ದಾಖಲೆ ಬರೆದ 'ಜೊತೆ ಜೊತೆಯಲಿ' ಸೀರಿಯಲ್ ಟೈಟಲ್ ಟ್ರ್ಯಾಕ್ 

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಇದೀಗ ಹೊಸ ದಾಖಲೆ ಮಾಡಿದೆ. 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಜೊತೆಯಲ್ಲಿ ಜೊತೆಯಲ್ಲಿ' ಎನ್ನುವ ಈ ಹಾಡು ಯು ಟ್ಯೂಬ್ ನಲ್ಲಿ 1 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ.

Published: 11th June 2020 11:58 AM  |   Last Updated: 11th June 2020 12:39 PM   |  A+A-


AnirudhaMeghashetty1

ನಟ ಅನಿರುದ್ಧ, ಮೇಘಾ ಶೆಟ್ಟಿ

Posted By : Nagaraja AB
Source : Online Desk

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲ್ಲಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಇದೀಗ ಹೊಸ ದಾಖಲೆ ಮಾಡಿದೆ. 'ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು, ಜೊತೆಯಲ್ಲಿ ಜೊತೆಯಲ್ಲಿ' ಎನ್ನುವ ಈ ಹಾಡು ಯು ಟ್ಯೂಬ್ ನಲ್ಲಿ 1 ಕೋಟಿ ವೀಕ್ಷಣೆ ಪಡೆದು ದಾಖಲೆ ಮಾಡಿದೆ.

ನಟ ಅನಿರುದ್ಧ ಹಾಗೂ ನಟಿ ಮೇಘಾ ಶೆಟ್ಟಿ ಕಾಂಬಿನೇಷನ್‌ನ ಈ ಹಾಡು ಎಲ್ಲರಿಗೂ ಇಷ್ಟವಾಗುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಿಟ್ ಆಗಿತ್ತು.ಎಷ್ಟೋ ಜನ ಈ ಹಾಡನ್ನು ಟಿಕ್ ಟಾಕ್ ಮಾಡಿದ್ದರು. ಮದುವೆ ಆಲ್ಬಂನಲ್ಲಿ ಬಳಸಿದ್ದರು. ಹಾಡು ಜನಪ್ರಿಯವಾಗುತ್ತಿದ್ದಂತೆ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಲಾಗಿತ್ತು.ಇದೀಗ ಅಲ್ಲಿಯೂ ಈ ಹಾಡು ಭರ್ಜರಿ ಹಿಟ್ ಆಗಿದ್ದು, 1 ಕೋಟಿ ಭಾರಿ ವೀಕ್ಷಣೆ ಕಂಡಿದೆ. ಯಾವ ಧಾರವಾಹಿ ಹಾಡೂ ಕೂಡಾ ಇಷ್ಟೊಂದು ಜನಪ್ರಿಯವಾಗಿರಲಿಲ್ಲ.

ಟಿಆರ್ ಪಿ ವಿಚಾರದಲ್ಲೂ ದಾಖಲೆ ಬರೆದಿರುವ ಈ ಧಾರಾವಾಹಿಯು ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.  ಈ ಹಾಡಿಗೆ ಜಿ.ಎಸ್. ಸುನಾದ್ ಗೌತಮ್ ಸಂಗೀತ ಸಂಯೋಜನೆ ಮಾಡಿದ್ದು, ನಿನಾದ ನಾಯಕ್, ನಿಹಾಲ್ ತಾವ್ರೊ, ರಜತ್ ಹೆಗಡೆ ಧ್ವನಿಯಾಗಿದ್ದಾರೆ. ಹರ್ಷಪ್ರಿಯ ಭದ್ರಾವತಿ ಅರ್ಥಪೂರ್ಣ ಸಾಹಿತ್ಯ ಬರೆದಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news
Poll
Bharat Biotech's Covaxin vaccine

ಭಾರತದಲ್ಲಿ ಕೋವಿಡ್ -19 ಲಸಿಕೆಯ ಬಳಕೆಗೆ ಆತುರದ ಅನುಮೋದನೆ ನೀಡಲಾಗಿದೆ ಎಂದು ನೀವು ಭಾವಿಸುತ್ತೀರಾ?


Result
ಹೌದು, ಖಂಡಿತವಾಗಿ.
ಇಲ್ಲ. ಇಲ್ಲವೇ ಇಲ್ಲ.
ಹೇಳಲಾಗದು
flipboard facebook twitter whatsapp