ರಾಬರ್ಟ್ ಪೋಸ್ಟರ್ ವೈಬ್ರಂಟ್ ಕಲರ್ ಹಾಗೂ ಪಾಸಿಟಿವಿಟಿಯಿಂದ ಕೂಡಿದೆ: ನಿರ್ದೇಶಕ ತರುಣ್

ಬಿಡುಗಡೆಗೊಳಿಸಲಾಗಿರುವ ರಾಬರ್ಟ್ ಚಿತ್ರದ ಮತ್ತೊಂದು ಪೋಸ್ಟರ್ ವೈಬ್ರಂಟ್ ಕಲರ್ ಹಾಗೂ ಪಾಸಿಟಿವಿಯಿಂದ ಕೂಡಿದೆ ಎಂದು ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಹೇಳಿದ್ದಾರೆ. 

Published: 28th July 2020 12:41 PM  |   Last Updated: 28th July 2020 12:41 PM   |  A+A-


A still from Roberrt

ರಾಬರ್ಟ್ ಹೊಸ ಲುಕ್ ನಲ್ಲಿ ದರ್ಶನ್

Posted By : Manjula VN
Source : The New Indian Express

ಬಿಡುಗಡೆಗೊಳಿಸಲಾಗಿರುವ ರಾಬರ್ಟ್ ಚಿತ್ರದ ಮತ್ತೊಂದು ಪೋಸ್ಟರ್ ವೈಬ್ರಂಟ್ ಕಲರ್ ಹಾಗೂ ಪಾಸಿಟಿವಿಯಿಂದ ಕೂಡಿದೆ ಎಂದು ರಾಬರ್ಟ್ ಚಿತ್ರದ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಹೇಳಿದ್ದಾರೆ. 

ನಿನ್ನೆಯಷ್ಟೇ ರಾಬರ್ಟ್ ಚಿತ್ರದ ತಂಡ, ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಹುಟ್ಟುಹಬ್ಬದ ಪ್ರಯುಕ್ತ ಡಿಬಾಸ್ ಹೊಸ ಲುಕ್ ರಿವೀಲ್ ಮಾಡಿತ್ತು. ಪೋಸ್ಟರ್ ನಲ್ಲಿ ದರ್ಶನ್ ಅವರ ಹೊಸ ಲುಕ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಖದರ್ ಸೃಷ್ಟಿಸಿದ್ದು, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. 

ನೂತನ ಪೋಸ್ಟರ್ ಕುರಿತಂತೆ ಮಾತನಡಿರುವ ತರುಣ್ ಅವರು, ಪೋಸ್ಟರ್ ಅತ್ಯಂತ ರೋಮಾಂಚಕಾರಿ ಬಣ್ಣಗಳಿಂದ ಕೂಡಿದ್ದು, ಪಾಸಿಟಿವಿಟಿಯಿಂದ ಕೂಡಿದೆ ಎಂದಿದ್ದಾರೆ. 

ಈ ಹಿಂದೆ ಬಿಡುಗಡೆ ಮಾಡಲಾಗಿತ್ತ ಮೊದಲ ಪೋಸ್ಟರ್ ಕೆಲವು ಆ್ಯಕ್ಷನ್ ಗಳನ್ನು ತೋರಿಸಲಾಗಿತ್ತು. ಹೀಗಾಗಿ ಈ ಪೋಸ್ಟರ್ ಮೂಲಕ ಜನರಲ್ಲಿ ಸಂತೋಷದ ಕ್ಷಣವನ್ನು ಹೊರತರಲು ನಾವು ಬಯಸಿದ್ದೆವು ಎಂದು ತಿಳಿಸಿದ್ದಾರೆ, ಆದರೆ, ಚಿತ್ರಕಥೆ ಕುರಿತು ತರುಣ್ ಅವರು ಹೆಚ್ಚು ಮಾತನಾಡಿಲ್ಲ. ಪೋಸ್ಟರ್ ನಲ್ಲಿರುವ ಈ ಲುಕ್'ನ್ನು ಜನರು ಚಿತ್ರಮಂದಿರಲ್ಲಿ ನೋಡಿದರೆ ಬಹಳ ಸಂತೋಷಗೊಂಡು ಸೀಟಿಗಳನ್ನು ಹೊಡೆಯಲು ಆರಂಭಿಸಿದ್ದಾರೆಂದು ತಿಳಿಸಿದ್ದಾರೆ. 

ಅಂದುಕೊಂಡಂತೆ ಆಗಿದ್ದರೆ ರಾಬರ್ಟ್ ಚಿತ್ರವು ಏಪ್ರಿಲ್ 9ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ. 

Stay up to date on all the latest ಸಿನಿಮಾ ಸುದ್ದಿ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp