ಸಿನಿಮಾಟೋಗ್ರಾಫರ್ ಕಣ್ಣನ್ ವಿಧಿವಶ

ದಕ್ಷಿಣ ಭಾರತ ಚಲನ ಚಿತ್ರರಂಗದ ಪ್ರಮುಖ ಛಾಯಾಗ್ರಾಹಕ ಬಿ. ಕಣ್ಣನ್(೬೯) ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ಕಣ್ಣನ್
ಕಣ್ಣನ್

ಚೆನ್ನೈ: ದಕ್ಷಿಣ ಭಾರತ ಚಲನ ಚಿತ್ರರಂಗದ ಪ್ರಮುಖ ಛಾಯಾಗ್ರಾಹಕ ಬಿ. ಕಣ್ಣನ್(೬೯) ಅವರು ಶನಿವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.

ಕಣ್ಣನ್ ನಿಧನಕ್ಕೆ ಸಿನಿಮಾ ರಂಗದ ಹಲವು ಪ್ರಮುಖರು ತೀವ್ರ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಭೀಮ್ ಸಿಂಗ್ ಪುತ್ರರಾಗಿದ್ದ ಕಣ್ಣನ್, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಬಹಳಷ್ಟು ಚಿತ್ರಗಳಿಗೆ ಅವರು ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದರು. ತಮಿಳಿನ ದಿಗ್ಗಜ ನಿರ್ದೇಶಕ ಭಾರತೀ ರಾಜ ಅವರೊಂದಿಗೆ ಸುಮಾರು ೪೦ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಇದರಿಂದಾಗಿ ಅವರನ್ನು ಭಾರತೀ ರಾಜ ಅವರ ಎರಡು ಕಣ್ಣುಗಳು ಎಂದೇ ಕರೆಯುತ್ತಿದ್ದರು. ಇವರಿಬ್ಬರ ಜೊಡಿ ಮೂಡಿಬಂದ ಮೊದಲ ಚಿತ್ರ ನಿಜಲ್ ಗಳ್ ಕಾಗಾ, ಕೊನೆಯ ಚಿತ್ರ ಬೊಮ್ಮಾಲಾಟಮ್.

ಇನ್ನೂ ತೆಲುಗಿನಲ್ಲೂ, ಪಗಡಾಲ ಪಡವ, ಕೊತ್ತ ಜೀವಿತಾಲು, ಸೀತಾಕೋಕಾ ಚಿಲುಕ, ಆರಾಧನ ಚಿತ್ರಗಳಲ್ಲಿ ಛಾಯಾಗ್ರಾಹಕರಾಗಿದ್ದ ಕಣ್ಣನ್ ತಮ್ಮ ಕ್ಯಾಮರಾ ಕೈಚಳಕಕ್ಕೆ ಹೆಸರುವಾಸಿಯಾಗಿದ್ದರು. ನಾಳೆ ಚೆನ್ನೈನಲ್ಲಿ ಕಣ್ಣನ್ ಪಾರ್ಥಿವ ಶರೀರದ ಅಂತ್ಯಕ್ಯಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com