ಮಂಗಳೂರಿನ ಅಂಡರ್ ವರ್ಲ್ಡ್ ಡಾನ್ 'ಅಮರ್ ಆಳ್ವ' ಪಾತ್ರದಲ್ಲಿ ರಿಷಬ್ ಶೆಟ್ಟಿ

ಕೊರೋನಾ ಲಾಕ್ ಡೌನ್ ನಟ ನಿರ್ದೇಶಕ ರಿಷಬ್ ಶೆಟ್ಟಿ ಪಾಲಿಗೆ ವರವಾಗಿದೆ. ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ರಿಷಬ್ ಶೆಟ್ಟಿ ನಿರ್ದೇಶನದಂತೆ ನಟನೆಯ ಕಡೆ ಕೂಡ ಹೆಚ್ಚಿನ  ಗಮನ ಹರಿಸುತ್ತಿದ್ದಾರೆ.
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

ಕೊರೋನಾ ಲಾಕ್ ಡೌನ್ ನಟ ನಿರ್ದೇಶಕ ರಿಷಬ್ ಶೆಟ್ಟಿ ಪಾಲಿಗೆ ವರವಾಗಿದೆ. ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡಿರುವ ರಿಷಬ್ ಶೆಟ್ಟಿ ನಿರ್ದೇಶನದಂತೆ ನಟನೆಯ ಕಡೆ ಕೂಡ ಹೆಚ್ಚಿನ  ಗಮನ ಹರಿಸುತ್ತಿದ್ದಾರೆ.

ರುದ್ರಪ್ರಯಾಗ ಶೂಟಿಂಗ್ ಆರಂಭಿಸಿರುವ ಶೆಟ್ಟಿ  ಅಂಡರ್ ವರ್ಲ್ಡ್ ಡಾನ್ ಅಮರ್ ಆಳ್ವ ಪಾತ್ರದಲ್ಲಿ ನಟಿಸಲು  ಸಿದ್ಧತೆ ನಡೆಸುತ್ತಿದ್ದಾರೆ.

1980-90 ರ ದಶಕದಲ್ಲಿ ನಡೆದ ಘಟನಾವಳಿಗಳಿಗೆ ಶೆಟ್ಟಿ ಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ, ನಿತೇಶ್ ಇದಕ್ಕೆ ಸಹಾಯ ಮಾಡುತ್ತಿದ್ದಾರೆ.

ಮಂಗಳೂರು ಭೂಗತ್ತಿನಲ್ಲಿ ಅಮರ್ ಆಳ್ವ ತನ್ನದೇ ಚಾಪು ಮೂಡಿಸಿದ್ದ ವ್ಯಕ್ತಿ, ಮುತ್ತಪ್ಪ ರೈ, ಎಂಪಿ ಜಯರಾಜ್, ಆಯಿಲ್ ಕುಮಾರ್ ರಂತೆ ಈತನ ಹೆಸರು ಭೂತ ಜಗತ್ತಿನಲ್ಲಿ ಚಿರಪರಿಚಿತ.

1992 ರಲ್ಲಿ ಅಮರ್ ಅಳ್ವನನ್ನು ಶೂಟ್ ಮಾಡಿ ಕೊಲ್ಲಲಾಯಿತು, ಯುವ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ ಹಲವು ವಿಷಯಗಳ ಕುರಿತು ಸಿನಿಮಾ ಮಾಡಿದ್ದಾರೆ.

ಡಿಟೆಕ್ಟಿವ್ ದಿವಾಕರ್ ಪಾತ್ರದ ಮೂಲದ ಬೆಲ್ ಬಾಟಮ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ರಿಷಭ್ ಗೆ ಇದು ಹೊಸ ಪಾತ್ರ, ಸಿನಿಮಾ ನಿರ್ಮಾಣ ಯಾರು ಮಾಡುತ್ತಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ, 2021ಕ್ಕೆ ಸಿನಿಮಾ ಸೆಟ್ಟೇರಲಿದೆ. ಸದ್ಯ ರಿಷಬ್ ಶೆಟ್ಟಿ ರುದ್ರ ಪ್ರಯಾಗ, ಹರಿ ಕಥೆ ಗಿರಿಕಥೆ ಬೆಲ್ ಬಾಟಮ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com