ಚೆನ್ನೈನಲ್ಲಿ ನಟಿ ರಮ್ಯಾ ಕೃಷ್ಣ ಕಾರಿನಲ್ಲಿದ್ದ 8 ಲಿಕ್ಕರ್​ ಬಾಟಲಿ, ಎರಡು ಬಿಯರ್ ಕ್ರೇಟ್ ಜಪ್ತಿ ಮಾಡಿದ ಪೊಲೀಸರು

ಹಲವು ಕನ್ನಡ ಚಿತ್ರಗಳಲ್ಲೂ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಅವರ ಕಾರಿನಲ್ಲಿದ್ದ 8 ಲಿಕ್ಕರ್ ಬಾಟಲಿ ಮತ್ತು ಎರಡು ಬಿಯರ್ ಕ್ರೇಟ್ ಬಾಕ್ಸ್ ಗಳನ್ನು ತಮಿಳುನಾಡು ಪೊಲೀಸರು ಶನಿವಾರ ಜಪ್ತಿ ಮಾಡಿದ್ದಾರೆ.
ರಮ್ಯಾ ಕೃಷ್ಣ
ರಮ್ಯಾ ಕೃಷ್ಣ

ಚೆನ್ನೈ: ಹಲವು ಕನ್ನಡ ಚಿತ್ರಗಳಲ್ಲೂ ನಟಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಅವರ ಕಾರಿನಲ್ಲಿದ್ದ 8 ಲಿಕ್ಕರ್ ಬಾಟಲಿ ಮತ್ತು ಎರಡು ಬಿಯರ್ ಕ್ರೇಟ್ ಬಾಕ್ಸ್ ಗಳನ್ನು ತಮಿಳುನಾಡು ಪೊಲೀಸರು ಶನಿವಾರ ಜಪ್ತಿ ಮಾಡಿದ್ದಾರೆ.

ಕೊವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಹೀಗಾಗಿ ಎಂದಿನಂತೆ ಇಸಿಆರ್ ರಸ್ತೆಯ ಚೆಕ್​ಪೋಸ್ಟ್​ನಲ್ಲಿ ಪೊಲೀಸರು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮಹಾಬಲಿಪುರಂನಿಂದ ಬರುತ್ತಿದ್ದ ರಮ್ಯಾ ಕೃಷ್ಣ ಅವರಿಗೆ ಸೇರಿದ ಇನೋವಾ ಕಾರನ್ನು ಸಹ ಪೊಲೀಸರು ಪರಿಶೀಲಿಸಿದ್ದಾರೆ.

ಈ ವೇಳೆ ಕಾರಿನಲ್ಲಿ 96 ಬಿಯರ್​ ಬಾಟಲ್ ಸೇರಿದಂತೆ 8 ಲಿಕ್ಕರ್​ ಬಾಟಲಿ ಸಿಕ್ಕಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನ್ನೂ ಕಾರಿನಲ್ಲಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದ ಕಾರಣಕ್ಕೆ ರಮ್ಯಾ ಕೃಷ್ಣ ಅವರ ಕಾರಿನ ಚಾಲಕ ಸೆಲ್ವಕುಮಾರ್​​ನನ್ನು ಪೊಲೀಸರು ಬಂಧಿಸಿದ್ದಾರೆ. ನಂತರ ಚಾಲಕನನ್ನು ರಮ್ಯಾಕೃಷ್ಣ ಅವರು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com