ನಿರ್ದೇಶಕ ರವೀಂದ್ರನಾಥ್ ಚಿತ್ರದಲ್ಲಿ ಧನಂಜಯ್ ಮತ್ತು ರಚಿತಾ ರಾಮ್?

ನಿರ್ದೇಶಕ ರವೀಂದ್ರನಾಥ್ ನಿರ್ದೇಶನದ ಪುಷ್ಪಕ ವಿಮಾನ ಚಿತ್ರದಲ್ಲಿ ನಟಿಸಿದ್ದ ನಟಿ ರಚಿತಾ ರಾಮ್ ಇದೀಗ ನಿರ್ದೇಶಕರ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿರುವುದನ್ನು ದೃಢಪಡಿಸಿದ್ದಾರೆ. ಇನ್ನು ವಿಖ್ಯಾತ ಚಿತ್ರ ಬ್ಯಾನರ್ ಅಡಿಯಲ್ಲಿ ಎಸ್ ರವೀಂದ್ರನಾಥ್ ನಿರ್ದೇಶನದ ಚಿತ್ರದಲ್ಲಿ ನಟ ಧನಂಜಯ್ ಕೂಡ ಭಾಗವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.

Published: 29th July 2020 12:36 PM  |   Last Updated: 29th July 2020 12:36 PM   |  A+A-


dhananjay-Rachita

ಧನಂಜಯ್-ರಚಿತಾ ರಾಮ್

Posted By : Vishwanath S
Source : The New Indian Express

ನಿರ್ದೇಶಕ ರವೀಂದ್ರನಾಥ್ ನಿರ್ದೇಶನದ ಪುಷ್ಪಕ ವಿಮಾನ ಚಿತ್ರದಲ್ಲಿ ನಟಿಸಿದ್ದ ನಟಿ ರಚಿತಾ ರಾಮ್ ಇದೀಗ ನಿರ್ದೇಶಕರ ಮತ್ತೊಂದು ಚಿತ್ರದಲ್ಲಿ ಅಭಿನಯಿಸುತ್ತಿರುವುದನ್ನು ದೃಢಪಡಿಸಿದ್ದಾರೆ. ಇನ್ನು ವಿಖ್ಯಾತ ಚಿತ್ರ ಬ್ಯಾನರ್ ಅಡಿಯಲ್ಲಿ ಎಸ್ ರವೀಂದ್ರನಾಥ್ ನಿರ್ದೇಶನದ ಚಿತ್ರದಲ್ಲಿ ನಟ ಧನಂಜಯ್ ಕೂಡ ಭಾಗವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.

ಟಗರು ಖ್ಯಾತಿಯ ಡಾಲಿ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಕನಸಿನ ಪಾತ್ರಗಳಿಗೆ ಸರಿಹೊಂದುತ್ತಾರೆ ಎಂದು ನಿರ್ದೇಶಕ ಮತ್ತು ನಿರ್ಮಾಪಕರು ಭಾವಿಸಿದ್ದಾರೆ. ರವೀಂದ್ರನಾಥ್ ನಿರ್ದೇಶನದಲ್ಲಿ ಅದಾಗಲೇ ರಚಿತಾ ನಟಿಸಿದ್ದು ಧನಂಜಯ್ ನಿರ್ದೇಶಕ ಮತ್ತು ನಿರ್ಮಾಪಕರೊಂದಿಗೆ ಕೈಜೋಡಿಸುತ್ತಿರುವುದು ಇದೇ ಮೊದಲು. 

ಯೋಗೇಶ್ ನಾರಾಯಣ್ ನಿರ್ಮಿಸುತ್ತಿರುವ ಪ್ರಭು ಶ್ರೀನಿವಾಸ್ ನಿರ್ದೇಶನದ ಚಿತ್ರದಲ್ಲಿ ಧನಂಜಯ್ ಮತ್ತು ರಚಿತಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಲಾಕ್ ಡೌನ್ ಮೊದಲು ಲಖನೌದಲ್ಲಿ ಧನಂಜಯ್ ಅವರ ಒಂದು ಭಾಗವನ್ನು ಚಿತ್ರೀಕರಿಸಿದ್ದಾರೆ. ಚಿತ್ರೀಕರಣದಲ್ಲಿ ರಚಿತಾ ಇನ್ನೂ ಭಾಗವಹಿಸಿಲ್ಲ. ಎಲ್ಲವೂ ಸರಿಯಾಗಿ ನಡೆದರೆ, ಇಬ್ಬರು ನಟರಿಗೆ ಇದು ಎರಡನೇ ಯೋಜನೆಯಾಗಿದೆ.

ರಚಿತಾ ಅಭಿನಯದ 100, ಏಕ್ ಲವ್ ಯಾ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ತೆಲುಗು ಚೊಚ್ಚಲ ಚಿತ್ರವಾದ ಸೂಪರ್ ಮಾಚಿ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ ನಟಿ, ಏಪ್ರಿಲ್, ಲಿಲ್ಲಿ, ಮತ್ತು ವೀರಂ ಎಂಬ ವಿವಿಧ ಯೋಜನೆಗಳಿಗೆ ಸಹಿ ಮಾಡಿದ್ದಾರೆ. ಧನಂಜಯ್ ಸಹ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ ನಟರಾಗಿದ್ದು ನಟ-ನಿರ್ದೇಶಕ ವಿಜಯ್ ಅವರೊಂದಿಗೆ ಸಲಗ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದು ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. 

ಧನಂಜಯ ಅವರು ಪುನೀತ್ ರಾಜ್‌ಕುಮಾರ್ ನಟನೆಯ ಯುವರತ್ನ, ಧ್ರುವ ಸರ್ಜಾ ನಟಿಸಿರುವ ಪೊಗರು ಚಿತ್ರದಲ್ಲಿ ನಟಿಸಿದ್ದಾರೆ. ಬಾದವ ರಾಸ್ಕಲ್ ಚಿತ್ರದ ನಿರ್ಮಾಣದ ಜೊತೆಗೆ ಡಾಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಏತನ್ಮಧ್ಯೆ, ಅವರು ಮೊದಲ ಭೂಗತ ಡಾನ್ ಅವರ ಜೀವನಚರಿತ್ರೆಯ ಜಯರಾಜ್ ಪಾತ್ರವನ್ನು ನಿರ್ವಹಿಸಲು ಸಜ್ಜಾಗಿದ್ದಾರೆ. 

Stay up to date on all the latest ಸಿನಿಮಾ ಸುದ್ದಿ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp