ಕೆರಳಿದ ಪವನ್ ಕಲ್ಯಾಣ್ ಫ್ಯಾನ್, ರಾಮಗೋಪಾಲ್ ವರ್ಮಾ ಕಚೇರಿ ಧ್ವಂಸ!

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ರೊಚ್ಚಿಗೆದಿದ್ದು ತೆಲುಗಿನ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರ ಕಚೇರಿಯನ್ನು ಧ್ವಂಸ ಮಾಡಿದ್ದಾರೆ.

Published: 24th July 2020 07:30 PM  |   Last Updated: 24th July 2020 07:30 PM   |  A+A-


pawan kalyan-RGV

ಪವನ್ ಕಲ್ಯಾಣ್-ರಾಮಗೋಪಾಲ್ ವರ್ಮಾ

Posted By : Vishwanath S
Source : IANS

ಹೈದರಾಬಾದ್: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ರೊಚ್ಚಿಗೆದಿದ್ದು ತೆಲುಗಿನ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮಾ ಅವರ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. 

ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ತಮ್ಮ ಹೊಸ ಚಿತ್ರದ ಮೂಲಕ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ಅಭಿಮಾನಿಗಳನ್ನು ಕೆರಳಿಸಿದ್ದಾರೆ. ರೊಚ್ಚಿಗೆದ್ದ ಅಭಿಮಾನಿಗಳ ಗುಂಪು ಕಲ್ಲು ತೂರಾಟ ನಡೆಸಿ ವರ್ಮಾ ಅವರ ಕಚೇರಿಯ ಕಿಟಕಿ ಫಲಕಗಳನ್ನು ಹೊಡೆದು ಹಾಕಿದ್ದಾರೆ. 

ಪವನ್ ಕಲ್ಯಾಣ್ ಅವರ ಜೀವನ ಮತ್ತು ಅವರ ವಿಫಲ ರಾಜಕೀಯ ಜೀವನವನ್ನು ಆಧರಿಸಿ ವರ್ಮಾ ಅವರ ವಿಡಂಬನಾತ್ಮಕ "ಪವರ್ ಸ್ಟಾರ್" ಚಿತ್ರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ತಮ್ಮ ಅಧಿಕೃತ ವೆಬ್‌ಸೈಟ್ ಆರ್‌ಜಿವಿ ವರ್ಲ್ಡ್ ನಲ್ಲಿ ಬಿಡುಗಡೆ ಮಾಡುವುದಾಗಿ ವರ್ಮಾ ಘೋಷಿಸಿದಾಗಿನಿಂದಲೂ ಪವನ್ ಅಭಿಮಾನಿಗಳು ವರ್ಮಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ದೂಷಿಸುತ್ತಿದ್ದಾರೆ.

ದಾಳಿಯ ನಂತರ ಚಿತ್ರದ ನಿರ್ಮಾಪಕರು ನಗರದ ಜುಬಿಲಿ ಹಿಲ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ. ವರದಿಗಳ ಪ್ರಕಾರ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ.

ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ವರ್ಮಾ ಅವರು "ಇದು ಪ್ರಜಾಪ್ರಭುತ್ವ ದೇಶ. ಇಲ್ಲಿ ಸಿನಿಮಾ ಮಾಡುವ ಹಕ್ಕಿದೆ. ಇದು ಕಾಲ್ಪನಿಕ ಸಿನಿಮಾವಾಗಿದ್ದು ಯಾರಿಗೂ ಸಂಬಂಧಿಸಿಲ್ಲ ಎಂದು ನಾನು ಹೇಳುತ್ತಲೆ ಬಂದಿದ್ದೇನೆ. ಆದರೆ ಅವರಿಗೆ ಅದು ಅರ್ಥವಾಗುತ್ತಿಲ್ಲ. ನನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp