ ನೃತ್ಯ ಆಧರಿತವಾಗಿದೆ. ನೃತ್ಯಕ್ಕೆ ಹೆಚ್ಚು ಸ್ಕೋಪ್‌ ಇದೆಯಂತೆ. ಡಿಪ್ಪಿ ಮಾತ್ರವೇ ನೃತ್ಯದ ಮೂಲಕ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯ. ಹಾಗಾಗಿಯೇ, ದೀಪಿಕಾ ಇದಕ್ಕೆ ಸೂಕ್ತ ಹೀರೊಯಿನ್ ಎಂದು ನಿರ್ಧರಿಸಿ ಆಕೆಯನ್ನು ನಿರ್ದೇಶಕರು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

Stay up to date on all the latest ಸಿನಿಮಾ ಸುದ್ದಿ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp