ಸ್ಯಾಂಡಲ್ ವುಡ್ ನಲ್ಲಿ ತಯಾರಾಗ್ತಿದೆ ಡಾನ್ ಅಮರ್ ಆಳ್ವ ಜೀವನಾಧಾರಿತ ಚಿತ್ರ, ಆದ್ರೆ ರಿಷಬ್ ಶೆಟ್ಟಿ ನಾಯಕನಲ್ಲ!

ಭೂಗತ ಲೋಕ ಎನ್ನುವುದು ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರೋದ್ಯಮದವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಉಪೇಂದ್ರ ಅಭಿನಯದ ಆರ್ ಚಂದ್ರುವಿನ ಕಬ್ಜ ಸಹ ಓರ್ವ ಗ್ಯಾಂಗ್ ಸ್ಟರ್ ಜೀವನಾಧಾರಿತ ಕಥೆಯಾಗಿದೆ. 
ಸ್ಯಾಂಡಲ್ ವುಡ್ ನಲ್ಲಿ ತಯಾರಾಗ್ತಿದೆ ಡಾನ್ ಅಮರ್ ಆಳ್ವ ಜೀವನಾಧಾರಿತ ಚಿತ್ರ, ಆದ್ರೆ ರಿಷಬ್ ಶೆಟ್ಟಿ ನಾಯಕನಲ್ಲ!

ಭೂಗತ ಲೋಕ ಎನ್ನುವುದು ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರೋದ್ಯಮದವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಉಪೇಂದ್ರ ಅಭಿನಯದ ಆರ್ ಚಂದ್ರುವಿನ ಕಬ್ಜ ಸಹ ಓರ್ವ ಗ್ಯಾಂಗ್ ಸ್ಟರ್ ಜೀವನಾಧಾರಿತ ಕಥೆಯಾಗಿದೆ. ಇದೀಗ ರಿಷಬ್ ಶೆಟ್ಟಿ ನಿರ್ದೇಶಕ ನಿತೇಶ್ ಅವರ ಚೊಚ್ಚಲ ಚಿತ್ರದಲ್ಲಿ ಡಾನ್ ಅಮರ್ ಆಳ್ವ ಅವರ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಸುದ್ದಿ ಬಂದಿದೆ.  ವಿಶೇಷವೆಂದರೆ  ಅಮರ್ ಆಳ್ವ ಜೀವನಾಧಾರಿತ ಮತ್ತೊಂದು ಚಿತ್ರ ನಿರ್ಮಾಣ ಹಂತದಲ್ಲಿದೆ.

ಈ ಹಿಂದೆ ಕಂಬಳ ಜಾಕಿ ಶ್ರೀನಿವಾಸ್ ಗೌಡರ ಬಗ್ಗೆ ಚಿತ್ರ ನಿರ್ಮಾಣಕ್ಕೆ ಯೋಜನೆ ಹಾಕಿದ್ದ ನಿರ್ಮಾಪಕ ಲೋಕೇಶ್ ಶೆಟ್ಟಿ ಈ ಯೋಜನೆಯನ್ನು ಮುಂದೂಡಿದ್ದಾರೆ. ಬದಲಿಗೆ ಗ್ಯಾಂಗ್ ಸ್ಟರ್ ಒಬ್ಬನ ಜೀವನಾಧಾರಿತ ಕಥೆ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ. ನಿಂಬೆ ಗ್ರಾಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುತ್ತಿರುವ ಲೋಕೇಶ್ ಶೆಟ್ಟಿಯವರೇ ಈ ಕಥೆ ಬರೆದಿದ್ದಾರೆ.ಜತೆಗೆ ನಿರ್ದೇಶಕರೂ ಆಗಲಿದ್ದಾರೆ. 

“ನಾನು 1992 -ಒನ್ಸ್ ಅಪಾನ್ ಎ ಟೈಮ್ ಇನ್ ಮಂಗಳೂರು ಎಂಬ ಶೀರ್ಷಿಕೆಯನ್ನು ಫಿಲ್ಮ್ ಚೇಂಬರ್‌ ನಲ್ಲಿ ನೊಂದಾಯಿಸಿದ್ದೆ.  ಇದು ನಿಜವಾದ ಘಟನೆಗಳನ್ನು ಆಧರಿಸಿದೆ ”ಎಂದು ಕನ್ನಡ ಮತ್ತು ಹಿಂದಿಯಲ್ಲಿ ಚಿತ್ರ ನಿರ್ಮಾಣ ಮಾಡಲು ಯೋಜಿಸಿರುವ ನಿರ್ಮಾಪಕ-ನಿರ್ದೇಶಕ ಶೆಟ್ಟಿ ಹೇಳಿದ್ದಾರೆ. “ನಾವು ಎಂಪಿ ಜಯರಾಜ್ ಅವರ  ಪುತ್ರ ಅಜಿತ್ ಜಯರಾಜ್ ಅವರನ್ನು ಅಮರ್ ಆಳ್ವ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಸಿದ್ದೇವೆ. ಸುಶಾಂತ್ ಪೂಜಾರಿ ಮತ್ತು ತುಮುಲ್ ಬಲ್ಯಾನ್. ಸಹ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. 

"ಉಳಿದ ನಟರನ್ನು ಅಂತಿಮಗೊಳಿಸುವ  ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಚಿತ್ರೀಕರಣವನ್ನು ಪ್ರಾರಂಭಿಸಲು ಎದುರು ನೋಡುತ್ತೇವೆ, ”ಎಂದು ಅವರು ಹೇಳುತ್ತಾರೆ. ತಾಂತ್ರಿಕ ದೃಷ್ಟಿಯಿಂದ, 1992ಕ್ಕೆ ರವಿಶ್ ಸಂಗೀತ ನೀಡಿದರೆ ಸಪನ್ ನರುಲಾ ಛಾಯಾಗ್ರಹಣವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com