ಮೈಸೂರು ಡೈರೀಸ್‌' ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ!

ನಟ ಪ್ರಭು ಮುಂಡ್ಕೂರು ನಾಯಕನಾಗಿ ನಟಿಸಿರುವ ಮೈಸೂರು ಡೈರೀಸ್‌' ಚಿತ್ರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲಿದೆ. ಮೈಸೂರು ಡೈರೀಸ್‌' ಚಿತ್ರವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.
ಮೈಸೂರು ಡೈರೀಸ್
ಮೈಸೂರು ಡೈರೀಸ್

ನಟ ಪ್ರಭು ಮುಂಡ್ಕೂರು ನಾಯಕನಾಗಿ ನಟಿಸಿರುವ ಮೈಸೂರು ಡೈರೀಸ್‌' ಚಿತ್ರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲಿದೆ. ಮೈಸೂರು ಡೈರೀಸ್‌' ಚಿತ್ರವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ಅಮೆಜಾನ್‌ ಪ್ರೈಮ್‌ ಜತೆಗೆ ಮಾತುಕತೆ ನಡೆಯುತ್ತಿದೆ.

ಮೈಸೂರಿನ ಸೂಕ್ಷ್ಮತೆಗಳನ್ನು ಅನಾವರಣಗೊಳಿಸಲಿರುವ 'ಮೈಸೂರು ಡೈರೀಸ್‌' ಚಿತ್ರಕ್ಕೆ ಧನಂಜಯ್‌ ರಂಜನ್ ಆಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರಕ್ಕೆ ಚೇತನ್‌ ಕೃಷ್ಣ, ದೀಪಕ್‌ ಕೃಷ್ಣ ಬಂಡವಾಳ ಹೂಡಿದ್ದಾರೆ. ಫ್ರಭು ಮುಂಡ್ಕೂರು., ಪಾವನ ಗೌಡ, ಧನಂಜಯ್ ರಂಜನ್ ಪ್ರಧಾನ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಾಬು ಹಿರಣ್ಣಯ್ಯ ರೂಪಾ ರಾಯಪ್ಪ ಮತ್ತು ರಮಾ ರಾವ್ ಕೂಡ ನಟಿಸಿದ್ದಾರೆ.

ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಚಿತ್ರಮಂದಿರಗಳು ಬಾಗಿಲು ತೆರೆಯುವುದು ವಿಳಂಬವಾಗುತ್ತಿರುವುದರಿಂದ ಚಿತ್ರಗಳನ್ನು ಬಿಡುಗಡೆ ಮಾಡಲು ನಿರ್ಮಾಪಕರು ಒಟಿಟಿ ವೇದಿಕೆಯನ್ನು ಪರ್ಯಾಯ ಮಾರ್ಗವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com